
ಪ್ರತಿಷ್ಠಿತ ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾರ್ಥಿ ಸಂಘ,ಮುಂಬಯಿ, ಪ್ರತಿ ವರ್ಷವೂ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸುತ್ತಾ ಬರುತ್ತಿದೆ. ಮುಂಬಯಿಯ ಹಳೇವಿದ್ಯಾರ್ಥಿ ಸಂಘದಲ್ಲಿ ವಿಜಯ ಕಾಲೇಜಿನಲ್ಲಿ ಕಲಿತ ಹಳೇವಿದ್ಯಾರ್ಥಿಗಳು ಸಹಭಾಗಿಯಾಗುತ್ತಿದ್ದಾರೆ.
ಸಂಘವು ಪ್ರತಿವರ್ಷ ವಿಜಯ ಕಾಲೇಜಿನಲ್ಲಿ ಕಲಿಯುವ 50 ಕ್ಕೂ ಹೆಚ್ಚಿನ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುತ್ತಾ ಬಂದಿದೆ.
ಹಳೇವಿದ್ಯಾರ್ಥಿಗಳು ತಮ್ಮ ಸಂಘದ ಸ್ನೇಹ ಮಿಲನದಲ್ಲಿ ತಮಗೆ ಕಲಿಸಿದ ಗುರುಗಳನ್ನು ಮುಂಬಯಿಗೆ ತರಿಸಿ,ಅವರಿಗೆ ಅಭಿನಂದಿಸಿ ಗುರುವಂದನಾ ಕಾರ್ಯಕ್ರಮ ನಿಯೋಜಿಸುತ್ತಾ ಬಂದಿದೆ. ಅಲ್ಲದೆ ಕಾಲೇಜಿನಲ್ಲಿ ಕಲಿತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ,ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ, ಸ್ನೇಹ ಮಿಲನದಲ್ಲಿ ವಿಶೇಷ ಸಾಧಕ ಪುರಸ್ಕಾರವನ್ನ ಮಾಡುತ್ತಿದ್ದಾರೆ.
ಈ ವರ್ಷ ವಾರ್ಷಿಕ ಸ್ನೇಹ ಮಿಲನವು ಫೆಬ್ರವರಿ 22ರ ಶನಿವಾರ ಸಾಯಂಕಾಲ ಸಂಜೆ 5.00 ಗಂಟೆಯಿಂದ ಅಂಧೇರಿಯ ಸಾಕಿನಾಕದಲ್ಲಿರುವ ಪೆನಿಂನ್ಸುಲಾ ಗ್ರಾಂಡ್ ಹೋಟೆಲ್ ನಲ್ಲಿಜರಗಲಿರುವುದು .
ಈ ಸಂದರ್ಭದಲ್ಲಿ ಬಂಟರ ಜಾಗತಿಕ ಒಕ್ಕೂಟದ ಅಧ್ಯಕ್ಷ ಮತ್ತು ಕಾಲೇಜಿನ ಹಳೇವಿದ್ಯಾರ್ಥಿ ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಇವರು ಮುಖ್ಯ ಅಥಿತಿಗಳಾಗಿ ಉಪಸ್ಥಿತರಿರುವರು.
ಕಾಲೇಜು ಪ್ರಿನ್ಸಿಪಾಲ್ ವೆಂಕಟೇಶ್ ಭಟ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ವರ್ಷದ ಗುರುವಂದನೆಯನ್ನು ಕಾಲೇಜಿನ ನಿವೃತ್ತ ಪ್ರಾಚಾರ್ಯರುಗಳಾದ ಪ್ರೊ.ಅರುಣಕುಮಾರ ಎಸ್ ಆರ್ ಮತ್ತು ಪ್ರೊ.ಉಷಾರಾಣಿ ಸುವರ್ಣ ಸ್ವೀಕರಿಲಿದ್ದಾರೆ.
ಹಳೆ ವಿದ್ಯಾರ್ಥಿಗಳಾದ ಹರಿಶ್ಚಂದ್ರ ಹೆಜಮಾಡಿ (ನಿವೃತ್ತ ಡೆಪ್ಯೂಟಿ ಎಸ್ ಪಿ ) ಮತ್ತು ವಿಶ್ವಾಜಿತ್ ಕೋಟಿಯನ್ (ದುಬೈ)ಇವರು ವಿಶೇಷ ಸಾಧಕ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಳೇವಿದ್ಯಾರ್ಥಿಗಳ ಮಕ್ಕಳ ಶೈಕ್ಷಣಿಕ ಸಾಧನೆಗಳನ್ನು ಪರಿಗಣಿಸಿ ಗೌರವಿಸಲಾಗುವುದು ಎಂದು,ವಿಜಯ ಕಾಲೇಜು ಮುಲ್ಕಿ ಹಳೇವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಆನಂದ ಶೆಟ್ಟಿ, ಅಧ್ಯಕ್ಷ ವಾಸು ಸಾಲಿಯಾನ್. ಉಪಾಧ್ಯಕ್ಷ ಅಡ್ವಕೇಟ್ ಶೇಖರ್ ಭಂಡಾರಿ, ಕಾರ್ಯದರ್ಶಿ ಭಾಸ್ಕರ್ ಬಿ ಶೆಟ್ಟಿ. ಕೋಶಾಧಿಕಾರಿ ಸಿಎ ರೋಹಿತಾಕ್ಷ ದೇವಾಡಿಗ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿರುವಂತೆ ವಿನಂತಿಸಿಕೊಂಡಿದ್ದಾರೆ.