ಹಳದಿ ಕುಂಕುಮ ಮಹಿಳೆಯರ ಬದುಕಿನ ಸೌಭಾಗ್ಯದ ಸಂಕೇತ : ವಿಜೇತ ಮಹೇಶ್ ಸುವರ್ಣ
ಚಿತ್ರ ವರದಿ ರಮೇಶ್ ಉದ್ಯಾವರ
ಮಲಾಡ್, ಫೆ.6: ಹಳದಿ ಕುಂಕುಮ ಆರೋಗ್ಯ ವೃದ್ಧಿಯ ಸಂಕೇತವಲ್ಲದೆ ಮಹಿಳೆಯರ ಐಸಿರಿಯ ಸೊಬಗು, ಮನಸ್ಸಿನ ಏಕಾಗ್ರತೆ ಹೆಚಿಸುವ ಶಕ್ತಿ ಇದೆ. ಸನಾತನ ಧರ್ಮದ ಸಂಸ್ಕೃತಿ ಹಿನ್ನೆಲೆಯ ಹಳದಿ ಕುಂಕುಮ ಎಲ್ಲಾ ಮಹಿಳೆಯರ ಬದುಕಿನ ಸೌಭಾಗ್ಯ ದ ಸಂಕೇತ. ಎಲ್ಲಾ ಮಹಿಳೆಯರಿಗೆ ಈ ಭಾಗ್ಯ ಜೀವನ ಪರ್ಯಂತ ಲಭಿಸಲಿ. ನಮ್ಮ ಬದುಕು ಮತ್ತು ಹಿರಿಯರ ಆದರ್ಶ ಸಂಸ್ಕೃತಿ ಸಂಪ್ರದಾಯ ಮಕ್ಕಳಿಗೆ ತಿಳಿಸುವುದು ಆದ್ಯ ಕರ್ತವ್ಯ ಎಂದು ಚೆಂಬೂರು ಕರ್ನಾಟಕ ಹೈಸ್ಕೂಲ್ ಶಾಲಾ ಶಿಕ್ಷಕಿ ವಿಜೇತಾ ಮಹೇಶ್ ಸುವರ್ಣ ಹೇಳಿದರು.
ಫೆ.2ರಂದು ರವಿವಾರ ಮಲಾಡ್ ಜನಕಲ್ಯಾಣ್ ನಗರದ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಸಮೀಪದ ಭೂಮಿ ಪಾರ್ಕ್ ಸ್ಪೇಸ್-1, ಕ್ಲಬ್ ಹೌಸ್ ಹಾಲ್ ನಲ್ಲಿ ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ನೇತೃತ್ವದಲ್ಲಿ ಆಯೋಜಿಸಿದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಯಾವುದೇ ಸಂಘಸಂಸ್ಥೆಯ ಸ್ಥಾನಮಾನ ರಾತ್ರಿ ಬೆಳಗಾಗುವುದರ ಒಳಗೆ ಪ್ರಸಿದ್ಧಿಗೆ ಬರುವುದಿಲ್ಲ ಅದಕ್ಕೆ ಹಲವಾರು ವರ್ಷಗಳ ಪರಿಶ್ರಮ ಬೇಕು. ಮಹಾನಗರದಲ್ಲಿ ಸುದೀರ್ಘ ಅವಧಿಯಲ್ಲಿ ಸಮಾನ ಮನಸ್ಕ ವೇದಿಕೆಯ ಚಿಂತನ ಮಂಥನದಲ್ಲಿ ಬೆಳೆದ ಈ ಸಂಸ್ಥೆ ಪ್ರಸಕ್ತ ಹಾಗೂ ಮಾಜಿ ಅಧ್ಯಕ್ಷರುಗಳು ಕಾರ್ಯಕಾರಿ ಸಮಿತಿ ಸದಸ್ಯರ ಶ್ರಮ ಇದೆ. ಸಾಮಾಜಿಕ ಧಾರ್ಮಿಕ ಶೈಕ್ಷಣಿಕವಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯ ಕೀರ್ತಿಪತಾಕೆ ರಾಜ್ಯ ರಾಷ್ಟ್ರಮಟ್ಟದಲ್ಲಿ ರಾರಾಜಿಸಲಿ ಎಂದು ಹಾರೈಸಿದರು.
ಸದಸ್ಯರನ್ನು ಉದ್ದೇಶಸಿ ಮಾತನಾಡಿದ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತ ವಿ ಭಂಡಾರಿ, ಗಗನ ಪಥದಲ್ಲಿ ಸೂರ್ಯನ ಸಂಚಾರ ರಾಶಿ ಚಕ್ರದಿಂದ ಗುರುತಿಸಲ್ಪಡುತ್ತದೆ. ಸೂರ್ಯನ ಚಲನೆಯಿಂದ ಉಸಿರಾಡುವ ಜೀವಿಗಳಿಗೆ ಇದೊಂದು ಪುಣ್ಯಕಾಲ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯರಾಧನೆ. ಸೂರ್ಯ ಆತ್ಮ ಜಗತ್ತಿನ ಕಣ್ಣು. ಸರ್ವ ವನರಾಶಿ ಪ್ರಕೃತಿ ಬೆಳೆಯಲು ಸೂರ್ಯನೇ ಮೂಲ ಕಾರಣ.ಆ ಪವಿತ್ರ ದೇವರ ದಿವ್ಯ ತೇಜಸ್ಸು ಸಕಲ ಮನಕುಲಕ್ಕೆ ಸಿದ್ಧಿ ಬುದ್ಧಿ ಸಮೃದ್ಧಿ ನೀಡುವುದು. ಇಂತಹ ಪರ್ವಕಾಲದಲ್ಲಿ ಮಾಡಿದ ದಾನ ಧರ್ಮಗಳು ವಿಶೇಷ ಫಲ ನೀಡುವುದು. ಮಹಿಳೆಯರು ಪರಸ್ಪರ ಒಬ್ಬರನ್ನೊಬ್ಬರು ಆದರಿಸಿ ಅರಸಿನ ಕುಂಕುಮ ಜೊತೆಗೆ ಸಿಹಿ ನೀಡಿ ದೀರ್ಘ ಸುಮಂಗಲಕ್ಕೆ ಹರಸುವುದು ಈ ಕಾರ್ಯಕ್ರಮದ ವಿಶೇಷವಾಗಿದೆ. ಅರಿಶಿನ ಕುಂಕುಮ ಸೌಂದರ್ಯ, ಆರೋಗ್ಯ ಲಕ್ಷಣ. ಅರಿಶಿನ ಕುಂಕುಮದಲ್ಲಿ ಅರಸಿನ ಇರುವುದರಿಂದ ಅದು ಮಹತ್ವಪೂರ್ಣವಾಗಿದೆ. ಸಾರ್ವಜನಿಕ ಸಮಾರಂಭದ ಮಂಗಳಕರ ಸಂಕೇತವಾಗಿದೆ. ಸ್ತ್ರೀ ಸ್ವಾತಂತ್ರ್ಯದಿಂದ ಇಂದು ಮಹಿಳೆಯರು ತಾನು ಬಯಸಿದ ಆಸಕ್ತಿ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ತನ್ನ ಭವಿಷ್ಯ ರೂಪಿಸಲು ಸಾಧ್ಯವಾಗಿದೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸಿಗೆ ಉಲ್ಲಾಸ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಂದಿವಿಲಿ ಕನ್ನಡ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದ ಡಿ ಶೆಟ್ಟಿ ಕಾಂದಿವಿಲಿ ಸೈಂಟ್ ಲಾರೆನ್ಸ್ ಹೈಸ್ಕೂಲ್ ನ ಮುಖ್ಯ ಶಿಕ್ಷಕಿ ಸುರೇಖಾ ಎಸ್ ಭಂಡಾರಿ ಮಹಿಳೆಯರ ಸಮಯ ಬದ್ಧ ಚೊಕ್ಕ ಕಾರ್ಯಕ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು.
ಮುತುವರ್ಜಿ ಹಾಗೂ ನಿರಂತರ ಪರಿಶ್ರಮದ ಮೂಲಕ ಚೊಕ್ಕವಾಗಿ ಜರುಗಿದ ಇಂದಿನ ಕಾರ್ಯಕ್ರಮ ಮಹಿಳೆಯರ ಸೌಹಾರ್ದ ಬಂಧುತ್ವಕ್ಕೆ ಸಾಕ್ಷಿಯಾಗಿದೆ. ಸಂಘ ಸಂಸ್ಥೆ ಯಾವತ್ತೂ ವೈಯಕ್ತಿಕವಾಗಿ ಒಬ್ಬರಿಂದಲೇ ನಡೆಯುವ ಸಂಸ್ಥೆಯಲ್ಲ. ಒಗ್ಗಟ್ಟು ಎಂಬ ಶಬ್ದಕ್ಕೆ ಗೌರವ ನೀಡಿ ಕಾರ್ಯನಿರ್ವಹಿಸಿದರೆ ಎಲ್ಲವೂ ಯಶಸ್ವಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮಲಾಡ್ ಕನ್ನಡ ಸಂಘದ ಇತಿಹಾಸ ಸಾಗಿದೆ.ಕಾರ್ಯಾಧ್ಯಕ್ಷೆ ಲಲಿತ ಭಂಡಾರಿ ಅವರ ನೇತೃತ್ವದಲ್ಲಿ ಒಂದು ಉತ್ತಮ ಕಾರ್ಯಕ್ರಮ ಮೂಡಿಬಂದಿದೆ. ಹಳದಿ ಕುಂಕುಮಕ್ಕೆ ವೈಜ್ಞಾನಿಕ ಪುರಾವೆಗಳಿವೆ . ಕೆಂಪು ಬಣ್ಣ ಧೈರ್ಯ ಹಳದಿ ಬಣ್ಣತಂಪು ಅದು ಧೈರ್ಯವನ್ನು ಕರ್ತವ್ಯನ್ನು ಹತೋಟಿಯಲ್ಲಿಡ್ಡತ್ತದೆ. ಗೌರವದ ಸಂಕೇತದ ಹಳದಿ ಕುಂಕುಮ ಧಾರ್ಮಿಕವಾಗಿಯೂ ಆರೋಗ್ಯವಾಗಿ ವಿಶೇಷ ಮಹತ್ವ ಪಡೆದಿದೆ ಅಲ್ಲದೆ ಭಾವೈಕ್ಯ ಸೌದಾರ್ಹದ ಪ್ರತೀಕ ವಾಗಿದೆ. ಭವಿಷ್ಯದಲ್ಲಿ ಸಂಘದ ಸದಸ್ಯರೆಲ್ಲರೂ ತಮ್ಮ ಒಗ್ಗಟ್ಟನ್ನು ಇನ್ನಷ್ಟು ಬಲಪಡಿಸಿ ಸಂಘದ ವತಿಯಿಂದ ನಮ್ಮಿಂದ ಇನ್ನಷ್ಟು ಸಮಾಜ ಸೇವೆ ಕಾರ್ಯಕ್ರಮ ಜರಗುವಂತಾಗಲು ಸಹಕಾರ ಸಿಗಲಿ.
@ ಎಡ್ವಕೇಟ್ ಜಗದೀಶ್ ಎಸ್ ಹೆಗ್ಡೆ, ಅಧ್ಯಕ್ಷರು, ಮಲಾಡ್ ಕನ್ನಡ ಸಂಘ
ಕಾರ್ಯಕ್ರಮದ ಪ್ರಾರಂಭದಲ್ಲಿ ವೀಕ್ಷಿಕ ಪೂಜಾರಿ ಸ್ವಾಗತ ನೃತ್ಯದ ಬಳಿಕ ಮನೋರಂಜನೆ ಕಾರ್ಯಕ್ರಮದ ಅಂಗವಾಗಿ ಮಹಿಳಾ ಸದಸ್ಯರಿಂದ ಹಾಡು ಕುಣಿತ ಭಜನೆ ಜರುಗಿತು ಆ ಬಳಿಕ ಅತಿಥಿ ಗಣ್ಯರು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಸಾರಿಕಾ ಆರ್ ಶೆಟ್ಟಿ ಮಹಿಳಾ ವಿಭಾಗದ ಕೋಶಾಧಿಕಾರಿ ವಿಜಯಾ ಎಸ್ ಪೂಜಾರಿ ಅತಿಥಿ ಗಣ್ಯರ ನ್ನು ಪರಿಚಯಿಸಿದರು ಬಳಿಕ ಗಣ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಅಶಾಲತಾ ಎಸ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಣಾಕ್ಷಿ ಪೂಜಾರಿ ಅರಸಿನ ಕುಂಕುಮದ ಮಹತ್ವ ವಿವರಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮಲ್ಲಿಕಾ ಡಿ ರೈ ಕಾರ್ಯಕ್ರಮ ನಿರೂಪಿಸಿದರು ಜೊತೆ ಕಾರ್ಯದರ್ಶಿ ಶಾರದಾ ಜಿ ಪೂಜಾರಿ ವಂದಿಸಿದರು ಸಂಘದ ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಎಸ್ ಸಾಲ್ಯಾನ್ ಸದಸ್ಯತನ ನೊಂದಣಿ ಕಾರ್ಯಾಧ್ಯಕ್ಷ ಶಂಕರ್ ಆರ್ ಶೆಟ್ಟಿ ಸದಸ್ಯರಾದ ಸತೀಶ್ ಶೆಟ್ಟಿ ಸುರೇಂದ್ರ ಪೂಜಾರಿ ಸುಧಾಕರ್ ಶೆಟ್ಟಿ, ಯಶೋದಾ ಅಮೀನ್ ಇನ್ನಿತರ ಸದಸ್ಯರು ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.