32 C
Mumbai
March 7, 2026
Mumbai News Kannada
ಸುದ್ದಿ

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ





ಮುಂಬಯಿ ಪೆ 6.ಕರ್ನಾಟಕದ ಕರಾವಳಿಯ ಮೊಯಾ (ಬೋವಿ) ಸಮಾಜದ ಅಂತರಾಷ್ಟ್ರೀಯ ಮಟ್ಟದ ಏಕೈಕ ಸಂಘಟನೆ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಮಹಾರಾಷ್ಟ್ರ, ಮಾತ್ರವಲ್ಲದೆ ಕರ್ನಾಟಕ ಹಾಗೂ ಕೇರಳದ ಕರಾವಳಿ ಜಿಲ್ಲೆಗಳಲ್ಲಿ  ಸಮಾಜಪರ ಸೇವಾ ನಿರತವಾಗಿದ್ದು ಇದೀಗ ಹೊಸ ವರ್ಷದ ಆರಂಭದಲ್ಲೇ ಚೆನ್ನೈಯಲ್ಲಿ  ಅಧ್ಯಕ್ಷರಾದ ರವಿ ಉಚ್ಚಿಲ್ ಅವರ ತಂಡವು  ಪಿ.ಅರ್. ಎ. ರಾಮಕೃಷ್ಣನ್ ಅವರ ತಂಡದೊಂದಿಗೆ ಜ. 2 ರಂದು ಕಾಕ್ಕುಂ ಕರಂಗಲ್ ಮಹಿಳಾ ವೃದ್ಧಾಶ್ರಮಕ್ಕೆ ಭೇಟಿ ನೀಡಿತು.

ಸಂಸ್ಥೆಯ ಚೆನ್ನೈ ತಂಡವು ಈ ಕೇಂದ್ರದ ನಿರ್ಗತಿಕ ಮಹಿಳೆಯರಿಗೆ ಬೆಂಬಲಿಸಲು ಅಗತ್ಯ ದ ವಸ್ತುಗಳನ್ನು ವಿತರಿಸಿದೆ. ಅಲ್ಲಿನ ಮಹಿಳೆಯರು ಈ ತಂಡಕ್ಕೆ ಆಶೀರ್ವಾದದ ನುಡಿಗಳನ್ನಾಡಿದರು.

ಜ. 4 ರಂದು ಥಾಣೆಯಲ್ಲಿರುವ ನವಜೀವನ ಹಿಂದುಳಿದ ಶಾಲೆಗೆ ಭೇಟಿ ನೀಡುವ ಮೂಲಕ ನಿರ್ಗತಿಕ ವಿದ್ಯಾರ್ಥಿಗಳ ಜೀವನೋಪಾಯಕ್ಕೆ ಅಗತ್ಯ ಆಹಾರ ಮತ್ತು ಬಟ್ಟೆಗಳನ್ನು ವಿತರಿಸಿದರು. ಮಕ್ಕಳು ಕೃತಜ್ಞತೆ ಅರ್ಪಿಸಿದರು. ಈ ಕಾರ್ಯದಲ್ಲಿ ಲಕ್ಷ್ಮೀನಾರಾಯಣ ಮಾತ್ರವಲ್ಲದೆ ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ಮುಖ್ಯ ಸಲಹೆಗಾರ ಈಶ್ವರ್ ಕೆ.  ಐಲ್,  ಸಮಿತಿಯ ಪ್ರಮುಖರಾದ ಪ್ರೀತಿ ಉಚ್ಚಿಲ್, ಚಂದ್ರಕಲಾ ಉಚ್ಚಿಲ್,   ರವೀಂದ್ರ ಬತ್ತೇರಿ, ಸರೋಜ ವಿಟ್ಠಲ್ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.

ಮುಂಬಯಿಯ ಕೋರ್ ಕಮಿಟಿಯು,  ದಾನಿಗಳು ನೀಡಿದ ಮೊತ್ತವನ್ನು ನಿರ್ಗತಿಕ ಹಾಗೂ ಅಸಾಯಕರಿಗಾಗಿ ಉಪಯೋಗಿಸಲು, ವಿಶೇಷವಾಗಿ ಅಗತ್ಯವಿರುವ ಮಕ್ಕಳ ಉನ್ನತ ಶಿಕ್ಷಣ ಕ್ಕಾಗಿ ಸಹಕರಿಸುವ ಅಗತ್ಯವಿದೆ ಎಂಬುದಾಗಿ ನಿರ್ಧರಿಸಿದೆ.



Related posts

ಗೋವಾದ ನೈಟ್ ಕ್ಲಬ್ ನಲ್ಲಿ ಭೀಕರ ಅಗ್ನಿ ದುರಂತ: 23 ಮಂದಿ ಸಾವು

Mumbai News Desk

ಉಡುಪಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

Mumbai News Desk

ಮಂಗಳೂರು – ಸುಬ್ರಮಣ್ಯ ನಡುವೆ ಪ್ಯಾಸೆಂಜರ್ ರೈಲು ಆರಂಭಿಸುವಂತ್ತೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಮನವಿ.

Mumbai News Desk

19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ – 2024

Mumbai News Desk

ಮಂಗಳೂರಿನಲ್ಲಿ ಉದ್ಯಮಿ, ಶ್ರೀಮಂತರಿಗೆ 200 ಕೋಟಿಗೂ ಅಧಿಕ ವಂಚಿಸಿದ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ಡಾನ ಅರೆಸ್ಟ್

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಮುರಳಿ ಕೆ. ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk