ಶ್ರೀ ನಿತ್ಯಾನಂದರು ವಿಶ್ವ ಕಂಡ ಶ್ರೇಷ್ಠ ಸಾಧಕರು : ಸಾಣೂರು ಸಾತಿಂಜ ಜನಾರ್ದನ ಭಟ್
ಚಿತ್ರ, ವರದಿ: ರಮೇಶ್ ಉದ್ಯಾವರ
ಮೀರಾರೋಡ್, ಫೆ. 6: ನಿತ್ಯಾನಂದ ಸೇವಾ ಸಂಸ್ಥಾ ಮೀರಾ-ಭಾಯಂದರ್ ಇದರ 16ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆ.1 ರಂದು ರಾತ್ರಿ ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ ಶ್ರೀ ಕ್ಷೇತ್ರ ಗಣೇಶಪುರಿ ಪಾದಯತ್ರೆಯು ಮೀರಾರೋಡ್ ಸಿಲ್ವರ್ ಪಾರ್ಕ್ ಆವರಣದಲ್ಲಿರುವ ಶ್ರೀ ಜೈ ಗಣೇಶ್ ಅಂಬೆ ಮಾತಾ ಮಂದಿರದಿಂದ ಪ್ರಾರಂಭ ಗೊಂಡಿತು.
ಈ ಸಂದರ್ಭದಲ್ಲಿ ಭಕ್ತರಿಗೆ ಶುಭಕೋರಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ ಇಲ್ಲಿನ ಪ್ರಧಾನ ಅರ್ಚಕರಾದ ಸಾಣೂರು ಸ್ವಾತಿಂಜ ಜನಾರ್ಧನ ಭಟ್ ಮಾತನಾಡಿ ಹೇಳಿದ್ದನ್ನೇ ಮಾಡು, ಮಾಡಿದ್ದನೇ ಹೇಳು ಎನ್ನುವ ಪರಬ್ರಹ್ಮ ಸ್ವರೂಪಿ ಅವಧೂತ ಭಗವಾನ್ ನಿತ್ಯಾನಂದರು ವಿಶ್ವ ಕಂಡ ಶ್ರೇಷ್ಠ ಸಾಧಕರು.ಭಕ್ತರಿಂದ ಏನನ್ನೂ ಅಪೇಕ್ಷಿಸಿದ ಅವರು ಮಾತ -ಪಿತರ ಸೇವೆಯಿಂದ ಭಗವಂತನ ಸಾನ್ನಿಧ್ಯ ಪಡೆಯಲು ಸಾಧ್ಯ ಎಂದು ಸಾರಿದರು. ಅವರ ತತ್ವಾದರ್ಶಗಳನ್ನು ಅನುಷ್ಠಾನಗೊಳಿಸುವುದು ಭಕ್ತರು ಆರ್ಪಿಸುವ ಕಾಣಿಕೆಯಾಗಿದೆ. ಗಣೇಶ್ ಪುರಿಯು ಇದೀಗ ದೇಶ ವಿದೇಶದ ಭಕ್ತರನ್ನು ಆಕರ್ಷಿಸುವ ಆಧ್ಯಾತ್ಮಿಕ ತಾಣವಾಗಿದೆ ಎಂದು ಹೇಳಿ 16 ನೇ ವಾರ್ಷಿಕ ಗಣೇಶ ಪುರಿ ಪಾದಯಾತ್ರೆ ಸರ್ವ ಭಕ್ತ ರಿಗೆ ಶುಭ ಹಾರೈಸಿದರು.
ಗೌರವ ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಅಮಾಸ್ಯೆಬೈಲು ಮಾತನಾಡಿ ಪಾದಯಾತ್ರೆಯ ರೂಪು ರೇಷೆಗಳ ಬಗ್ಗೆ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಗೋಪಾಲಕೃಷ್ಣ ಜಿ. ಗಾಣಿಗ ಕಳೆದ 15ವರ್ಷಗಳಿಂದ ಇಂದಿನ ವರೆಗೆ ಪಾದಯಾತ್ರೆಯ ಭಕ್ತರಿಗೆ ಊಟದ ವ್ಯವಸ್ಥೆಯನ್ನು ವಿರಾರ್ – ಗಣೇಶ್ ಪುರಿ ಕ್ರಾಸ್ ನಲ್ಲಿರುವ ಶಿವಾನಿ ಹೋಟೇಲಿನ ಮಾಲಿಕರಾದ ಹರೀಶ್ ಭಂಡಾರಿ ಅವರು ನೀಡಿ ಸಹಕರಿಸುತ್ತಿದ್ದು, ಲಘು ಉಪಾಹಾರ , ಉಚಿತ ಬಸ್ಸಿನ ವ್ಯವಸ್ಥೆಯನ್ನು ದಾನಿಗಳ ನೆರವಿನಿಂದ ಕಲ್ಪಿಸಲಾಗಿದೆ ಎಂದು ಹೇಳಿದ ಅವರು ಪಾದಯಾತ್ರೆ ಸೇವೆಗೆ ಸಹಕರಿಸಿದವರಿಗೆ ಕೃತಜ್ಞೆತೆ ಸಲ್ಲಿಸಿದರು.
ಆರಂಭದಲ್ಲಿ ಸದಸ್ಯರಿಂದ ಭಜನೆ, ಗುರುಪೂಜೆ ಹಾಗೂ ಚಾಮುಂಡೇಶ್ವರಿ ಸನ್ನಿಧಿಯ ಲಕ್ಷ್ಮಣ್ ಶೆಟ್ಟಿಯವರಿಂದ ಮಹಾಆರತಿ ನಡೆಯಿತು. ನಾರಾಯಣ ಶೆಟ್ಟಿ ಪೂಜಾ ಕೈಂಕರ್ಯ ದಲ್ಲಿ ಸಹಕರಿಸಿದರು 9 ಗಂಟೆಗೆ ಹೊರಟ ಪಾದಯಾತ್ರೆಯಲ್ಲಿ ಸಮಾರು 340 ಮಂದಿ ಭಕ್ತರು ಪಾಲ್ಗೊಂಡು ಬೆಳಗ್ಗಿನ ಆರತಿ ಹಾಗೂ ಪೂಜೆಗೆ ಗಣೇಶ್ ಪುರಿ ತಲುಪಿದ್ದರು
ಶಿವರಾಮ್ ಶೆಟ್ಟಿ ಡೆಲ್ಟಾ ವೈನ್ಸ್ , ಬಂಟ್ಸ್ ಫೋರಮ್ ಮೀರಾಭಾಯಂದರಿನ ಅದ್ಯಕ್ಷ ಉದಯ ಎಮ್.ಶೆಟ್ಟಿ ಮಲಾರ್ ಬೀಡು, ಉಪಾಧ್ಯಕ್ಷರುಗಳಾದ ದಿವಾಕರ್ ಶೆಟ್ಟಿ ಶಿರ್ಲಾಲ್ ಮತ್ತು ಹರ್ಷಕುಮಾರ್ ಡಿ. ಶೆಟ್ಟಿ ಪಾಂಗಾಳ,ಯುವ ರಾಜಕೀಯ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಸುಂದರ್ ಶೆಟ್ಟಿ ಕುಬೇರ ಹೋಟೇಲ್ ಭಾಯಂದರ್ ಪಶ್ಚಿಮ,ವಸಾಯಿ ಸಾಯಿ ರತ್ನಾ ಹೋಟೇಲಿನ ಮಧುಕರ್ ಶೆಟ್ಟಿ, ಜಯಪ್ರಕಾಶ್ ಆರ್.ಭಂಡಾರಿ ಶ್ರೀನಿಧಿ ಹೋಟೆಲ್ ಭಾಯಂದರ್ ಪಶ್ಚಿಮ, ಪತ್ರಕರ್ತ ರಮೇಶ್ ಅಮೀನ್ , ಡಾ.ರವಿರಾಜ್ ಸುವರ್ಣ, ಮೀರಾಭಾಯಂದರ್ ಹೋಟೆಲ್ಸ್ ಅಸೋಸಿಯೇಶನಿನ ಮಾಜಿ ಅಧ್ಯಕ್ಷ ಮಧುಕರ್ ಕೆ.ಶೆಟ್ಟಿ, ಬಂಟ್ಸ್ ಫೋರಮ್ ಮೀರಾಭಾಯಂದರಿನ ಮಾಜಿ ಅಧ್ಯಕ್ಷರುಗಳಾದ ಬೆಳ್ಳಿಪಾಡಿ ಸಂತೋಷ್ ರೈ ಮತ್ತು ಇನ್ನ ಚಂದ್ರಹಾಸ್ ಕೆ.ಶೆಟ್ಟಿ, ಮಾಜಿ ಕೋಶಾಧಿಕಾರಿ ರಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಹೋಟೆಲ್ ಚಿರಂಜೀವಿ , ಸತೀಶ್ ಶೆಟ್ಟಿ ಸರ್ವೋದಯ ಬೋರಿಂಗ್, ಅನಿಲ್ ಶೆಟ್ಟಿ ಎಲ್ಲೂರು ಒಡಿಪರಗುತ್ತು ಮತ್ತು ಹರೀಶ್ ಶೆಟ್ಟಿ ಕಾಪು-ಹೋಟೆಲ್ ಸಾಯಿ ಪ್ರೈಡ್, ಪ್ರಸಾದ್ ಶೆಟ್ಟಿ ನೀರಬೖಲೂರು, ಹರೀಶ್ ಸಾಲ್ಯಾನ್ ಇಂದ್ರಲೋಕ ಹಾಗೂ ಪರಿಸರದ ಹೋಟೇಲು ಮಾಲಕರು, ಉದ್ಯಮಿಗಳು ಪಾದಯಾತ್ರೆಗೆ ಸಹಕರಿಸಿದ್ದರು.
ಸಂಸ್ಥೆಯ ಸಂಚಾಲಕರಾದ ಕುಕ್ಕುಂದೂರು ಆನಂದ್ ಎನ್ ಶೆಟ್ಟಿ, ಅದ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ, ಗೌರವಾಧ್ಯಕ್ಷ ಮಹಾಬಲ ಸಮಾನಿ, ಉಪಾಧ್ಯಕ್ಷರುಗಳಾದ ವಸಂತಿ ಎಸ್. ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ ,ಗೌ. ಕಾರ್ಯದರ್ಶಿ ಸೀತಾರಾಮ ಸಿ. ಶೆಟ್ಟಿ ಅಮಾವಾಸ್ಯೆ ಬೈಲು, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ , ಜೊತೆ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು, ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಜಯಶ್ರೀ ಬಿ. ಶೆಟ್ಟಿ, ಕಾರ್ಯದರ್ಶಿ ಗೀತಾ ಸಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಎಸ್.ಆರ್. ಶೆಟ್ಟಿ ,ಮುಖ್ಯ ಸಲಹೆಗಾರ ಗುಣಪಾಲ್ ಉಡುಪಿ, ಸಲಹೆಗಾರರಾದ ನಾರಾಯಣ ಶೆಟ್ಟಿ, ಭಜನಾ ಕಮಿಟಿ ಕಾರ್ಯಾಧ್ಯಕ್ಷೆ ಲತಾ ಪುತ್ರನ್, ಸ್ಪೋರ್ಟ್ಸ್ ಕಮಿಟಿ ಕಾರ್ಯಾಧ್ಯಕ್ಷೆ ಶೈಲಜಾ ಶೆಟ್ಟಿ, ಪ್ರಸಾದ್ ಹೆಗ್ಡೆ, ವಿನಯ್ ಎನ್. ಶೆಟ್ಟಿ , ಸುಜಾತಾ ಶೆಟ್ಟಿ ,ಸುಜಾತಾ ಕೋಟ್ಯಾನ್ ಹ್ಯೂಮಾನ್ ರೈಟ್ಸ್ , ಸುಜಯ ಶೆಟ್ಟಿ, ಶಿರ್ವ ಪ್ರವೀಣ್ ಶೆಟ್ಟಿ, ಗಣೇಶ್ ಅಂಚನ್ ,ಸುರೇಶ್ ಶೆಟ್ಟಿ ಕುತ್ತಾರಗುತ್ತು, ಪ್ರವೀಣ್ ಕರಾವಳಿ ಸೌಂಡ್ಸ್, ನಾರಾಯಣ ಅಂಚನ್, ಪದ್ಮನಾಭ ಆರ್.ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದು ಪಾದಯಾತ್ರೆಯ ಯಶಸ್ಸಿಗೆ ಸಹಕರಿಸಿದ್ದರು
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಭಜನ ಮಂಡಳಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಮಹಾಮಂಡಲದ ಸ್ಥಾಪಕಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.