July 23, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್‌ನ ಬಾಂದ್ರ ಪೂರ್ವ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮದ ಆಚರಣೆ







ಮುಂಬೈ: ದೇಶದ ಪ್ರಮುಖ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಬ್ಯಾಂಕ್ (ಮುಂಬೈ) ಲಿಮಿಟೆಡ್‌ನ ಬಾಂದ್ರ ಪೂರ್ವ ಶಾಖೆಯು, ಇತ್ತೀಚೆಗೆ ತನ್ನ 47ನೇ ಸಂಸ್ಥಾಪನಾ ದಿನವನ್ನು ವಿಜೃಂಭಣೆಯಿಂದ ಆಚರಿಸಿತು. ಕಲಾ ನಗರದ ಗುರುನಾನಕ್ ಹಾಸ್ಪಿಟಲ್ ಸಮೀಪದಲ್ಲಿರುವ ಈ ಶಾಖೆಯು, ತನ್ನ ನಿರಂತರ ಯಶಸ್ಸಿಗೆ ಕಾರಣರಾದ ತನ್ನ ಗ್ರಾಹಕರು, ಹಿತೈಷಿಗಳು ಮತ್ತು ಗಣ್ಯರನ್ನು ಸತ್ಕರಿಸಿ ಕೃತಜ್ಞತೆ ಸಲ್ಲಿಸಿತು.

​ಈ ಸಂದರ್ಭದಲ್ಲಿ, ಬ್ಯಾಂಕಿನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಉದ್ಯಮಿಗಳು ಹಾಗೂ ಗಣ್ಯರಾದ ಐಕಳ ಗುಣಪಾಲ ಶೆಟ್ಟಿ, ಕುಮಾರ ಬಂಗೇರ, ದೇವೇಂದ್ರ ಬಂಗೇರ, ಸಿ. ಎಂ. ಪೂಜಾರಿ, ವಸಂತ ಪೂಜಾರಿ, ರಾಜೇಶ್ ಶಿರಾಲ್, ಉಮೇಶ್ ಕಾಪು, ಶ್ರೀಧರ್ ಪೂಜಾರಿ, ಮೊಹಮ್ಮದ್ ರೌಫ್ ಖುರೇಶಿ, ಗೌತಮ್ ಡೋಂಗ್ರೇ, ಚಿರಾಗ್ ಭಟ್, ಮಕರಂದ್ ಬಪಾರ್ಡೆಕರ್, ಮತ್ತು ಸುರೇಂದ್ರ ತಿರೋಡ್ಕರ್ ಅವರು ಕೇಕ್ ಕತ್ತರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಬಂಧಕರು ಮತ್ತು ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿ, ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

​ಅತಿಥಿ ರಾಜೇಶ್ ಶಿರಾಲ್ ಮಾತನಾಡಿ “ನಾನು ಭಾರತ್ ಬ್ಯಾಂಕ್ ನಿಂದ ಗ್ರಹ ಸಾಲ ಪಡೆದಿದ್ದು, ಬಹಳ ಕಡಿಮೆ ಸಮಯದಲ್ಲಿ ಇದು ಸಾಧ್ಯವಾಯಿತು. ಬ್ಯಾಂಕ್ ನ ಸೇವೆಯಿಂದ ಸಂತಸವಾಗಿದೆ, ಎನ್ನುತ್ತಾ ಬ್ಯಾಂಕ್ ನ ಬಗ್ಗೆ ತಾನು ರಚಿಸಿದ ಹಾಡನ್ನು ವಾಚಿಸಿದರು.
ಇನೋರ್ವ ಅತಿಥಿ, ಚಾರಿಟೇಬಲ್ ಟ್ರಸ್ಟ್ ನ್ನು ಮುನ್ನಡೇಸುತ್ತಿರುವ ಗೌತಮ್ ಡೋಂಗ್ರೆ ಶುಭ ಕೋರುತ್ತಾ “ನನ್ನನು ಬ್ಯಾಂಕ್ ನ ಪ್ರತಿಷ್ಟಿತ ಗ್ರಾಹಕರಾದ ಬೀನಾ ತ್ರಿವೇದಿ ಅವರ ಮೂಲಕ ಭಾರತ್ ಬ್ಯಾಂಕ್ ನೊಂದಿಗೆ ವ್ಯವಹಾರ ಆರಂಭಿಸಿದೆ. ನಮ್ಮ ಟ್ರಸ್ಟಿನ ಸುವರ್ಣ ಮಹೋತ್ಸವ ಸಂಧರ್ಭ ಬ್ಯಾಂಕ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿತ್ತು. ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ವಿಶೇಷ ಬಡ್ಡಿ ದರದಲ್ಲಿ ಭಾರತ ವಿಶ್ವಾಸ್
ಆರಂಭಿಸಿದಾಗ ರೂಪಾಯಿ ಒಂದು ಲಕ್ಷದ ಚೆಕ್ ಠೇವಣಿ ಇರಿಸಿದ್ದೆ. ಶಾಖಾ ಮುಖ್ಯಸ್ಥ ದೀಪಕ್ ಪ್ರಭು ಹಾಗೂ ಉಪ ಮುಖ್ಯಸ್ಥ ಸುರೇಂದ್ರ ಜೈನ್ ಮತ್ತು ಇಲ್ಲಿಯ ಸಿಬಂದಿ ವರ್ಗ ಸದಾ ಸಹಕರಿಸುತ್ತಾರೆ ಎಂದರು.
ಉದ್ಯಮಿ, ಕಳೆದ 25 ವರ್ಷಗಳೊಂದಿಗೆ ಬ್ಯಾಂಕಿನೊಂದಿಗೆ ವ್ಯವಹರಿಸುತ್ತಿರುವ ಐಕಳ ಗುಣಪಾಲ್ ಶೆಟ್ಟಿ ತನ್ನ ಅಭಿಪ್ರಾಯ ತಿಳಿಸುತ್ತಾ ” ನಾನು ತಾಯ್ನಾಡಿನಿಂದ ಮುಂಬೈಗೆ ಬಂದ ಬಳಿಕ ಹೋಟೆಲ್ ಉದ್ಯಮ ಆರಂಬಿಸಲು ಭಾರತ್ ಬ್ಯಾಂಕ್ ನಿಂದ ಸಾಲ ಪಡೆದಿದ್ದೆ, ಈಗ ಉದ್ಯಮ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಈ ಶಾಖೆಯ ಪ್ರಸ್ತುತ ಪ್ರಬಂಧಕ ದೀಪಕ್ ಪ್ರಭು ಮತ್ತು ಹಿಂದಿನ ಎಲ್ಲಾ ಪ್ರಬಂಧಕರು ನನಗೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ, ಅದೇ ರೀತಿ ಇಲ್ಲಿಯ ಸಿಬ್ಬಂದಿ ವರ್ಗ ಕೂಡ ಯಾವಾಗಲೂ ಗ್ರಾಹಕರಿಗೆ ಸಹಕಾರ ನೀಡುತ್ತಿದ್ದು, ಶಾಖೆಗೆ ಬರಲು ಸಂತಸವಾಗುತ್ತದೆ. ಇದು ನಮ್ಮ ಮನೆಯ ಬ್ಯಾಂಕ್ ಎಂಬ ಭಾವನೆ ಬರುತ್ತದೆ ಎಂದು ನುಡಿದರು.
ಕಳೆದ 38 ವರ್ಷಗಳಿಂದ ಬ್ಯಾಂಕಿನೊಂದಿಗೆ ವ್ಯವಹಾರ ಮಾಡುತ್ತಿರುವ ಶ್ರೀಧರ್ ಪೂಜಾರಿ ಮಾತನಾಡುತ್ತಾ ” ನನ್ನ ಪ್ರಾರಂಭದ ದಿನದಲ್ಲಿ ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದು, ಭಾರತ್ ಬ್ಯಾಂಕ್ ನಿಂದ ಸಾಲ ತೆಗೆದ ಬಳಿಕ ನನ್ನ ಉದ್ಯಮ ಬೆಳೆಯಿತು . ಇಂದು ನನ್ನ ಉದ್ಯಮದಲ್ಲಿ ಬೆಳೆಯಲು ಭಾರತ್ ಬ್ಯಾಂಕ್ ಕಾರಣ ಎಂದರು.
ಇನ್ನೋರ್ವ ಅತಿಥಿ ಜನಾರ್ಧನ್ ಸುವರ್ಣ ಮಾತನಾಡುತ್ತಾ ” ಕಳೆದ 40 ವರ್ಷಗಳಿಂದ ಬ್ಯಾಂಕಿನೊಂದಿಗೆ ಆರ್ಥಿಕ ವ್ಯವಹಾರ ಮಾಡುತ್ತಿದ್ದು, ಬ್ಯಾಂಕಿನ ಗುಣ ಮಟ್ಟದ ಸೇವೆ,ಸೌಲಭ್ಯ ಶ್ಲಾಘನೀಯ.
ಇಂದಿಗೂ ನನ್ನ ಖಾತೆ ಭಾರತ್ ಬ್ಯಾಂಕ್ ಅಲ್ಲದೆ ಇತರ ಯುವುದೇ ಬ್ಯಾಂಕ್ ನಲ್ಲಿ ಇಲ್ಲ ಎಂದು ಶುಭ ಕೋರಿದರು.
ಗ್ರಾಹಕರಾದ ಸಲೀಲ್ ರಾವ್ ಶುಭ ಕೋರುತ್ತಾ “ನನ್ನ ತಂದೆ ನನಗೆ ಭಾರತ್ ಬ್ಯಾಂಕ್ ನಲ್ಲಿ ಖಾತೆ ತೆರೆದು ಆರ್ಥಿಕ ವ್ಯವಹಾರ ಮಾಡುವಂತೆ ಒತ್ತಾಯಿಸಿದರು.ನನ್ನ ತಂದೆಯ ನಿರ್ಧಾರ ಸರಿಯಾಗಿತ್ತು. ಭಾರತ್ ಬ್ಯಾಂಕ್ ನ ಸೇವೆ ಉನ್ನತ ಮಟ್ಟದಾಗಿದ್ದು, ಇತರ ಬ್ಯಾಂಕ್ ನಲ್ಲಿ ಇದ್ದ, ಠೇವಣಿಯನ್ನು ಭಾರತ್ ಬ್ಯಾಂಕ್ ನಲ್ಲಿ ಇರಿಸಿದ್ದು, ಶಾಖೆಯ ಪ್ರಬಂಧಕ ಉಪ ಪ್ರಬಂಧಕರಿಗೆ, ಎಲ್ಲಾ ಸಿಬಂದಿ ವರ್ಗಕ್ಕೆ ನನ್ನ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ಮೋಹನ್ದಾಸ್ ಜಿ ಪೂಜಾರಿ ಅವರೂ ಭಾಗವಹಿಸಿದ್ದರು. ಬ್ಯಾಂಕಿನ ಪ್ರತಿಷ್ಠಿತ ಗ್ರಾಹಕರಾದ ಜನಾರ್ಧನ್ ಸುವರ್ಣ, ಸಂಜೀವ್ ಜಾಡಲ್, ಬೀನಾ ತ್ರಿವೇದಿ, ರಾಧಾಕೃಷ್ಣನ್ ಅಂಚನ್, ಸಲೀಲ್ ರಾವ್, ಕೃಷ್ಣ ಪೂಜಾರಿ, ಪ್ರಭಾಕರ ಶೆಟ್ಟಿ, ಮತ್ತು ಸೆಲ್ವರಾಜ್ ಅವರು ಈ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾದರು.

​ಈ ಸಂದರ್ಭದಲ್ಲಿ ಮಾತನಾಡಿದ ಶಾಖೆಯ ಮುಖ್ಯಸ್ಥ ದೀಪಕ್ ಎಂ. ಪ್ರಭು, ಆಗಮಿಸಿದ ಎಲ್ಲಾ ಗಣ್ಯರು ಮತ್ತು ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಜೊತೆಗೆ, ಮಾರ್ಚ್ 2026ಕ್ಕೆ ಶಾಖೆಯು 30 ವರ್ಷ ಪೂರೈಸಲಿದೆ ಎಂದು ತಿಳಿಸಿದರು. ಈ ಮಹತ್ವದ ಸಂದರ್ಭದ ನೆನಪಿಗಾಗಿ, 200 ಕೋಟಿ ರೂಪಾಯಿಗಳ ವ್ಯವಹಾರವನ್ನು ತಲುಪುವ ಗುರಿಯನ್ನು ಹೊಂದಿದ್ದು, ಈ ಗುರಿ ಸಾಧಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ವಿನಂತಿಸಿದರು.

​ಶಾಖೆಯ ಉಪಮುಖ್ಯಸ್ಥ ಸುದೀರ್ ಟಿ. ಕುಮಾರ್ ಅವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸಿಬ್ಬಂದಿಗಳಾದ ವಿಜಿತ್ ಕುಮಾರ್ ಕೋಟ್ಯಾನ್, ಕೌಶಲ್ ಅಂಚನ್, ನಮೃತ ಸಾಲ್ಯಾನ್, ಸುರೇಂದ್ರ ಜೈನ್, ಶ್ವಾತ ಪೂಜಾರಿ, ಮಯೂರಿ ಅಂಬ್ರೆ, ಸಂತೋಷ್ ಪೂಜಾರಿ, ಮತ್ತು ಇಶಾ ಭಂಡಾರಿ ಹಾಗೂ ಬಿ. ಡಿ. ಡಿ. ಏಜೆಂಟ್ ಹರೀಶ್ ಬಿ. ಪೂಜಾರಿ ಅವರು ಈ ಸಂಭ್ರಮದ ಆಚರಣೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.



Related posts

ಮುಂಬಯಿಯ ಪ್ರಥಮ ಭೂಗತ ಮೆಟ್ರೋ 3ರ ಮೊದಲ ಹಂತ ಶೀಘ್ರವೇ ಕಾರ್ಯರಂಭ

Mumbai News Desk

‘ಡೊಂಬಿವಲಿಯ ಓಂಕಾರ ಕೇಂಬ್ರಿಜ್ ಇಂಟರ್ ನ್ಯಾಸನಲ್ ಶಾಲೆಗೆ ವಿಜ್ಞಾನ ಸ್ಪರ್ಧೆಯಲ್ಲಿ ಪಶ್ಚಿಮ ಭಾರತದಲ್ಲಿ OCIS ಮೊದಲ ಸ್ಥಾನ’

Mumbai News Desk

ಮುಂಬಯಿ: ಬಿಲ್ಲವರ ಅಸೋಸಿಯೇಷನ್ ವತಿಯಿಂದ ಸಾಹಿತ್ಯ, ಯಕ್ಷಗಾನ ಪ್ರಶಸ್ತಿ ಪ್ರದಾನ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಮುಂಬಯಿಯಲ್ಲಿ ಮೊಹಮ್ಮದ್ ಗೌಸ್‌ ನೇತೃತ್ವದ ಯಕ್ಷಗಾನ ಪ್ರವಾಸಕ್ಕೆ ಚಾಲನೆ

Mumbai News Desk

ದಿ. ಕರ್ನಾಟಕ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ 28ನೇ ವಾರ್ಷಿಕ ಮಹಾಸಭೆ

Mumbai News Desk