July 23, 2026
Mumbai News Kannada
ಸುದ್ದಿ

” ಕನ್ನಡಿಗರ ಉನ್ನತ ಮಹಾವಿದ್ಯಾಲಯ ಐರೋಲಿ ಯ ಜ್ಞಾನ ವಿಕಾಸ ಮಂಡಳದ ಮೆಹತಾ ಮಹಾವಿದ್ಯಾಲಯ”







ಜ್ಞಾನ ವಿಕಾಸ ಮಂಡಳದ ಮೆಹತಾ ಡಿಗ್ರಿ ಕಾಲೇಜ ಐರೋಲಿ ಯಲ್ಲಿ 2025-26 ರ ವಿವಿಧ ತರಗತಿ ಗಳಿಗೆ ಪ್ರವೇಶ ಪ್ರಾರಂಭವಾಗಿವೆ. ಜ್ಞಾನ ವಿಕಾಸ ಮಂಡಳ ಕಲವಾ ಸಂಸ್ಥೆಯನ್ನು ಕನ್ನಡದ ಹಿರಿಯರು 1974 ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭಸಿದ್ದು ಇಂದು ಹೆಮ್ಮರವಾಗಿ ಬೆಳದಿದೆ. ಕಳವಾ ಹಾಗು ಐರೋಲಿ ಯಲ್ಲಿ ಎರಡು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಕೇಜಿ ಯಿಂದ ಪಿಜಿ ಯ ವರೆಗೆ ವಿವಿಧ ತರಗತಿಗಳಲ್ಲಿ ಒಂಬತ್ತು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪೂರ್ವ ಪ್ರಾಥಮಿಕ ತರಗತಿಯಿಂದ ಉನ್ನತ ಶಿಕ್ಷಣದ ತರಗತಿ ಯವರೆಗೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಸುಸಜ್ಜಿತ ಕಟ್ಟಡದೊಂದಿಗೆ ಗ್ರಂಥಾಲಯ, ಹಲವಾರು ಕಂಪ್ಯೂಟರ್ ಲ್ಯಾಭಗಳ ವ್ಯವಸ್ಥೆ, ಒಳಾಂಗಣ ಆಟದ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳನ್ನು ಜ್ಞಾನ ವಿಕಾಸ ಮಂಡಲವು ಕಲ್ಪಿಸಿದೆ. ಕಲವಾ ದಲ್ಲಿ ನ್ಯೂ ಇಂಗ್ಲೀಷ ಸ್ಕೂಲ್ ( NES) ಮತ್ತು ಪದ್ಮಶ್ರೀ ಆರ್. ಟಿ.ದೋಷಿ ಜೂನಿಯರ್ ಕಾಲೇಜ್ ನವೀನ ಸುಸಜ್ಜಿತ ಕಟ್ಟಡದಲ್ಲಿ ಪೂರ್ವ ಪ್ರಾಥಮಿಕ ತರಗತಿ ಇಂದ ಜೂನಿಯರ್ ಕಾಲೇಜ್ ವರೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಕಳವಾ ಹಾಗು ಸುತ್ತಮುತ್ತಲಿನ ಸ್ಥಳಗಳಲ್ಲಿ ವಾಸಿಸುವ ಜನರು ತಮ್ಮ ತಮ್ಮ ಮಕ್ಕಳನ್ನು ಜ್ಞಾನ ವಿಕಾಸ ಮಂಡಳದ ಶಾಲೆ ಹಾಗು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಪ್ರಥಮ ಆದ್ಯತೆಯನ್ನು ನೀಡುತ್ತಿದ್ದಾರೆ. ಇನ್ನೊಂದು ಸಂಸ್ಥೆ ಐರೋಲಿ ಯಲ್ಲಿ ಜ್ಞಾನ ವಿಕಾಸ ಮಂಡಲ ದ ಮೆಹತಾ ಡಿಗ್ರಿ ಕಾಲೇಜು ಮತ್ತು ಜೂನಿಯರ್ ಕಾಲೇಜ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಹೆಸರುವಾಸಿಯಾಗಿದೆ.

ಮೆಹತಾ ಕಾಲೇಜು ನ್ಯಾಕ್ A+ ಗ್ರೆಡ್ ಪಡೆದಿದ್ದು ಐರೋಲಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಾಣಿಜ್ಯ, ವಿಜ್ಞಾನ ಹಾಗು ಕಂಪ್ಯೂಟರ್ ವಿಷಯಗಳಲ್ಲಿ ಹಲವಾರು ತರಗತಿಗಳನ್ನು ನಡೆಸುತ್ತಿದೆ, ಮುಂಬಯಿ ವಿಶ್ವವಿದ್ಯಾಲಯದ ಮಾನ್ಯತೆ ಅನುಸಾರ ವಿವಿಧ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ. ವಿವಿಧ ತರಗತಿಗಳಿಗೆ ಪ್ರವೇಶ ಪ್ರಾರಂಭ ವಾಗಿದ್ದು ಕನ್ನಡಿಗರಿಗೆ ಪ್ರವೇಶ ಪಡೆಯಲು ಪ್ರಾಶಸ್ತ್ಯ ನೀಡಲಾಗುತ್ತದೆ. ಜ್ಞಾನ ವಿಕಾಸ ಮಂಡಲವು ಇಂದು ದಕ್ಷ ಆಡಳಿತ ಮಂಡಳಿ ಹಾಗೂ ಅನುಭವಿ ಪದಾಧಿಕಾರಿಗಳ ತಂಡ ಸಂಸ್ಥೆಯ ಬೆಳವಣಿಗೆಗೆ ಅವಿರತ ಪ್ರಯತ್ನ ಮಾಡುತ್ತಿದೆ. ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ . ಎನ್ . ಹೆಗಡೆ , ಕಾರ್ಯಧ್ಯಕ್ಷ ಶ್ರೀ ಕೃಷ್ಣಾ. ಎಚ್.ದೇಶಪಾಂಡೆ , ಉಪಾಧ್ಯಕ್ಷ ಶ್ರೀ ಎಸ್.ಪಿ. ಕುಲಕರ್ಣಿ, ಪ್ರದಾನ ಕಾರ್ಯದರ್ಶಿ ಶ್ರೀ ವಿ . ಬಿ.ಮುಗಳಿ, ಜೊತೆ ಪ್ರಧಾನ ಕಾರ್ಯದರ್ಶಿ ಶ್ರೀ ಜಾನ್ ಪಿ ಥಾಮಸ್ ಹಾಗು ಕೋಶಾಧಿಕಾರಿ ಶ್ರೀ ಅವಿನಾಶ ಖೀಲಾರಿ ಮತ್ತು ಒಂಬತ್ತು ಜನ ಆಡಳಿತ ಮಂಡಳಿಯ ಸದಸ್ಯರು ಶ್ರೀ ರಮೇಶ ಪಾಟೀಲ, ಶ್ರೀ ಅಜೀತ ಪುರಾಣಿಕ, ಶ್ರೀ ಪಾಂಡುರಂಗ ಮಿರ್ಜಿ, ಶ್ರೀ ರಾಹುಲ ಮಾಂಗಲೆ, ಶ್ರೀ ಅವಧೂತ ಅಕ್ಲೇಖರ, ಶ್ರೀ ಆರ್.ಜೆ.ಪಾಟೀಲ, ಶ್ರೀ ಸಮರ ಟಂಕಸಾಲಿ, ಶ್ರೀ ಸತೀಶ್ ಖಿಲಾರಿ ಹಾಗು ಶ್ರೀಮತಿ ರೋಹಿಣಿ ಹೊಸಕೇರಿ ಇವರೆಲ್ಲರೂ ಆಡಳಿತ ಮಂಡಳಿಯ ಭಾಗವಾಗಿ ಸಂಸ್ಥೆಯ ಅಬಿವೃದ್ದಿ ಕೊಡುಗೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಂಡು ಕನ್ನಡ ಸಂಸ್ಕೃತಿ, ಸಾಹಿತ್ಯ, ಕಲೆ ಆಚಾರ ಹಾಗು ವಿಚಾರಗಳ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ. NAAC ನಿಂದ ಮೆಹತಾ ಕಾಲೇಜಿಗೆ “A+ ” ಗ್ರೇಡ್ ಲಭಿಸಿದೆ. ಕನ್ನಡದ ಜನರು ಇದರ ಸದುಪಯೋಗ ಪಡೆಯಲು ಪ್ರಾಚಾರ್ಯ ಡಾ. ಬಿ. ಆರ್.ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ದಿವಿಜ ಚಂದ್ರಶೇಖರ್ ನಿಧನ

Mumbai News Desk

ಬಿಗ್ ಬಾಸ್ ಕನ್ನಡ 12: ರನ್ನರ್ ಅಪ್ ಆಗಿ ಹೊರಹೊಮ್ಮಿದ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿ

Mumbai News Desk

ಅಜಿತ್ ಪವಾರ್ ವಿಮಾನ ಅಪಘಾತ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸೇರಿ ಆರು ಮಂದಿ ಸಾವು

Mumbai News Desk

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸಭೆ.

Mumbai News Desk

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮುಂಬಯಿ ಭೇಟಿ.

Mumbai News Desk

ದಿ. ದಾಮೋದರ್ ಸುವರ್ಣ ಜನ್ಮಶತಾಬ್ದಿ ಆಚರಣೆ : ಡಾ. ಮೋಹನ್ ಬಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಗೌರವ

Mumbai News Desk