
ಇತ್ತೀಚಿಗೆ ಮುಂಬಯಿಯ ಮುಲುಂದ್ ನ ಪ್ರಿಯದರ್ಶಿನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ 30ನೇ ಯುರೋ ಎಷ್ಯಾ ಅಂತಾರಾಷ್ಟಿಯ ಡಬ್ಲ್ಯೂ ಎಫ್ ಎಸ್ ಕೆ ಓ ( WFSKO ) ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ , ಥಾಣೆ ಪಶ್ಚಿಮ ನವೋದಯ ಇಂಗ್ಲೀಷ್ ಶಾಲೆಯನ್ನು ಪ್ರತಿನಿದಿಸಿದ ಆರೋಹಿ ಎಸ್ ಪೂಜಾರಿ 1 ಚಿನ್ನ, 1 ಬೆಳ್ಳಿ ಪದಕ ಪಡೆದು ಸಾಧನೆಗೈದಿದ್ದಾರೆ. ಚಾಂಪಿಯನ್ಶಿಪ್ ನಲ್ಲಿ ಯು. ಕೆ (U. K), ಮರಿಶಿಯಸ್, ಶ್ರೀಲಂಕಾ, ನೇಪಾಳ ಮತ್ತು ಸೌದಿ ಅರೇಬಿಯಾ – ಒಟ್ಟು 7 ದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಥಾಣೆ ಪಶ್ಚಿಮ ಸಾವರ್ಕರ್ ನಗರದ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಸಂಸ್ಥಾಪಕ, ಶಿವಪ್ರಸಾದ್ ಪೂಜಾರಿ ಪುತ್ತೂರು, ಹಾಗೂ ಆಶಾ ಪೂಜಾರಿ ದಂಪತಿ ಅವರ ಸುಪುತ್ರಿಯಾಗಿರುವ ಆರೋಹಿ (ಖುಷಿ ) , ನವೋದಯ ಇಂಗ್ಲಿಷ್ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ.ಕರಾಟೆ ಹಾಗೂ ಇತರ ಕ್ರೀಡೆಗಳ್ಳಲ್ಲಿ ಆಸಕ್ತಳಾಗಿರುವ ಆರೋಹಿ ನ್ರತ್ಯ, ಭಜನೆ, ಶಾಸ್ತ್ರಿಯ ಸಂಗೀತದಲ್ಲೂ ಪರಿಣತಿ ಹೊಂದಿರುವಳು. ಕಳೆದ ವರ್ಷ ನವಂಬರ್ ನಲ್ಲಿ ಗಂಧರ್ವ ಮಂಡಲ ಆಯೋಜಿಸಿದ ಸಂಗೀತ ಸ್ಪರ್ಧೆಯಲ್ಲಿ ಆರೋಹಿ ಪ್ರಥಮ ಸ್ಥಾನದಲ್ಲಿ ಉತ್ತಿರ್ಣಲಾಗಿರುವಳು.
ಅರೋಹಿಯ ಸಿದ್ಧಿ ಸಾಧನೆಗಳು ಪ್ರತಿ ದಿನವೂ ಅರೋಹಣವಾಗುತ್ತಿರಲಿ. ಹೆತ್ತವರಿಗೆ ಹಾಗೆಯೇ ಅವಳ ಪರಿವಾರದವರಿಗೆ ಸದಾ ಖುಶಿ ಯನ್ನು ತರಲಿ ಎಂಬ ಆಶಯ ನಮ್ಮದು ಕೂಡ. ಅವಳ ಮುಂದಿನ ಬದುಕಿಗೆ ಶುಭ ಹಾರೈಕೆಗಳು.