32 C
Mumbai
March 7, 2026
Mumbai News Kannada
ಮುಂಬಯಿ

ಬಿಲ್ಲವರ ಎಸೋಶಿಯೇಶನ್ ಮುಂಬಯಿ, ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನಶಕುಂಕುಮ






ಅರಸಿನ ಕುಂಕುಮ ಸ್ನೇಹ ಸೌಹಾರ್ದತೆಯ ಪ್ರತೀಕ: ರೋಹಿಣಿ ಟಿ. ಕೋಟ್ಯಾನ್

ಚಿತ್ರ, ವರದಿ: ರಮೇಶ್ ಉದ್ಯಾವರ

ಬೊರಿವಿಲಿ, ಫೆ. 14 :ಹಳದಿ ಕುಂಕುಮ ಸೌಂದರ್ಯ ಆರೋಗ್ಯದ ಲಕ್ಷಣವಾಗಿದ್ದು ಅರಸಿನ ನಿತ್ಯ ಬಳಸುವ ವಸ್ತು.  ಪ್ರತಿ ಮಂಗಳಕರ ಕಾರ್ಯಕ್ರಮದಲ್ಲಿ ಅರಸಿನ ಕುಂಕುಮಕ್ಕೆ ವಿಶೇಷವಾದ ಮಹತ್ವ ಇದೆ. ಮಹಿಳೆಯರು ಹಳದಿ ಕುಂಕುಮ ಬರೇ ಸಂಕೇತವೆಂದು ತಿಳಿಯದೆ ಅದರ ಇತಿಹಾಸ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಎಂದು ಭಜನಾ ಗಾಯಕಿ ರೋಹಿಣಿ ಟಿ. ಕೋಟ್ಯಾನ್ ಅಭಿಪ್ರಾಯ ವ್ಯಕ್ತ ಪಡಿಸಿದವರು.

    ಅವರು ಬಿಲ್ಲವರ ಎಸೋಶಿಯೇಶನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯರು ಫೆ. 9ರಂದು ಸ್ಥಳೀಯ ಕಚೇರಿ ಗುರು ಸನ್ನಿಧಿ ಶಿಂಪೋಲಿ ರೋಡ್ ಗೊರಾಯಿ1,  ಇಲ್ಲಿ ಆಯೋಜಿಸಿದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಭಾರತೀಯ ಪರಂಪರೆಯ ಸಂಸ್ಕೃತಿಯಲ್ಲಿ ಅರಿಶಿಣ ಕುಂಕುಮಕ್ಕೆ ವಿಶೇಷ ಹಾಗೂ ಪವಿತ್ರತೆಯ ಅರ್ಥವಿದೆ. ಈ ಕಾರ್ಯಕ್ರಮದಲ್ಲಿ  ಮಹಿಳೆಯರೆಲ್ಲರೂ ಭೇದಭಾವವಿಲ್ಲದೆ ಭಾಗವಹಿಸುವ ಕಾರ್ಯಕ್ರಮವಾಗಿದೆ.  ಸ್ನೇಹ ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಸೌಹಾರ್ದದಿಂದ ಪಾಲ್ಗೊಂಡು ಪರಸ್ಪರ ಹಳದಿ ಕುಂಕುಮ ಇಟ್ಟು ಹಾರೈಸುವುದು ಈ ಕಾರ್ಯಕ್ರಮದ ವಾಡಿಕೆ ಎಂದು ಹೇಳಿದ ಅವರು ಎಲ್ಲರೂ ಸಂತೋಷದಿಂದ ಆಚರಿಸುವ ಇಂತಹ ಕಾರ್ಯಕ್ರಮಗಳು ನಿರಂತರ ಜರಗಲಿ  ಶ್ರೀ ನಾರಾಯಣ ಗುರುಗಳು ಅನುಗ್ರಹಿಸಲಿ ಎಂದು ಹಾರೈಸಿದರು.

ಇನ್ನೋರ್ವ ಅತಿಥಿ ಸಾಯ್ಲಿ ಇಂಟರ್ನೇಷನಾಲ್ ಬೊರಿವಿಲಿ ಶಾಲಾ ಟ್ರಸ್ಟಿ ಪಲ್ಲವಿ ಸದಾನಂದ ಪೂಜಾರಿ ಆರಸಿನ ಕುಂಕುಮ ಮಹಿಳೆಯರ ಒಗ್ಗಟ್ಟಿನ ಸಂಕೇತವಾಗಿದ್ದು, ಭಾರತೀಯ ಸಂಸ್ಕೃತಿ ಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದೆ. ಇಂದಿನ ಸ್ರೀ ಸ್ವಾತಂತ್ರ್ಯ ದ ಕಾಲಘಟ್ಟದಲ್ಲಿ ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ‌ವೈಯಕ್ತಿಕ ಕೊಡುಗೆ ನೀಡುವಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

     ಲೇಖಕ, ಕವಿ ಶೀಮಂತೂರು ಚಂದ್ರಹಾಸ ಸುವರ್ಣ ಹಳದಿ ಕುಂಕುಮ ಮಹತ್ವದ ಬಗ್ಗೆ ಮಾತನಾಡುತ್ತಾ ಕಾಲಾನುಕಾಲದಿಂದ ಸದಾ ಪಾವಿತ್ರತೆಗೆ ಹೆಸರಸರುವಾಸಿಯಾದ ಹಳದಿ ಕುಂಕುಮ ಮನುಷ್ಯ ಜೀವನದ ಎಲ್ಲಾ ಧಾರ್ಮಿಕತೆಯ ಅನುಷ್ಠಾನದಲ್ಲಿ ಉಪಯೋಗಿಸಲ್ಪಡುವ ವಸ್ತುವಾಗಿದೆ. ಇಂದಿನ ಧಾರ್ಮಿಕ ವಿಚಾರದಲ್ಲಿ ಇಂತಹ ಕಾರ್ಯಕ್ರಮಗಳು ವಾಸ್ತವಕ್ಕೆ ಅರ್ಥ ನೀಡುವಂತೆ ಜರಗಬೇಕಿದೆ ಎಂದು ಹೇಳಿದ ಅವರು ಹಳದಿ ಕುಂಕುಮದ ಹುಟ್ಟು, ಅರಸಿನ ಕುಂಕುಮ ಕರಡಿಗೆಯ ಇತಿಹಾಸ ಹಾಗೂ ಮದುಮಗಳಿಗೆ ದಾರೆ ಸೀರೆಯ ಜೊತೆಗೆ ನೀಡುವ ಅರಿಸಿನ ಕರಡಿಗೆ ಹಾಗೂ ಅದರ ಮಹತ್ವದ ಬಗ್ಗೆ ಮಹಿಳೆಯರಿಗೆ ವಿವರಿಸಿದರು.

     ಸಮಿತಿಯ ಕಾರ್ಯಧ್ಯಕ್ಷ ಮೋಹನ್ ಬಿ ಅಮೀನ್ ಅತಿಥಿ ಯವರನ್ನು ಮಹಿಳಾ ಸದಸ್ಯರನ್ನು ಸ್ವಾಗತಿಸಿ ಬಳಿಕ ಮಹಿಳಾ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ . ಬಿಲ್ಲವರ ಎಸೋಶಿಯೇಶನ್ ಸಮಾಜ ಬಾಂಧವರ ಆಶಾಕಿರಣ ಸಂಸ್ಥೆಯಾಗಿದ್ದು ಪ್ರಸಕ್ತ ಅಧ್ಯಕ್ಷರ ವಿಚಾರ ಧಾರೆ, ಕ್ರೀಯಾಶೀಲ ಚಟುವಟಿಕೆಯ ಮೂಲಕ ಸಮಾಜಬಾಂಧವರ ಸದುಪಯೋಗ ಕಾರ್ಯಕ್ರಮಗಳು ಜರಗುತ್ತಿದ್ದು, ಎಸೋಶಿಯೇಶನ್ ನ ಆರ್ಥಿಕ ಸ್ಥಿತಿಯನ್ನು ಸುಭದ್ರ ಗೊಳಿಸಲು ನಾವೆಲ್ಲ ಶ್ರಮಿಸಬೇಕು ಎಂದು ಹೇಳಿದ ಅವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು.

      ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯ ಅತಿಥಿಗಳು ಹಾಗೂ ಮಹಿಳಾ ಸದಸ್ಯರು ಸಮೂಹವಾಗಿ ಶ್ರೀ ನಾರಾಯಣ ಗುರುಗಳ ಮೂರ್ತಿಗೆ ಹೂ ಹಾರ ಹಾಕಿ  ದೀಪ ಪ್ರಜ್ವಲಿಸಿ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಜರುಗಿದ ಸಭಾಕಾರ್ಯಕ್ರಮದಲ್ಲಿ ಅತಿಥಿ ಗಳನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.

  ಬಿಲ್ಲವರ ಅಸೋಸಿಯೇಷನ್ ಕೇಂದ್ರ ಕಚೇರಿಯ  ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಬಂಗೇರ, ಜೊತೆ ಕಾರ್ಯದರ್ಶಿ ಲಕ್ಷ್ಮೀ ಕೋಟ್ಯಾನ್   ಉಪಸ್ಥಿತರಿದ್ದು ಹಳದಿ ಕುಂಕುಮ ಕಾರ್ಯಕ್ರಮ ದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರನ್ನು ಅಭಿನಂದಿಸಿದರು.  ಕೇಂದ್ರ ಕಚೇರಿಯ ಜತೆ ಕೋಶಾಧಿಕಾರಿ ರಜಿತ್ ಎಲ್ ಸುವರ್ಣ ಸಮಿತಿಯ ಉಪಕಾರ್ಯಾಧ್ಯಕ್ಷ  ರಮೇಶ್ ಡಿ ಕೋಟ್ಯಾನ್  ಕೃಷ್ಣರಾಜ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜ್ಯೋತಿ ಪೂಜಾರಿ  ಅತಿಥಿಯವರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆ ಬಳಿಕ ಮಹಿಳೆಯರು ಹಳದಿ ಕುಂಕುಮವನ್ನು ಹಚ್ಚಿಕೊಳ್ಳುವ ಮೂಲಕ ಪರಸ್ಪರರನ್ನು ಅಭಿನಂದಿಸಿ ಸಂಭ್ರಮಿಸಿದರು.              

     ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ವತ್ಸಲ ಕೆ ಪೂಜಾರಿ ವಾರಿಜಾ ಸನಿಲ್ ವೇದ ಸುವರ್ಣ ಸುಂದರಿ ಪೂಜಾರಿ ಸುಜಾತ ಪೂಜಾರಿ ಪ್ರೀತಿ ಅಮೀನ್ ಲೀಲಾವತಿ ಸಾಲ್ಯಾನ್ ಶೋಭಾ  ಜ್ಯೋತಿ ಕೋಟ್ಯಾನ್ ಸವಿತಾ ಪೂಜಾರಿ ಲಕ್ಷ್ಮಿ ದೇವಾಡಿಗ ರೋಹಿಣಿ ಕೋಟ್ಯಾನ್ ಸರಸ್ವತಿ ಸುವರ್ಣ ಚಂದ್ರಾವತಿ ಪೂಜಾರಿ  ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್,  ಇನ್ನಿತರ ಮಹಿಳಾ ಸದಸ್ಯರು,  ಕಚೇರಿಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 



Related posts

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾರ್ಥನಾ ಪೂಜಾರಿಗೆ ಶೇ 94.40 ಅಂಕ.

Mumbai News Desk

ಶ್ರೀ ಬಾಲಾಜಿ ಕೋ-ಆಪರೇಟಿವ್ ಸೊಸೈಟಿಯ 36ನೇ ವಾರ್ಷಿಕ ಮಹಾಸಭೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ, ಡೊಂಬಿವಲಿ ಸ್ಥಳೀಯ ಕಚೇರಿಯ 35 ನೇ ವಾರ್ಷಿಕೋತ್ಸವಕ್ಕೆ ಚಾಲನೆ

Mumbai News Desk

ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ವತಿಯಿಂದ ಧಾರಾವಿಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿದ್ಯಾಲಯದ ಕನ್ನಡ ಮಾಧ್ಯಮದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

Mumbai News Desk

ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್ -ಹಳದಿಕುಂಕುಮ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಂಸ್ಥಾಪಕ ದಿನಾಚರಣೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಸಮಾಜದ ಮಹಿಳೆಯರಿಗಾಗಿ ಆಯೋಜಿಸಿದ ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ :-

Mumbai News Desk