
ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದಲ್ಲಿ ಮಧ್ವ ನವಮೀ ಆಚರಣೆಯನ್ನು ವೈಭವೋಪೇತವಾಗಿ ಆಚರಿಸಲಾಯಿತು. ಶ್ರೀಪೇಜಾವರ ಮಠದ ಮುಖ್ಯ ಪ್ರಬಂಧಕರಾದ ಡಾ! ರಾಮದಾಸ ಉಪಾಧ್ಯಾಯ ಇವರು ಪ್ರಸನ್ನ ಪೂಜೆ ಮಾಡಿ ಆಶೀರ್ವದಿಸಿದರು.
ಬಳಿಕ ಅಮೇರಿಕಾ ರಾಷ್ಟ್ರದ ನ್ಯೂಯಾರ್ಕ್ ನಗರದಲ್ಲಿ, ಆಚಾರ್ಯ ಮಧ್ವರ ತತ್ವಜ್ಞಾನಪ್ರಸಾರಕಾರ್ಯ ನಡೆಸುತ್ತಿರುವ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರೂ ಶ್ರೀ ಪೇಜಾವರ ಮಠಾಧೀಶರ ಶಿಷ್ಯರೂ ಆದ ವಿದ್ವಾನ್ ಶ್ರೀ ಶ್ರೀಧರ ಆಚಾರ್ಯರು ಉಪನ್ಯಾಸವನ್ನು ನಡೆಸಿಕೊಟ್ಟರು.

ಪರಮಪೂಜ್ಯ ಗುರುಗಳನ್ನು ಸ್ಮರಿಸುವುದರೊಂದಿಗೆ ಶ್ರೀಮಧ್ವಾಚಾರ್ಯರ ಅವತಾರ, ಅವರ ಮಹತ್ವ ಮತ್ತು ಅವರ ಲೀಲೆ.. ಲೋಕಕಲ್ಯಾಣಕ್ಕೆ ನಮ್ಮ ಕರ್ತವ್ಯ ಏನು? ಮುಂತಾದ ವಿಚಾರದಲ್ಲಿ ನೆರೆದ ಭಕ್ತರಿಗೆ ಮನಕ್ಕೆ ಮುದ ನೀಡುವಂತೆ ಸುಂದರವಾಗಿ ತಿಳಿಸಿದರು.
ಪೇಜಾವರ ಮಠದ “ಮಧ್ವೇಶ ಭಜನಾ ಮಂಡಳಿ” ಯಿಂದ ಹರಿ ನಾಮ ಸಂಕೀರ್ತನೆ.. ನರ್ತನಸೇವೆಯೊಂದಿಗೆ ಕಾರ್ಯಕ್ರಮವು ವೈಭವೋಪೇತವಾಗಿ ಸಂಪನ್ನಗೊಂಡಿತು.
ಆರಂಭದಲ್ಲಿ ಪೇಜಾವರ ಮಠದಲ್ಲಿನ ಶಿಲಾಮಯಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಾನದಲ್ಲಿ ಅರ್ಚಕ ರಾಮಚಂಡ ಸಾಮಗ ಶಾಸಾನುಸಾರ ದೈನಂದಿನ ಪೂಜಾವಿಧಿಗಳನ್ನು ನೆರವೇರಿಸಿದರು.
ಶ್ರೀ ಪೇಜಾವರ ಮಠದ ವಿದ್ವಾನ್ ಕೆರ್ವಾಶೆ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ ಸಹಕರಿಸಿದರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು.