31 C
Mumbai
June 8, 2026
Mumbai News Kannada
Uncategorizedಮುಂಬಯಿ

ಬಿಲ್ಲವರ ಎಸೋಸಿಯೇಷನ್ ಮುಂಬೈ ಬೊರಿವಲಿ- ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನ ಕುಂಕುಮ





ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯ ; ಶಕುಂತಳಾ ಕೆ ಕೋಟ್ಯಾನ್

ಚಿತ್ರ, ವರದಿ: ರಮೇಶ್ ಉದ್ಯಾವರ

  ಬೊರಿವಲಿ, ಫೆ. 8:   ಬಿಲ್ಲವರ ಎಸೋಸಿಯೇಷನ್ ಬೊರಿವಲಿ ದಹಿಸರ್ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯರಿಂದ ಅರಶಿನ ಕುಂಕುಮ ಕಾರ್ಯಕ್ರಮವು ಫೆ 7 ರಂದು ಸಂಜೆ ಗಂಟೆ 4 ರಿಂದ ಬೊರಿವಲಿ ಪಶ್ಚಿಮದ ಶಿಂಪೋಲಿ ಗೊರಾಯಿ ರೋಡ್ ನ, ಸ್ಥಳೀಯ ಕಚೇರಿ ಗುರು ಸನ್ನಿಧಿಯಲ್ಲಿ ಜರಗಿತು.

    ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರು ದೀಪದ ಪ್ರಜ್ವಲಿಸಿ ಹಿಂಗಾರ ಹೂ ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಚೇರಿಯ ಉಪಕಾರ್ಯಾಧ್ಯಕ್ಷ ಕೃಷ್ಣರಾಜ ಸುವರ್ಣ ಶ್ರೀ ನಾರಾಯಣ ಗುರುಗಳ ಬಿಂಬ ಮೂರ್ತಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ನೆರವೇರಿಸಿದರು.

   ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಲ್ಲವರ ಎಸೋಶಿಯೇಶನ್ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್   ಮಾತನಾಡಿ ಸಾಧನೆಯ ಹಾದಿಯಲ್ಲಿ ಮಹಿಳೆಯರು ಮುಂದುವರಿದಾಗ ಸಂಸಾರ ಜೀವನವೂ ಯಶಸ್ವಿಯಾಗಲು ಸಾಧ್ಯ. ಸಂಘಟನೆ ಸ್ಥಾಪನೆಗೊಂಡಿರುವುದು ಸಮಾಜ ಅಭಿವೃದ್ಧಿಗಾಗಿ ಅದನ್ನು ಬಲಿಷ್ಠಗೊಳಿಸಲು ಮಹಿಳೆಯರ ಪಾತ್ರವೂ ಮುಖ್ಯ. ಸರ್ವ ಸಮಾಜ ಬಾಂಧವರು ಸಕ್ರಿಯವಾಗಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘದ ಅಧ್ಯಕ್ಷರ ಶೈಕ್ಷಣಿಕ ಯೋಜನೆಯನ್ನು ಕಾರ್ಯಗತಗೊಳಿಸಲು ಸಹಕರಿಸಿ. ಈ ಸ್ಥಳೀಯ ಸಮಿತಿಯಿಂದ ನಿರಂತರ ಕಾರ್ಯಕ್ರಮಗಳು ಜರಗುತ್ತಿದ್ದು ಮಾರ್ಚ್ 8ರಂದು ಕೇಂದ್ರ ಕಚೇರಿಯಲ್ಲಿ ಜರಗುವ ಮಹಿಳಾ ದಿನಾಚರಣೆಗೆ ಎಲ್ಲಾ ಮಹಿಳಾ ಸದಸ್ಯರು ತಪ್ಪದೆ ಭಾಗವಹಿಸಿ ಕಾರ್ಯಕ್ರಮ ನೀಡುವಂತೆ ಕರೆ ನೀಡಿದರು.

   ಮುಖ್ಯ ಅತಿಥಿ ಸ್ಟೇ ಫೈನ್ ವೆಂಚರ್ ಸಂಸ್ಥೆಯ ಮೋಹಿನಿ ರವಿ ಪೂಜಾರಿ ಮಾತನಾಡಿ ಜೀವನದಲ್ಲಿ ಸಮಸ್ಯೆಗಳು ಸಾಮಾನ್ಯ ಆದರೆ ಸಮಸ್ಯೆ ನಡುವೆ ನಾವು ಸಾಧಿಸುವ ಯಶಸ್ಸು ನಿಜವಾದ ಬದುಕು, ಉದ್ಯಮ ಕ್ಷೇತ್ರದಲ್ಲಿ ಮುಂದುವರೆಯುವ ಮಹಿಳೆಗೆ ಎಲ್ಲಾ ವಿಧದಲ್ಲಿ ಸಹಕಾರ ಮುಖ್ಯ ಎಲ್ಲಾ ಸಮಸ್ಯೆ ಎದುರಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಅಂತ ಒಂದು ಸರ್ವೆಸಾಮಾನ್ಯ

ಉದ್ಯಮ ಕ್ಷೇತ್ರದಲ್ಲಿ ಸಾವಿರಾರು ಮಹಿಳೆಯರ ಬದುಕನ್ನು ಹಸನುಗೊಳಿಸುವ ಶ್ಲಾಘನೀಯ ಕಾರ್ಯ ನಮ್ಮ ಉದ್ಯಮ ಸಂಸ್ಥೆಯಲ್ಲಿ ನಡೆದಿದೆ. ಮಹಿಳೆಯರು ತಮ್ಮ ಭವಿಷ್ಯ ರೂಪಿಸಲು ಹಲವಾರು ಅವಕಾಶಗಳು ದೊರೆಯುತ್ತದೆ ಅದನ್ನು ಸಂದರ್ಭಕ್ಕನುಸಾರವಾಗಿ  ಸಾಕಾರಗೊಳಿಸುವ ಪ್ರಯತ್ನ ನಮ್ಮಲ್ಲಿರಬೇಕು ಎಂದು ಹೇಳಿದರು.

     ಇನ್ನೋರ್ವ ಅತಿಥಿಯಾಗಿ ಉಪಸ್ಥಿತರಿದ್ದ ಲೇಖಕಿ ಸುಶೀಲಾ ಎಸ್ ಅಮೀನ್ ಕೊಡವೂರು ಉತ್ತರಾಯಣದ ಪವನ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮ ಮಹಿಳೆಯರ ಸ್ನೇಹ ಸಂಬಂಧದ ವಿಶೇಷ ದಿನವಾಗಿದೆ.ಯುವ ಸಮುದಾಯ ಸಾಮಾಜಿಕ ಜಾಲತಾಣದ ಬಂದ್ ಕೋಣೆಯಲ್ಲಿ ಪ್ರಪಂಚ ಕಾಣುವ  ಜನಾಂಗ ಸಂಸಾರ ಸಂಬಂಧದಿಂದ ದೂರವಾಗಿದ್ದಾರೆ. ಭಾಷೆ ಸಂಸ್ಕೃತಿ ಯೊಂದಿಗೆ ಭಾವನಾತ್ಮಕವಾಗಿ ಬದುಕು ರೂಪಿಸಲು ಕಲಿಯುವ ನಾವು ಸಾಮಾಜಿಕ ಬದಲಾವಣೆಯಿಂದ ಹೊಸತನವನ್ನು ಕಲಿಯಬೇಕು.  ದೈವದೇವರ ವಿನೂತನ ಸಂಸ್ಕೃತಿಯಿಂದ ಕೂಡಿದ ತುಳು ನಾಡಿನಲ್ಲಿ ಆಚಾರ ವಿಚಾರ ಹಬ್ಬ ಹರಿ ದಿನಗಳ ವೈಶಿಷ್ಟ್ಯ ಶಾಶ್ವತವಾಗಿ ಉಳಿಯಬೇಕು. ನಮ್ಮ ದೇಶದ ಸಂಸ್ಕೃತಿ ಪ್ರಕೃತಿ ವ್ಯವಸಾಯದ ಬದುಕಿನಲ್ಲಿ ಅಡಗಿದೆ. ವಿವಿಧತೆಯಲ್ಲಿ ಏಕತೆಯನ್ನು ಕಂಡ ನಮ್ಮ ಸಂಸ್ಕೃತಿ ಪ್ರಕೃತಿ ಪೂಜೆ ಗುರು ಹಿರಿಯರ ಆರಾಧನೆಯಾಗಿದೆ ಎಂದು ಹೇಳಿದರು.

  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಕಚೇರಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ್ ಹಿರಿಯರ ಮಹತ್ವದ ಧಾರ್ಮಿಕ ಹಿನ್ನೆಲೆಯ ಕುಂಕುಮಕ್ಕೆ ಮಹತ್ವ ನೀಡಿ ಆ ಮೂಲಕ ಅರಿಶಿನ ಕುಂಕುಮ ಅರ್ಥ ನೀಡುವ ಕಾರ್ಯಕ್ರಮವಾಗಲಿ ಎಂದು ಹೇಳಿ ಮಹಿಳೆಯರ ಒಗ್ಗಟ್ಟಿಗೆ ಅಭಿನಂದನೆ ಸಲ್ಲಿಸಿದರು.

@ ಅರಸಿನ ಕುಂಕುಮ ಬರೇ ಮುತ್ತೈದೆಯರಿಗಾಗಿ ಸೀಮಿತವಾಗಿರದೆ ಎಲ್ಲಾ ಮಹಿಳೆಯರು ಸೇರಿ ಆಚರಿಸುವ ಕಾರ್ಯಕ್ರಮವಾಗಲಿ. ಸಾಂಸ್ಕೃತಿಕ ಬದುಕಿನಲ್ಲಿ ನಮ್ಮ ಆಚಾರ-ವಿಚಾರಗಳಿಗೆ ಮಹತ್ವ ನೀಡಿ ಅದನ್ನು ಮಕ್ಕಳಿಂದ ಪ್ರಾರಂಭಿಸುವ ಜವಾಬ್ದಾರಿ ನಮ್ಮಲ್ಲಿ ಬೆಳೆಯಬೇಕು. ಅರಿಶಿನ ಕುಂಕುಮದ ಮೂಲ ಮತ್ತು ಧಾರ್ಮಿಕವಾಗಿ ಅದರ ಉಪಯೋಗದ ವೈಶಿಷ್ಟ್ಯತೆ ಯ ಬಗ್ಗೆ ಮುಖ್ಯವಾಗಿ ನಾವು ತಿಳಿದಿರಬೇಕು # ಲೇಖಕ, ಶಿಮಂತೂರು ಚಂದ್ರಹಾಸ ಸುವರ್ಣ

   ಕಾರ್ಯಕ್ರಮದಲ್ಲಿ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್ ಅತಿಥಿಗಳನ್ನು ಮಹಿಳಾ ಸದಸ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಜರಗಿಸಲು ಸಹಕರಿಸಿದ ಮಹಿಳಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಕೇಂದ್ರ ಕಚೇರಿಯ ಲಕ್ಷೀ ಪೂಜಾರಿ   ಕಾರ್ಯಕ್ರಮದಲ್ಲಿ ಉಪ ಕಾರ್ಯಧ್ಯಕ್ಷ ರಮೇಶ್ ಡಿ ಕೋಟ್ಯಾನ್, ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್ ಜೊತೆ ಕಾರ್ಯದರ್ಶಿ ವತ್ಸಲಾ. ಕೆ ಪೂಜಾರಿ, ಕಚೇರಿಯ ಮಾಜಿ ಜೊತೆ ಕಾರ್ಯದರ್ಶಿ ನವೀನ್ ಗುಳಿಬೆಟ್ಟು, ಕೇಂದ್ರ ಕಚೇರಿ ಯುವ ವಿಭಾಗದ ಕಾರ್ಯದರ್ಶಿ ಶರಣ್ಯ ಪೂಜಾರಿ, ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯದರ್ಶಿ ಭೂಮಿಕಾ ಸುವರ್ಣ ಹಾಗೂ ಸ್ಥಳೀಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯರು, ಆಹ್ವಾನಿತ ಸದಸ್ಯರು ಯುವ ವಿಭಾಗದ ಸದಸ್ಯರು ತುಳು ಕನ್ನಡಿಗರು ಉಪಸ್ಥಿತರಿದ್ದರು.

ಸೌಮ್ಯ ಪೂಜಾರಿ ರಿದ್ಧಿ ಅಮೀನ್  ಅತಿಥಿಗಳನ್ನು ಪರಿಚಯಿಸಿದರು.

ಉಪಕಾರ್ಯಾಧ್ಯಕ್ಷ ಕೃಷ್ಣರಾಜ್ ಸುವರ್ಣ ಕಾರ್ಯಕ್ರಮ ನಿರೂಪಿಸಿ ಕಾರ್ಯದರ್ಶಿ ಜ್ಯೋತಿ ಪಿ ಪೂಜಾರಿ ವಂದಿಸಿದರು



Related posts

ಮುಂಬೈ ವಿಶ್ವದ 5ನೇ ಅತ್ಯುತ್ತಮ ಆಹಾರ ನಗರ : ಮಾತುಂಗದ ರಾಮ್ ಆಶ್ರಯ ಐಕಾನಿಕ್ ರೆಸ್ಟೋರೆಂಟ್ ಗಳಲ್ಲಿ ಒಂದು

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ ಸಾಧಕರಿಗೆ ಸನ್ಮಾನ, ನೃತ್ಯ ವೈಭವ, ನಾಟಕ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಕ್ಷಿತ್ ಸತೀಶ್ ಶೆಟ್ಟಿ ಗೆ ಶೇ. 93.60 ಅಂಕ.

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಗೋರೆಗಾಂವ್ : ಸುಂದರಿ ಎಸ್ ಪಡುಬಿದ್ರಿ ನಿಧನ

Mumbai News Desk

ಬಂಟರ ಸಂಘ ಮುಂಬಯಿ,  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಅಷ್ಟಾದಶ ಸಂಭ್ರಮ

Mumbai News Desk