ಮೀರಾರೋಡ್. ಮೀರಾ-ಭಾಯಂದರ್ ನ ಕನಕಿಯಾ ಇಂಟರ್ನ್ಯಾಶನಲ್ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಸಮರ್ಥ್ ರೈ ಅವರು ಮಹಾರಾಷ್ಟ್ರ ರಾಜ್ಯ ಲೀಗ್ ಫುಟ್ಬಾಲ್ ಟೂರ್ನಮೆಂಟ್‌ನ ಅಂಡರ್-15 ವಿಭಾಗದಲ್ಲಿ ದೆರ್ವನ್ ತಂಡದ ಮೂಲಕ ರತ್ನಗಿರಿ ಜಿಲ್ಲೆಯನ್ನು ಪ್ರತಿನಿಧಿಸಿ ಅತ್ಯುತ್ತಮ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ,
ಟೂರ್ನಮೆಂಟ್‌ನಲ್ಲಿ ಅವರ ಪ್ರಮುಖ ಪಾತ್ರದಿಂದಾಗಿ ಮತ್ತು ಅತಿ ಹೆಚ್ಚು ಗೋಲು ಬಾರಿಸಿ ತಂಡವು ಟೂರ್ನಮೆಂಟ್‌ನಲ್ಲಿ ಟಾಪ್ 3 ಸ್ಥಾನವನ್ನು ಕಾಯ್ದುಕೊಳ್ಳಲು ಸಹಾಯವಾಗಿದೆ. ಅವರು ಬೋರಿವಿಲಿಯ
ಸಿಎಫ್ಸಿಐ ಕ್ಲಬ್‌ನಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದಾರೆ.
2011 ಜೂನ್ 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು , ಮಿಾಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ.
ಸಮರ್ಥ್ ರೈ ಯವರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ಸಮರ್ಥ್ ರೈ ಅವರ ಈ ಸಾಧನೆ ಅವರ ಪರಿಶ್ರಮ ಮತ್ತು ಸಮರ್ಪಣೆಯ ಫಲವಾಗಿದೆ, ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು.