ವಸಯಿ ಪಶ್ಚಿಮ ನವಯುಗ್ ನಗರದ, ದಿವಾನ್ ಮನ್ ತಲಾವ್ ಬಳಿಯ, ವಿಜಯ್ ಶ್ರೀ ಹೌಸಿಂಗ್ ಸೊಸೈಟಿಯಲ್ಲಿ ಶ್ರೀ ಶನಿ ದೇವರನ್ನು ಆರಾಧಿಸಿಕೊಂಡು ಬರುತ್ತಿರುವ, ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿಯ 26ನೇ ವರ್ಷದ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿ ಮಹಾಪೂಜೆ ಫೆಬ್ರವರಿ 15 ರಂದು ಜರಗಲಿದೆ.
ಅಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು:
ಬೆಳಿಗ್ಗೆ ಗಂಟೆ 6 ರಿಂದ 7:30ರ ವರೆಗೆ ಗಣ ಹೋಮ
ಬೆಳಿಗ್ಗೆ 7:30 ರಿಂದ 8:30ರ ವರೆಗೆ ನಾಗಾಭಿಷೇಕ
ಬೆಳಿಗ್ಗೆ 8:30 ರಿಂದ 9ರವರೆಗೆ ಶ್ರೀ ಹನುಮಾನ್ ಪೂಜೆ
ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ತನಕ ಶ್ರೀ ಸತ್ಯನಾರಾಯಣ ಮಹಾಪೂಜೆ ( ಶ್ರೀಕಾಂತ್ ಭಟ್ ಥಾಣೆ )
ಮಧ್ಯಾಹ್ನ 12:30 ರಿಂದ 1ರ ವರೆಗೆ ಶ್ರೀ ಶನಿ ದೇವರ ಕಲಶ ಪ್ರತಿಷ್ಠೆ
ಮಧ್ಯಾಹ್ನ 1 ರಿಂದ ಸಾಯಂಕಾಲ 7:30ರ ತನಕ ಶನಿಗ್ರಂಥ ಪಾರಾಯಣ ( ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಪೋರ್ಟ್ ಇವರಿಂದ )
ಸಾಯಂಕಾಲ 7:30 ರಿಂದ 8:30ರ ವರೆಗೆ ಭಕ್ತಿ ಭಜನೆ
ರಾತ್ರಿ 8:30 ರಿಂದ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ
ರಾತ್ರಿ 7.30ರಿಂದ 11.30ರ ತನಕ ಸಾರ್ವಜನಿಕ ಅನ್ನ ಸಂತರ್ಪಣೆ.
ಸಮಿತಿಯ 26ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನೀಶ್ವರ ಮಹಾಪೂಜೆಗೆ ಸದ್ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ತನು -ಮನ- ಧನದಿಂದ ಸಹಕರಿಸಿ ಶ್ರೀದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸನ್ನ ಸ್ವೀಕರಿಸುವಂತೆ, ಸಮಿತಿಯ ಗೌರವಾಧ್ಯಕ್ಷ ಪಾಂಡು ಎಲ್ ಶೆಟ್ಟಿ, ಅಧ್ಯಕ್ಷ ಉಮೇಶ್ ಎಚ್ ಕರ್ಕೆರ, ಉಪಾಧ್ಯಕ್ಷ ಜಯ ಜಿ ಅಮೀನ್, ಗೌರವ ಕಾರ್ಯದರ್ಶಿ ಪ್ರಭಾಕರ್ ಎನ್ ಬಂಗೇರ, ಗೌರವ ಕೋಶಾಧಿಕಾರಿ ಉಮೇಶ್ ಎಂ ಕರ್ಕೇರ, ಜತೆ ಕಾರ್ಯದರ್ಶಿ ಕೆ ಪಿ ಶಾಮ್, ಜೊತೆ ಕೋಶಾಧಿಕಾರಿ ಶಂಕರ್ ಬಿಲ್ಲವ, ಅರ್ಚಕರಾದ ಶಶಿ ಕರ್ಕೇರ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.
