
ತಾರೀಕು 08-02-2025ನೆ ಶನಿವಾರ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಾರ್ಷಿಕ ವಿಹಾರ ಕೂಟವನ್ನು ಆಯೋಜಿಸಲಾಗಿತ್ತು.
ಟ್ರಸ್ಟ್ ನ ಸದಸ್ಯ ಬಾಂಧವರ ಅನುಕೂಲತೆಗೆ ತಕ್ಕಂತೆ ಬಸ್ಸಿನ ಮುಖಾಂತರ ಬೆಳಿಗ್ಗೆ 6-30ಗಂಟೆಗೆ ಬೋರಿವಿಲಿ ಪಶ್ಚಿಮದಿಂದ, ಬೊರಿವಿಲಿ ಪೂರ್ವ, ಕಾಂದಿ ವಿಲಿ, ಜೋಗೇಶ್ವರಿ, ಅಂಧೇರಿ, ಸಂತಾಕ್ರೂಸ್ ನಿಂದ ಹೊರಟು 9-30ಗಂಟೆಗೆ ಪನ್ವೆಲಿನ ಸೃಷ್ಟಿ ವಿಹಾರ ಧಾಮಕ್ಕೆ ತಲಪಲಾಯಿತು.
ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ನಿತ್ಯಾನಂದ ಡಿ ಕೋಟ್ಯಾನ್,
ಉಪಾದ್ಯಕ್ಷರುಗಳಾದ D.B.ಅಮೀನ್ ಮತ್ತು C.K. ಪೂಜಾರಿ.ವಿಶ್ವನಾಥ್ ತೋನ್ಸೆ ಯವರ ಮುಂದಾಳುತ್ವದಲ್ಲಿ, ಆಯೋಜಿಸಲಾದ ವಿಹಾರ ಕೂಟದಲ್ಲಿ ಹಿರಿಯರಾದ ಸೋಮ ಸುವರ್ಣ ದಂಪತಿ, ಸಲಹೆಗಾರರಾದ V.C. ಪೂಜಾರಿ, ಶಶಿ ನಿತ್ಯಾನಂದ ಕೋಟ್ಯಾನ್,ಭಾರತಿ ಸುವರ್ಣ ದಂಪತಿ, ಸುಧಾಕರ್ ಕೋಟ್ಯಾನ್ ದಂಪತಿ, ವಿಜಯ ಸಂಜೀವ ಪೂಜಾರಿ, ಕೃಷ್ಣ ಪಾಲನ್ ದಂಪತಿ,ವಿಜಯ್ ಸನಿಲ್ ದಂಪತಿ, ಸುಲೋಚನಾ ರಾಘು ಪೂಜಾರಿ ದಂಪತಿ, ಸಂಜೀವಿನಿ ಲೀಲಾದರ ದಂಪತಿ,ಸಂಘಟಕಿ ಮೃದುಲಾ ಅರುಣ್ ಕೋಟ್ಯಾನ್, ಸವಿತಾ ನರೇಶ್, ಉದಯ ಎನ್ ಪೂಜಾರಿ. ರಮಣಿ ಕರ್ಕೇರ, ಭವಾನಿ ಬಂಗೇರ, ಕಸ್ತೂರಿ ರೂಪ್ ಕುಮಾರ್,ಇಂದಿರಾ ಎಸ್ ಕೋಟ್ಯಾನ್, ತುಷಾರ್ ಪಾಲನ್ ರತನ್ ಕರ್ಕೇರ ಮತ್ತು ಶೌರ್ಯ ಸನಿಲ್ ಉಪಸ್ಥಿತರಿದ್ದರು.
ಬೆಳಗ್ಗಿನ ಉಪಹಾರದ ನಂತರ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮದ್ಯಾಹ್ನದ ಊಟೋಪಚಾರದ ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಯಂಕಾಲ ಚಾ ತಿಂಡಿಯ ನಂತರ ನಿತ್ಯಾನಂದ ಡಿ ಕೋಟಿಯಾನರ ಅಧ್ಯಕ್ಷತೆಯಲ್ಲಿ ಸಮಾರೋಪ ಸಭೆಯನ್ನು ಆಯೋಜಿಸಲಾಯಿತು.ಸದಸ್ಯರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರೆ, ಅಧ್ಯಕ್ಷರು ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು.
ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ವಿಶ್ವನಾಥ್ ತೋನ್ಸೆ
ಕಾರ್ಯಕ್ರಮವನ್ನು ಸಂಘಟಿಸಿ ಬಂದ ಸದಸ್ಯರುಗಳನ್ನು ಸ್ವಾಗತಿಸಿದರು.ಸಂಜೀವ ಪೂಜಾರಿ ತೋನ್ಸೆಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವಿಹಾರ ಧಾಮದಿಂದ ಹೊರಟ ಬಸ್ಸು ಅಟಲ್ ಸೇತು ಮುಖಾಂತರ ಮುಂಬಾಯಿಗೆ ಬಂದು ಸದಸ್ಯ ಬಾಂಧವರ ಅನುಕೂಲತೆಗೆ ತಕ್ಕಂತೆ ಅವರವರ ವಾಸಸ್ಥಾನಕ್ಕೆ ತಲಪಿಸಲಾಯಿತು.