April 2, 2025
ಸುದ್ದಿ

ಸಂಸದ ಕೋಟ ಅವರ ಅವಿರತ ಪ್ರಯತ್ನದ ಫಲ :ಫೆ. 17ರಿಂದ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು ಅತ್ಯಾಧುನಿಕ ತಂತ್ರಜ್ಞಾನದ ಎಲ್ಎಚ್ ಬಿ ಕೋಚ್ ಮೂಲಕ ಪ್ರಯಾಣ

ಕರಾವಳಿ ಕರ್ನಾಟಕ ಹಾಗೂ ಮುಂಬೈ ನ ” ಮತ್ಸ್ಯಗಂಧ ಎಕ್ಸ್‌ಪ್ರೆಸ್” ರೈಲು ಈ ಭಾಗದ ರೈಲ್ವೆ ಪ್ರಯಾಣಿಕರಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿವೆ. ಅತಿಹೆಚ್ಚು ಪ್ರಯಾಣಿಕರನ್ನು ಒಯ್ಯುವ ಈ ರೈಲು ಭಾಗಶಃ ಶಿಥಿಲಾವಸ್ಥೆಗೆ ಬಂದಿದ್ದು ಅನೇಕ ಪ್ರಯಾಣಿಕರು ಈ ಬಗ್ಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಲಹೆ,ಮನವಿ ಮಾಡಿದ್ದು,. ಈ ಎಲ್ಲಾ ಸಲಹೆ ಹಾಗೂ ಮನವಿಯನ್ನು, ಗೌರವಾನ್ವಿತ ಕೇಂದ್ರ ರೈಲ್ವೆ ಇಲಾಖೆಯ ಸಚಿವರುಗಳಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಶ್ರೀ ವಿ.ಸೋಮಣ್ಣ ರವರ ಗಮನಕ್ಕೆ ಕೋಟ ಅವರು ತಂದಿದ್ದರು. ಕೋಟ ಅವರ ಮನವಿಯನ್ನು ತಕ್ಷಣ ಪುರಸ್ಕರಿಸಿದ ಗೌರವಾನ್ವಿತ ಸಚಿವರುಗಳು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಸಂಪೂರ್ಣ ಕೋಚ್‌ಗಳನ್ನು ಬದಲಾಯಿಸಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಹೆಚ್‌ಬಿ ಕೋಚ್ ಅಳವಡಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಇದೀಗ ನೂತನ ಕೋಚ್‌ಗಳು ಸಿದ್ಧವಾಗಿದ್ದು ಇದೇ ಬರುವ ಫೆಬ್ರವರಿ 17 ರಂದು ಮೊದಲ ಪ್ರಯಾಣವನ್ನು ಬೆಳೆಸಲಿದೆ.

ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಶುಭ ಘಳಿಗೆಯಲ್ಲಿ ಅಂದಿನ ಕೇಂದ್ರ ಸಚಿವರಾದ ಸ್ಮರಣೀಯ ದಿ.ಜಾರ್ಜ್ ಫರ್ನಾಂಡೀಸ್ ರವರ ವಿಶೇಷ ಪರಿಶ್ರಮದಿಂದ ಅಂದಿನ ಜನಮೆಚ್ಚಿದ ಪ್ರಧಾನಮಂತ್ರಿ ಸ್ಮರಣೀಯ ದಿ.ಅಟಲ್ ಬಿಹಾರಿ ವಾಜಪೇಯಿ ರವರ ಕಾಳಜಿಯ ಮೇರೆಗೆ ಮೇ 01-1998ರ ಸಂದರ್ಭದಲ್ಲಿ ಈ ರೈಲು ಉದ್ಘಾಟನೆಗೊಂಡಿತು. ಅಲ್ಲಿಂದ ಇಂದಿನವರೆಗೂ ಸುಧೀರ್ಘ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಜನರನ್ನು ಭಾವನಾತ್ಮಕವಾಗಿ ಈ ರೈಲು ಬೆಸೆದಿದೆ. ಈಗ ಆಧುನಿಕ ಭಾರತದ ದ್ಯೋತಕವಾಗಿ ಈ ರೈಲು ಹೊಸ ತಂತ್ರಜ್ಞಾನದ ಮೂಲಕ ಕಂಗೊಳಿಸಲಿದ್ದು ಪ್ರಯಾಣಿಕರಿಗೆ ವಿಶೇಷ ಸೇವೆಯನ್ನು ನೀಡಲಿದೆ.

ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಜನರು ಸುರಕ್ಷಿತವಾಗಿರುತ್ತಾರೆ. ಯಾವುದೇ ಅಪಘಾತ ಸಂಭವಿಸಿದರೂ ಕೋಚ್‌ಗಳು ಪಲ್ಟಿ ಆಗದೆ ಜಿಗ್ ಜ್ಯಾಗ್ (ZIGZAG) ರೀತಿಯಲ್ಲಿ ವರ್ಗೀಕರಿಸಿ ನಿಂತುಬಿಡುತ್ತದೆ. ಈ ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಾಲಯ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ.

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳುವ ಮಂಗಳೂರು ಎಕ್ಸ್‌ಪ್ರೆಸ್‌ ರೈಲು ಮಾರ್ಚ್1 ರಿಂದ ನೂತನ ಎಲ್‌ಹೆಚ್‌ಬಿ ಕೋಚ್‌ಗಳನ್ನೊಳಗೊಂಡು ಪ್ರಯಾಣ ಬೆಳೆಸಲಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಟ್ಟು ಸಹಕರಿಸಿದ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರಿಗೆ ಹಾಗೂ ವಿಶೇಷವಾಗಿ ಎಲ್ಲಾ ಮನವಿಗಳಿಗೆ ಬೆಂಬಲ ನೀಡಿ ಸಹಕರಿಸುವ ಗೌರವಾನ್ವಿತ ಸಚಿವರಾದ ಶ್ರೀ ವಿ.ಸೋಮಣ್ಣರಿಗೆ ಕೋಟ ಶ್ರೀನಿವಾಸ ಪೂಜಾರಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಾಮಾಣಿಕ ಪ್ರಯತ್ನದಿಂದ ಕರಾವಳಿಯ ಅವಳಿ ಜಿಲ್ಲೆಗಳ ಜನರ ಬಹು ದಿನದ ಕನಸು ನನಸಾಗಲಿದ್ದು, ವಿಶೇಷ ಸೇವೆಯೊಂದಿಗೆ ರೈಲು ಪ್ರಯಾಣ ಇನ್ನು ಸುಖಕರವಾಗಲಿದೆ.

Related posts

ಮಾಜಿ ಪ್ರಧಾನಿ ಡಾ ಮನಮೋಹನ್‌ ಸಿಂಗ್‌ ನಿಧನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಸುಭಾಷ್ ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ – ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ, ಧಾರ್ಮಿಕ ಸಭೆ.

Mumbai News Desk

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk

ಮಹಾರಾಷ್ಟ್ರದಲ್ಲಿ ಈದ್ ಮಿಲಾದ್ ರಜೆ ಸೆ.16 ರ ಬದಲು ಸೆ. 18ಕ್ಕೆ.

Mumbai News Desk