
ಮುಂಬಯಿಯ ಉಪನಗರ ಅಂಬರನಾಥ್ ಪರಿಸರದಲ್ಲಿ ಓರ್ವ ಪ್ರಖ್ಯಾತ ಕೂಡು ಕುಟುಂಬಸ್ಥರಾಗಿ, ದೈವ ದೇವರ ಪರಮ ಆರಾಧಕರಾಗಿ, ಸಮಾಜಪರ ಸೇವಕರಾಗಿ, “ಅಂಬರ್ನಾಥ್ ಗೋಪಾಲ್ ಪೂಜಾರಿ” ಎಂಬ ನಾಮಕವನ್ನು ಪಡೆದ ಶ್ರೀ ಗೋಪಾಲ್ ಪಿ. ಪೂಜಾರಿಯವರ ನಿವಾಸದಲ್ಲಿ ದಿನಾಂಕ 08.02.2025 ರಂದು ಜರಗಿದ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಪೂಜೆಯಂದು ಬಿಲ್ಲವರ ಅಸೋಸಿಯೇಷನ್, ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಕಾರಿ ಸಮಿತಿಯವರಿಂದ ಶ್ರೀ ಗೋಪಾಲ್ ಪೂಜಾರಿ ಹಾಗೂ ಅವರ ಧರ್ಮ ಪತ್ನಿ ಶ್ರೀಮತಿ ಮುತ್ತು ಗೋಪಾಲ್ ಪೂಜಾರ್ತಿ ಯವರನ್ನು ಅವರು ಸಮಾಜದಲ್ಲಿ ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ ಸೇವೆಗಳನ್ನು ಗುರುತಿಸಿ, ನೆನಪಿನ ಕಾಣಿಕೆ, ಶಾಲು ಪುಷ್ಪ ಗುಚ್ಚಗಳಿಂದ ಸನ್ಮಾನಿಸಲಾಯಿತು.
