32 C
Mumbai
March 7, 2026
Mumbai News Kannada
ಮುಂಬಯಿ

ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ ವಾರ್ಷಿಕ  ಮಹಾಪೂಜೆ ,  ಧಾರ್ಮಿಕ ಸಭೆ, ಯಕ್ಷಗಾನ.





ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಮೆರೆಯುತ್ತಿದೆ ಶನೇಶ್ವರ ಮಂದಿರ- ಶೇಖರ್  ಪಿ ಶೆಟ್ಟಿ

ದಹಿಸರ್ ಪೂರ್ವ ದ ರಾವಲ್ಪಾಡ ಗೋಕುಲ್ ನಗರ್ ,  ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ (ರಿ) ಸಂಚಾಲಕತ್ವದ,ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ 39ನೇ ವಾರ್ಷಿಕ ಮಹಾಪೂಜೆ.  ಯಕ್ಷಗಾನ,  ಹಿರಿಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆಬ್ರವರಿ 14 ರಿಂದ 16 ರವರೆಗೆ ವಿಜೃಂಭಣೆಯಿಂದ ನಡೆಯಿತು.
ಮಹಾಪೂಜೆಯು   ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ, ಡೊಂಬಿವಲಿ ಮತ್ತು ದೇವಸ್ಥಾನದ ಪ್ರಧಾನ ಆರ್ಚಕರಾದ ವಿಜಯ್ ಉಪಾಧ್ಯಾಯ  ಇವರ ನೇತೃತ್ವದಲ್ಲಿ ಹಾಗೂ ತೇಜಸ್ ಭಟ್  ಮತ್ತು  ಪುರೋಹಿತರ ಸಹಭಾಗೀತ್ವದಲ್ಲಿ ಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಹಸ್ರ ಸಂಖ್ಯೆಯ ಭಕ್ತರ ಕೂಡುವಿಕೆಯಲ್ಲಿ  ವಾಸ್ತು ಪೂಜೆ,ವಾಸ್ತು ಬಲಿ, ರಾಕ್ಷೋಘ್ನ ಹೋಮ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಗಣಪತಿ ಹಾಗೂ ಶ್ರೀ ಶನಿ ದೇವರಿಗೆ ನವಕಲಶ ಪ್ರಧಾನಹೋಮ, ಶನಿಶಾಂತಿ, ನಾಗದೇವರ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ, ಗುಳಿಗ ದೈವಕ್ಕೆ ಪಂಚ ಕಲಶಾಭಿಷೇಕ, ಶ್ರೀದೇವಿಯ ಸನ್ನಿಧಾನದಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ,  ಶಿಖರ ಕಳಶಾಭಿಷೇಕ ,  ಮಹಾಪೂಜೆ, ಸ್ವರ್ಣಾಲಂಕಾರ ಸೇವೆ, ಪಲ್ಲ ಪೂಜೆ. ಮಹಾಪೂಜೆ,  ಭಜನೆ,  ಶ್ರೀ ಶನಿ ಗ್ರಂಥ ಪಾರಾಯಣ , ಹಾಗೂ  ಸುರೇಶ್ ಭಟ್ ಕುಂಟಾಡಿ ಯವರಿಂದ ಬಲಿ ಮೂರ್ತಿ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು , ಭವ್ಯ ಮೆರವಣಿಗೆಗೆ ದಿನೇಶ್ ಕೋಟ್ಯಾನ್ ಬಳಗದ ಡೋಲು, ತಾಸೆ ,ಚೆಂಡೆ, ಹುಲಿ ವೇಷ, ಕೊಂಬು,  ಗೊಂಬೆ ವೇಷ,ವಿವಿಧ ಯಕ್ಷಗಾನದ ವೇಷಭೂಷಣಗಳೂ, ಕುಣಿತ ಭಜನೆ ಭಕ್ತರನ್ನು ಆಕರ್ಷಿಸಿತು,


  
  ರಾತ್ರಿ   ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ  ಸುಶೀಲ ಮಹಾಬಲ ಅಮೀನ್ ಹಾಗೂ ಶಕುಂತಲ ಗಣೇಶ್ ಸಾಲಿಯಾನ್ ಮತ್ತು ಮಕ್ಕಳ ಪ್ರಾಯೋಜಕತ್ವದಲ್ಲಿ , ಪಂಚವಟಿ – ವಾಲಿ ಮೋಕ್ಷ –  ಕುಶ ಲವ ಎಂಬ ಪೌರಾಣಿಕ ಕಥಾ ಭಾಗವನ್ನು ತುಳುವಿನಲ್ಲಿ ಯಕ್ಷಗಾನ ಬಯಲಾಟ ರೂಪದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ, ಸಾಂತಕ್ರೂಜ್,ಇವರಿಂದ ಸಾದಾರಪಡಿಸಲಾಯಿತು.

ಯಕ್ಷಗಾನದ ಮಧ್ಯಾoತರದಲ್ಲಿ ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ  ಅಧ್ಯಕ್ಷರಾದ ಶೇಖರ್  ಪಿ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಎಮ್ ಪೂಜಾರಿ, ಗೌರವ ಕೋಶಧಿಕಾರಿ ದೀಪಕ್ ಕೆ ಪೂಜಾರಿ,ಬ್ರಹ್ಮ ಶ್ರೀ ಶಂಕರ್ ನಾರಾಯಣ ತಂತ್ರಿ, ವಿಜಯ್ ಉಪಾಧ್ಯಾಯ ,  ಸಿ ಎನ್ ಪೂಜಾರಿ,
ಇವರ ಉಪಸ್ಥಿತಿಯಲ್ಲಿ ಕ್ಷೇತ್ರದ ಸ್ಥಾಪಕ ಸದಸ್ಯರುಗಳಾದ ಹಾಗೂ ಸೇವಾಕರ್ತರುಗಳಾದ ರವೀಂದ್ರ ವಿ ಶೆಟ್ಟಿ 
(ಶ್ರೀ ವಿಷ್ಣುಮೂರ್ತಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಕಾರ್ಕಳ ) ಮತ್ತು ಆನಂದ್ ಸಿ ಸುವರ್ಣ 
ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅತೀ ಹೆಚ್ಚು ಧನ ಸಂಗ್ರಹ ಮಾಡಿ ಸಹಕರಿಸಿದ ಸುರೇಶ್ ಇರ್ವತ್ತೂರ್, ವಸಂತಿ ಸುವರ್ಣ ಹಾಗೂ  ಅಮಿತ ಶೆಟ್ಟಿ ಮೊದಲಾದವರನ್ನು ಶಾಲು ಹೊದಿಸಿ, ಪುಷ್ಪ ಗುಚ್ಛ ನೀಡಿ ಅಭಿನಂದಿಸಲಾಯಿತು.

ಸನ್ಮಾನಿತರನ್ನು ಮತ್ತು ಸೇವಾಕರ್ತರನ್ನು ಸನ್ಮಾನಿಸಿದ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಶೇಖರ್ ಪಿ ಶೆಟ್ಟಿ ಅವರು ಮಾತನಾಡುತ್ತಾ ನಮ್ಮೀ ದೇವಸ್ಥಾನವು ದಹಿಸರ್ ಪರಿಸರದಲ್ಲಿ ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಮೆರೆದಿದೆ. ದೇವಸ್ಥಾನದ ಸರ್ವ ಸದಸ್ಯರು ದೇವಸ್ಥಾನದ ಅಭಿವೃದ್ಧಿಗಾಗಿ ನಿರಂತರ ಸೇವೆಯಲ್ಲಿ ತೊಡಗಿದ್ದಾರೆ,  ಭಕ್ತರು ಮತ್ತು ದಾನಿಗಳ ಸಹಕಾರದಿಂದ ಪೂಜಾ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ದೇವಸ್ಥಾನದಲ್ಲಿ ವರ್ಷಪೂರ್ತಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವಾಕಾರ್ಯಗಳು ನಡೆಯುತ್ತಿದೆ. ಭಕ್ತರೆಲ್ಲರ ಸೇವಾ ಸಹಕಾರ ಮುಂದಿನ ದಿನಗಳಲ್ಲೂ  ಅಗತ್ಯ ಬೇಕಾಗಿದೆ ಎಂದು ನುಡಿದರು,.

  ಸಭಾ   ಕಾರ್ಯಕ್ರಮವನ್ನು ಪೂಜಾ ಸಮಿತಿಯ ಕಾರ್ಯದರ್ಶಿ ಲಕ್ಷಣ್ ಎಮ್. ಪೂಜಾರಿ ನಿರೂಪಿಸಿದರು

  ಶ್ರೀ ಕ್ಷೇತ್ರದ ಮುಂಭಾಗದಲ್ಲಿ ರಾತ್ರಿ ಪ್ರಾರಂಭವಾದ ಯಕ್ಷಗಾನ ಮರುದಿನ ಬೆಳಿಗ್ಗೆ ತನಕ  ಕಲಾ ಪ್ರೇಕ್ಷಕರನ್ನು ಮನರಂಜಿಸಿತು.
 ಫೆ.16ರಂದು  ಬೆಳಿಗ್ಗೆ 7 ರಿಂದ ಸಂಪ್ರೂಕ್ಸಣೆ, ಮಹಾಪೂಜೆ, ಮಹಾಮಂತ್ರಾಕ್ಸತೆಯೊಂದಿಗೆ ವಾರ್ಷಿಕ ಪೂಜೆ ಸಂಪನ್ನಗೊಂಡಿತು,
ಪೂಜಾ ಕಾರ್ಯಗಳು  ವಿಜೃಂಭಣೆಯಿಂದ ನಡೆಯಲು ದೇವಸ್ಥಾನದ ಆಡಳಿತ ಪದಾಧಿಕಾರಿಗಳಾದ ಶೇಖರ್ ಪಿ ಶೆಟ್ಟಿ(ಅಧ್ಯಕ್ಷ)ಆನಂದ್ ಸಿ ಸುವರ್ಣ(ಉಪಾಧ್ಯಕ್ಷ)ಲಕ್ಷ್ಮಣ್ ಎಂ ಪೂಜಾರಿ(ಗೌರವಪ್ರಧಾನ ಕಾರ್ಯದರ್ಶಿ)ಯೋಗೇಶ್ ಜಿ ಸಾಲಿಯಾನ್(ಜೊತೆ ಕಾರ್ಯದರ್ಶಿ)ದೀಪಕ್ ಕೆ ಪೂಜಾರಿ(ಗೌರವ ಕೋಶಾಧಿಕಾರಿ )ಅಮಿತ ಶೆಟ್ಟಿ(ಜೊತೆ ಕೋಶಾಧಿಕಾರಿ ) ನ್ಯಾಯವಾದಿ ಸೌಮ್ಯ ಎಸ್ ಶೆಟ್ಟಿ,
(ಆಂತರಿಕ ಲೆಕ್ಕ ಪರಿಶೋಧಕ)ಪ್ರಕಾಶ್ ವಿ ಅಮೀನ್
(ಭುವಾಜಿ)ಜಗದೀಶ್ ಎನ್ ಶೆಟ್ಟಿ(ಸಹಾಯಕ ಭುವಾಜಿ)  ಹಾಗೂ ಸಮಿತಿಯ ಜಯ ಕೆ ಪೂಜಾರಿ,ಸುಂದರ್ ಎಸ್ ಪೂಜಾರಿ,ಚೆನ್ನಪ್ಪ ಎನ್ ಪೂಜಾರಿ,ಗಣೇಶ್ ಬಿ ಸಾಲಿಯಾನ್,ಜಯರಾಮ್ ಎನ್ ಮೆಂಡನ್,ಕರುಣಾಕರ್ ಎಂ ಅಮೀನ್,ಸಂತೋಷ್ ಕೆ ಪೂಜಾರಿ,ರವಿ ಎಂ ಅಮೀನ್,ಚಂದ್ರಶೇಖರ್ ಎ ಪೂಜಾರಿ,ಉಮೇಶ್ ಎಸ್ ಅಮೀನ್,ಸುರೇಶ್ ಬಿ ಇರ್ವತ್ತೂರು,ಶ್ಯಾಮ್ ನಾಯಕ್,ಮೋಹನ್ ಪಿ ಸುವರ್ಣ, ಜಯ ಜಿ ಪೂಜಾರಿ ,ದೇವಕಿ ಸಿ ಪೂಜಾರಿ ,ಪದ್ಮಾವತಿ ಎಸ್ ಶೆಟ್ಟಿ ,ರಾಜೀವಿ ಕೆ ಪೂಜಾರಿ,ವಿಮಲಾ ಎಸ್ ಕೋಟ್ಯಾನ್,ಸುಮತಿ ಜಿ ಮೂಲ್ಯ,ವೀಣಾ ಸಿ ಪೂಜಾರಿ,
ಪ್ರಭಾತ ಆರ್ ಹೆಗಡೆ,ಶೋಭಾ ಪಿ ಕೋಟ್ಯಾನ್,ಸುನಿತಾ ಎ ಸುವರ್ಣ,ಉಷಾ ಡಿ ಪೂಜಾರಿ,ಪ್ರದ್ನ್ಯಾ ಪಿ ಕೋಟ್ಯಾನ್,ಮಲ್ಲಿಕಾ ಎಸ್ ಪೂಜಾರಿ,ಅಂಕಿತಾ ವೈ ಸಾಲಿಯಾನ್,ಶಶಿಕಲಾ ಎಸ್ ಕರ್ಕೇರ, ಸವಿತಾ ಎಸ್ ಕುಂದರ್, ಮತ್ತಿತರ ಸದಸ್ಯರು ಹಾಗೂ ಭಕ್ತರು ಸಹಕರಿಸಿದರು.
ಬೆಳಗ್ಗಿನಿಂದಲೇ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀ ದೇವರ ಪ್ರಸಾದ ಹಾಗೂ ಅನ್ನಸಂತರ್ಪಣೆಯನ್ನು ಸ್ವೀಕರಿಸಿದರು.



Related posts

ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ, ಮಹಿಳಾ ದಿನಾಚರಣೆ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ವಿದ್ಯಾರ್ಥಿವೇತನ,  ವಿಧವೆಯರಿಗೆ ಮತ್ತು ವಿಕಲ ಚೇತನರಿಗೆ ಆರ್ಥಿಕ ನೆರವು ವಿತರಣೆ,

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ಅರಸಿನ ಕುಂಕುಮ,

Mumbai News Desk

ವಿಶ್ವ ರಂಗ ದಿನಾಚರಣೆ- 2024ರ ಅಂಗವಾಗಿನಾಟಕ ರಚನಾ ಕಮ್ಮಟ ಮತ್ತು ರಂಗ ನಿರ್ದೇಶಕರ ಸಮ್ಮಿಲನ

Mumbai News Desk

ಬಿಲ್ಲವರ ಅಸೋಸಿಯೇಶನಿನ ಮೀರಾ ರೋಡ್ ಸ್ಥಳೀಯ ಕಚೇರಿಯ ವತಿಯಿಂದ ಆಟಿಡೊಂಜಿ ದಿನ, ವಿದ್ಯಾರ್ಥಿ ವೇತನ ವಿತರಣೆ.

Mumbai News Desk

ಬೋರಿವಲಿ ಐ.ಸಿ. ಕಾಲೋನಿ ಮಂಡಳಿಯ 33ನೇ ಗಣೇಶೋತ್ಸವ ಭಕ್ತಿ ಸಂಭ್ರಮದೊಂದಿಗೆ ಆಚರಣೆ

Mumbai News Desk