September 6, 2026
Mumbai News Kannada
ಪ್ರಕಟಣೆ

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಜ. 27ಕ್ಕೆ ವಾರ್ಷಿಕ ಮಹೋತ್ಸವದ ಸಂಭ್ರಮ:






ಜೋಗೇಶ್ವರಿ ಪೂರ್ವ ಕ್ರಷ್ಣ ನಗರ,ಪೌರಾಣಿಕ ಹಿನ್ನೆಲೆಯ ಗುಂಪ ಟೇಕ್ಡಿ ಸಮೀಪದ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವಾಸು ನಾಮ ಸಂವತ್ಸರದ ಮಕರ ಮಾಸ 14ನೇ ದಿನವಾದ ಜನವರಿ 27 ಮಂಗಳವಾರದಂದು ವಾರ್ಷಿಕ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಪಾದೂರು ಶ್ರೀ ನರಹರಿ ತಂತ್ರಿಗಳ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.


ಅಂದು ಬೆಳಗ್ಗೆ 8.30ರಿಂದ ಪ್ರಾರ್ಥನೆ, ಸಂಕಲ್ಪ, ಶುದ್ಧ ಪುಣ್ಯಾಹ, ಎಲ್ಲಾ ಪರಿವಾರ ದೇವರುಗಳಿಗೆ ಪಂಚಾಮೃತ ಸಹಿತ ನವಕ ಕಲಶ ಅಭಿಷೇಕ, ಪ್ರಸನ್ನ ಪೂಜೆ, ಹಾಗೂ ಶ್ರೀ ದೇವರಿಗೆ ಪಂಚಾಮೃತ ಸಹಿತ 25 ಕಲಶ ಅಭಿಷೇಕ, ಪ್ರಧಾನ ಹೋಮ, ಪ್ರಸನ್ನ ಪೂಜೆ, ಮಹಾಪೂಜೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಲಿದೆ.
ಮಧ್ಯಾಹ್ನ 2.30ರಿಂದ ಶ್ರೀ ಜಗದಂಬಾ ಯಕ್ಷಗಾನ ಕಲಾಮಂಡಳಿ ಮತ್ತು ಊರಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ‘ಸುಧನ್ವ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಸಂಜೆ 6 ಗಂಟೆಗೆ ಶ್ರೀ ದೇವರ ಉತ್ಸವ ಬಲಿ ಹಾಗೂ ರಾತ್ರಿ 7.30ಕ್ಕೆ ರಂಗಪೂಜೆ, ಮಹಾಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಜರಗಲಿದೆ.

ಆಡಳಿತ ಸಮಿತಿಯ ಅಧ್ಯಕ್ಷ/ಆಡಳಿತದ ಮೊಕ್ತೇಸರ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಟ್ರಸ್ಟಿ /ಉಪಾಧ್ಯಕ್ಷ ಎಚ್. ಬಾಬು ಪೂಜಾರಿ, ಟ್ರಸ್ಟಿ/ಗೌರವ ಕಾರ್ಯದರ್ಶಿ ದೇವದಾಸ್ ಎಸ್. ಸುವರ್ಣ, ಟ್ಟ್ರಸ್ಟಿ /ಕೋಶಾಧಿಕಾರಿ ಡಿ. ಟಿ. ಕುಂದರ್, ಟ್ರಸ್ಟಿಗಳಾದ ಸಂಜೀವ ಪಿ. ಪೂಜಾರಿ, ಎಂ. ಸಿ. ಸುವರ್ಣ, ಜಿ. ಟಿ. ಆಚಾರ್ಯ, ಸುಂದರ್ ಸಿ. ಪೂಜಾರಿ, ಸಂತೋಷ್ ಜೆ. ಶೆಟ್ಟಿ, ಲಕ್ಷ್ಮಣ್ ಸಿ. ಪೂಜಾರಿ, ಶೇಖರ್ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ಜೆ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಸರಸ್ವತಿ ಪೂಜಾರಿ, ಸಂಚಾಲಕಿ ಕಲಾವತಿ ಡಿ. ಪೂಜಾರಿ ಹಾಗೂ ಸೇವಾ ಸಮಿತಿಯ ಸರ್ವ ಸದಸ್ಯರು ಈ ಭಕ್ತಿಪೂರ್ವಕ ಸಮಾರಂಭಕ್ಕೆ ಸಮಸ್ತ ಭಕ್ತಾಭಿಮಾನಿಗಳನ್ನು ಆಹ್ವಾನಿಸಿದ್ದಾರೆ.



Related posts

ಕಾರ್ನಾಡು ಶ್ರೀ ಧರ್ಮಸ್ಥಾನ : ಮಾರ್ಚ್ 08, 09, ಮತ್ತು 10ರಂದು “ವರ್ಷಾವಧಿ ನೇಮೋತ್ಸವ”

Mumbai News Desk

ಜ.10ಕ್ಕೆ ಪುರಭವನದಲ್ಲಿ “ಗರುಡ ಪಂಚಮಿ” 50ರ ಸಂಭ್ರಮ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳರಿಗೆ “ರಂಗ ಕಲಾಬಂಧು” ಬಿರುದು ಪ್ರದಾನ

Mumbai News Desk

ಇಂದು ಕಾಪು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಅವರ ಸಂಸ್ಕರಣೆ

Mumbai News Desk

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯಿಂದ ಮಾ. 23 ಕ್ಕೆ ಅರ್ಜಿ ವಿತರಣೆ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk