ಮೀರಾ ರೋಡ್ ನಿಂದ ಡಹಾಣು ತನಕದ ಬಂಟ ಭಾಂದವರ ಅಶೋತ್ತರಗಳಿಗೆ ಸ್ಪಂದಿಸಲು 2009 ರಲ್ಲಿ ಸ್ಥಾಪನೆಯದ ಮೀರಾ – ಡಹಾಣು ಬಂಟ್ಸ್ (ರಿ ) ಇದರ 3 ನೇ ವರ್ಷದ ಕ್ರೀಡೋತ್ಸವ – 2025, ಫೆ 09 ರಂದು ಆದಿತ್ಯವಾರ, ಹಳೆ ವಿವಾ ಕಾಲೇಜು ಗ್ರೌಂಡ್ ವಿರಾರ್ ಪಶ್ಚಿಮ ಇಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ಕ್ರೀಡಾಕೂಟದಲ್ಲಿ ಮೀರಾ ರೋಡ್ ನಿಂದ ಡಹಾಣು ತನಕ ಎಲ್ಲಾ ಬಂಟ ಭಾಂದವರಿಗೆ ಭಾಗವಹಿಸಲು ಅವಕಾಶ ಕಲ್ಪಿಸುವ ಸಲುವಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಎಲ್ಲಾ ಕ್ರೀಡಾಳುಗಳಿಗೆ ಕ್ರೀಡೋತ್ಸವಕ್ಕೆ ಆಗಮಿಸಲು ಸುಲಭವಾಗಲು ವಿರಾರ್ ರೈಲ್ವೆ ಸ್ಟೇಷನ್ ನಿಂದ ಬಹಳ ಹತ್ತಿರದಲ್ಲಿ ಇರುವ ವಿಶಾಲವಾದ ಆಟದ ಮೈದಾನ ಹೊಂದಿರುವ ಹಳೆ ವಿವಾ ಕಾಲೇಜು ಸಂಸ್ಥೆಯ ಮೈದಾನದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹಮ್ಮಿಕೊಳ್ಳಲು ನಿರ್ಧರಿಸಿರುತ್ತಾರೆ. ಈ ಕ್ರೀಡಾ ಕೂಟವು ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಎಂ ಹೆಗ್ಡೆ ಯವರ ಅದ್ಯಕ್ಷತೆಯಲ್ಲಿ ಗೌರವಧ್ಯಕ್ಷರಾದ ವಿರಾರ್ ಡಾ.ಶಂಕರ ಬಿ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮುಂಬೈ ಮತ್ತು ಸ್ಥಳೀಯ ಗೌರನ್ವಿತ ಅತಿಥಿಗಳ ಉಪಸ್ಥಿತಿಯಲ್ಲಿ ಬೆಳ್ಳಿಗೆ 8 ಕ್ಕೆ ಪ್ರಾರಂಭ ಗೊಂಡು ಸಂಜೆ 6 ಗಂಟೆ ಗೆ ಸಮಾರೋಪ ಸಮಾರಂಭದೊಂದಿಗೆ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.
ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಂಟ ಸಮುದಾಯದ ನಾಯಕರು ಸ್ಥಳೀಯ ರಾಜಕೀಯ ನೇತಾರರು. ಉದ್ಯಮಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುವರು.
ಈ ಕ್ರೀಡೋತ್ಸವಕ್ಕೆ ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮೀರಾ ಡಹಾಣು ಬಂಟ್ಸ್ ಕ್ರೀಡೋತ್ಸವ- 2025ನ್ನು ಯಶಸ್ವಿ ಗೊಳಿಸಬೇಕಾಗಿ ಗೌರವಧ್ಯಕ್ಷರು ವಿರಾರ್ ಶಂಕರ್ ಶೆಟ್ಟಿ,ಅಧ್ಯಕ್ಷರು ಪ್ರಕಾಶ್ ಹೆಗ್ಡೆ, ಉಪಾಧ್ಯಕ್ಷರಾದ ಶಂಕರ್ ಆಳ್ವ ಕರ್ನೂರು,
ಸಂಚಾಲಕ, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ
ಮುಕೇಶ್ ಶೆಟ್ಟಿ, ಟ್ರಸ್ಟಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ, ಮೀರಾ – ಡಹಾಣು ಬಂಟ್ಸ್ ನ ವಲಯದ ಕಾರ್ಯಧ್ಯಕ್ಷರು, ವಲಯದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಗೂ ಸಂಸ್ಥೆಯ ಗೌರವ ಪ್ರದಾನ ಕಾರ್ಯದರ್ಶಿ ಸುಕೇಶ್ ವಿ ರೈ ತಿಳಿಸುತ್ತಿದ್ದಾರೆ.
