ಮಹಾರಾಷ್ಟದ ಪಾಲ್ಗರ್ ಜಿಲ್ಲಾ ವ್ಯಾಪ್ತಿಯ ವಿರಾರ್, ನಾಲಾಸೋಪಾರ, ಭಾಯಂದರ್, ಮೀರಾರೋಡ್ ಪರಿಸರದ ಬಿಲ್ಲವರು ಮತ್ತು ಜಯ ಸುವರ್ಣ ಅಭಿಮಾನಿಗಳಿಗಾಗಿ ಪೆ 16. ರಂದು ಬೊರಿವಲಿ ತಾಲೂಕಿನ ಫಾರ್ಮ್ ರಿಜನ್ಸಿ ಗೊರೈ ರೆಸಾರ್ಟ್ ನಲ್ಲಿ ವಿಹಾರ ಕೂಟ ನಡೆಯಿತು.
ಬೆಳಗ್ಗೆ ವಿವಿಧ ಪ್ರದೇಶದಿಂದ ಬಿಲ್ಲವರು ರೆಸಾರ್ಟ್ ನಲ್ಲಿ ಆಗಮಿಸಿ ವಿವಿಧ ಆಟೋಟ, ಪಂದ್ಯ ನೆರವೇರಿಸಿ ವಿಹಾರ ಕೂಟ ಒಂದು ಸವಿ ನೆನಪಾಗಿ ಉಳಿಯುವಲ್ಲಿ ಎಲ್ಲಾ ಬಾಂಧವರು ಸಹಕರಿಸಿದರು.
ಹಲವಾರು ಕಾರ್ಯಕ್ರಮಗಳು ಜರಗಿದ ಬಳಿಕ,ಸಂಜೆ ಸಮಾರೋಪ ಸಮಾರಂಭ ಜರಗಿತು.
ಈ ಸಮಾರಂಭದ ವೇದಿಕೆಯಲ್ಲಿ ಭಾರತ್ ಬ್ಯಾಂಕ್ ನಿರ್ದೇಶಕರು, ಬಿಲ್ಲವರ ಎಸೋಸಿಯೇಷನ್ ಮಾಜಿ ಅಧ್ಯಕ್ಷರೂ ಆದ ಚಂದ್ರಶೇಖರ್ ಎಸ್ ಪೂಜಾರಿ, ಬ್ಯಾಂಕ್ ನಿರ್ದೇಶಕರುಗಳಾದ ಮೋಹನ್ ದಾಸ್ ಜಿ ಪೂಜಾರಿ, ಸಂತೋಷ್ ಕೆ ಪೂಜಾರಿ, ಸುರೇಶ್ ಸುವರ್ಣ, ನರೇಶ್ ಪೂಜಾರಿ, ಹಾಗೂ ಸಮಾಜ ಸೇವಕಿಯರಾದ ದೇವಕಿ ಎಸ್ ಕರ್ಕೇರ, ದೀಪ್ತಿ ಯೋಗೇಶ್ ಸುವರ್ಣ, ಸಮಾಜ ಸೇವಕ ಶಿವಾನಂದ ಬಂಗೇರರು ಉಪಸ್ಥಿತರಿದ್ದರು.
ಚಂದ್ರಶೇಖರ್ ಎಸ್ ಪೂಜಾರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಜಯ ಸುವರ್ಣರ ಆದರ್ಶವನ್ನು ಮತ್ತು ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ನಡೆದು ಮುಂಬೈಯ ಬಿಲ್ಲವರನ್ನು ಬಲಿಷ್ಠ ಗೊಳಿಸಬೇಕಾಗಿದೆ ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಇರಬೇಕು ಎಂದು ನುಡಿದರ.
ವಿಹಾರ ಕೂಟದ ಕುರಿತು ವಿರಾರ್ ನಾಲಾಸೋಪಾರ ಕರ್ನಾಟಕ ಸಂಘದ ಅಧ್ಯಕ್ಷ ಸದಾಶಿವ್ ಕರ್ಕೇರ ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲೂ ಒಳ್ಳೆಯ ಕಾರ್ಯಕ್ರಮಗಳು ನಡೆಸಿ ಸಮಾಜದ ಜನರಿಗೆ ಆಶಯವಾಗೋಣ ಎಂದು ನುಡಿದರು.
ಕಾರ್ಯಕ್ರಮದ ಯಶಸ್ಸಿಗೆ ಬಿಲ್ಲವ ಯುವ ನಾಯಕರುಗಳಾದ ಭಾಯಂದರ್ ಉದಯ್ ಸುವರ್ಣ, ಅಶೋಕ್ ಸಸಿಹಿತ್ಲು, ಅಕ್ಷಯ್, ಹಾಗೂ ಇನ್ನಿತರ ಯುವಕ ಯುವತಿಯರು ಸಹಕರಿಸಿದರು. ಸ್ಪರ್ಧಾ ವಿಜೇತರುಗಳಿಗೆ ಬಹುಮಾನ ನೀಡಿ ಸತ್ಕಾರಿಸಲಾಯಿತು.
ಕಾರ್ಯಕ್ರಮವನ್ನು ಗಣೇಶ್ ಪೂಜಾರಿ ನಿರೂಪಿಸಿದರೆ ಅಶೋಕ್ ಕೆ ಸಸಿಹಿತ್ಲು ಧನ್ಯವಾದ ನೀಡಿದರು.