April 2, 2025
ಮುಂಬಯಿ

ಕುಮಾರ ಕ್ಷತ್ರಿಯ ಸಂಘ ಮುಂಬಯಿ, 59ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ

ಸಂಸ್ಥೆಯ ಉನ್ನತಿಗೆ ಸದಸ್ಯರ ಸಂಖ್ಯೆ ಹೆಚ್ಚಿಸೋಣ : ಎಂ. ಡಿ. ರಾವ್ 

ಚಿತ್ರ, ವರದಿ; ರಮೇಶ್ ಉದ್ಯಾವರ

ಮುಂಬಯಿ, ಫೆ. 20:   ಮಹಾ ನಗರದಲ್ಲಿರುವ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಕುಮಾರ ಕ್ಷತ್ರಿಯಸಂಘ, ಮುಂಬಯಿಯು 59ನೇ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯ ನಾರಾಯಣ ಮಹಾಪೂಜೆಯು ಸಾಂತಕ್ರೂಜ್ ಪೂರ್ವದ ಪೇಜಾವರ ಮಠ ಸಭಾಗೃಹದಲ್ಲಿ ಜರುಗಿತು . ಸಂಘದ ಅಧ್ಯಕ್ಷ ಎಂ.ಡಿ. ರಾವ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ ಪೆ. 16ರಂದು ಬೆಳಿಗ್ಗೆ 10.00 ಗಂಟೆಗೆ  ಸರಿಯಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ  ಬಳಿಕ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ ಸಂಭ್ರಮದಿಂದ  ನೆರವೇರಿತು. ಮಧ್ಯಾಹ್ನ 12.15 ಗಂಟೆಗೆ ಕುಮಾರ ಕ್ಷತ್ರಿಯ ಸಂಘ, ಮುಂಬಯಿಯ ಅಧ್ಯಕ್ಷ ಎಂ ಡಿ ರಾವ್ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶಾಲು ಎಂ. ರಾವ್ ಇವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಯಶಸ್ವಿಯಾಗಿ ನೆರವೇರಿತು. 

   ಆರಂಭದಲ್ಲಿ ಗಣೇಶ ಸ್ತುತಿಯನ್ನು ಡಾ. ರೇಣುಕಾ ಅಮೀನ್  ಮತ್ತು ಅವರ ಬಳಗ ಸಾದರ ಪಡಿಸಿದರು. ಕಳೆದ ವರ್ಷ ದಿವಂಗತರಾದ  ಸಮಾಜದ ಮಹನೀಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಎಂ. ಡಿ. ರಾವ್  ಬಂದ ಎಲ್ಲ ಮಹನೀಯರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಬಾಂಧವರ    ಶಾಲಾ ಕಾಲೇಜಿನಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ  ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಮತ್ತು ಸಂಘದ  ಪ್ರಗತಿಗೋಸ್ಕರ ಶ್ರಮಿಸಿದ ಹಾಗೂ ದಿವಂಗತ ಕಾರ್ಯಕರ್ತರ ಕುಟುಂಬದವರಿಗೆ ಶಾಲು ಹೊದಿಸಿ ,ನೆನಪಿನ ಕಾಣಿಕೆ ನೀಡಿ ಸನ್ಮಾನಿಲಾಯಿತು.

ಲೆಕ್ಕ ಪತ್ರವನ್ನು ಸಂಘದ‌ ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್ ಸಾದರ ಪಡಿಸಿದರು.

ನಂತರ ಅಧ್ಯಕ್ಷರ ಭಾಷಣದಲ್ಲಿ  ಪೂಜೆಗೆ ಆಗಮಿಸಿದ ಎಲ್ಲಾ ಗಣ್ಯರಿಗೆ ಹೃತ್ಪೂರ್ವಕ ವಂದನೆ ಸಲ್ಲಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಸ್ಥೆಯ ಉನ್ನತಿ ಹಾಗೂ ಒಗ್ಗಟಿಗಾಗಿ ಸದಸ್ಯರು ಸಂಖ್ಯೆ ವೃದ್ಧಿ ಆಗಬೇಕಾಗಿದೆ  ಹಾಗಾಗಿ ಮಹಾನಗರದಲ್ಲಿ ನಮ್ಮ ಸಂಸ್ಥೆಯನ್ನು ಸದೃಢ ಹಾಗೂ ಬಲಿಷ್ಠ ಗೊಳಿಸಲು ಸದಸ್ಯತ್ವ ನೋಂದಣಿ ಅಭಿಯಾನ ಪ್ರಾರಂಭವಾಗಬೇಕು. ಸದಸ್ಯರು ಹೆಚ್ಚು  ಸಂಖ್ಯೆಯಲ್ಲಿ ಆಗಮಿಸಿದಾಗ  ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತರುತ್ತದೆ.ಹಾಗಾಗಿ ಸದಸ್ಯರ  ಸಂಸ್ಥೆಯನ್ನು ವೃದ್ಧಿಸಿ ಸಮಾಜವನ್ನು ಬಲಿಷ್ಠಗೊಳಿಸಲು ಸದಸ್ಯರು ಪ್ರಯತ್ನಿಸಬೇಕು  ಎಂದು ಹೇಳಿದ ಅವರು ಹಿರಿಯರು ಸಂಸ್ಥೆಗೆ ನೀಡಿದ ತ್ಯಾಗ ಸೇವೆಯನ್ನು ಈ ಸಂದರ್ಭದಲ್ಲಿ  ಇದೇ ಸಂದರ್ಭದಲ್ಲಿ ಸ್ಮರಿಸಿದರು. ಸಮಾಜದ ದೇವಸ್ಥಾನ ಹಾಗೂ ಕಾಂಜ್ಞನ್ ಗಾಡ್ ನಲ್ಲಿರುವ ಸಮಾಜ ಭವನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಊರಿನ ಸಮಾಜದ‌ ಜಾಗದಲ್ಲಿ ಕಟ್ಟುವ ಶಾಪಿಂಗ್ ಮಾಲ್ ಗೆ  ಧನ ಸಹಾಯ ಮಾಡಬೇಕೆಂದು ಸಮಾಜ ಬಾಂಧವರಲ್ಲಿ ವಿನಂತಿಸಿದರು. ಜಾತಿ ಪ್ರಮಾಣ ಪತ್ರ ಮತ್ತು ಸಂಸ್ಥೆಗೆ ಆಫೀಸ್ ಖರೀದಿಸುವ ಬಗ್ಗೆ ಚರ್ಚಿಸಲಾಯಿತು. 

 ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ ರಾವ್ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು  ಇಂದಿನ  ಕಾರ್ಯಕ್ರಮ  ತುಂಬಾ ಚೆನ್ನಾಗಿ ಮೂಡಿ ಬರಲು ಮಹಿಳೆಯರು ಸಹಕರಿಸಿದ್ದಾರೆ ಎಲ್ಲರಿಗೂ  ಕೃತಜ್ಞತೆಗಳು ಹಾಗೂ ಸಂಸ್ಥೆ ವತಿಯಿಂದ ಜರಗುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಯಾಗಿ ನಿಮ್ಮ ಸಮಸ್ಯೆ ವಿಚಾರವನ್ನು ಇಲ್ಲಿ ತಿಳಿಸಬೇಕು ಆಗ ನಿಮ್ಮ ಸಮಸ್ಯೆ ಗೆ ಪರಿಹಾರ ಕಂಡುಕೊಳ್ಳಬಹುದು. ಏಕೆಂದರೆ ಸಂಸ್ಥೆ ಯಾವತ್ತೂ ಒಬ್ಬರಿಂದ ನಡೆಯಲು ಸಾಧ್ಯವಿಲ್ಲ ಅದಕ್ಕೆ ಸಂಘಟನೆ ಸಹಕಾರ ಮುಖ್ಯ ಎಂದು ಹೇಳಿದ ಅವರು ಸದಸ್ಯರು ಮಕ್ಕಳನ್ನು ಊರಿಗೆ ಕರೆದುಕೊಂಡು ಹೋಗುವಾಗ ಊರಿನ ನಮ್ಮ ಕುಲದೇವರಾದ ವಿಷ್ಣು ಧೂಮಾವತಿ ಸಂನಿಧಾನಕ್ಕೆ ತಪ್ಪದೆ ಭೇಟಿ ನೀಡಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಕುಮಾರ ಕ್ಷತ್ರಿಯ ಸಂಘ ಮುಂಬಯಿಯ ಉಪಾಧ್ಯಕ್ಷ  ರವಿ ಜಿ. ಚಂದ್ರಗಿರಿ, ಗೌ. ಪ್ರ. ಕಾರ್ಯದರ್ಶಿ    ಉಮಾನಾಥ ವಿ. ರಾವ್, ಜೊತೆ ಕೋಶಾಧಿಕಾರಿ ಸುರೇಂದ್ರ ಎಚ್. ಎ. ಮತ್ತು ಜೊತೆ ಕಾರ್ಯದರ್ಶಿ ಸಾಗರ  ಪಿ. ರಾವ್ ಮತ್ತು  ಸಮಿತಿ ಸದಸ್ಯರಾದ   ರವಿ ಎಸ್. ಕಲ್ನಾಡ್, ಅನಿಲ್ ಜಿ. ರಾವ್,  ಪ್ರಶಾಂತ್ ನಾಥ್, ಪ್ರಶಾಂತ ಆರ್. ರಾವ್, ಅನುಪ್ ಜೆ.ರಾವ್ ಮಹಿಳಾ ವಿಭಾಗದವತಿಯಿಂದ  ಕಾರ್ಯಾಧ್ಯಕ್ಷೆ ಶಾಲು ಎಂ.‌ ರಾವ್, ಉಪ ಕಾರ್ಯಾಧ್ಯಕ್ಷೆ  ಉಮಾ ಎಸ್. ರಾವ್,   ಸಲಹೆಗಾರರಾದ ಪ್ರಭಾ ಎಂ. ರಾವ್  ಮತ್ತು ಕೋಶಾಧಿಕಾರಿ ಇಂದುಮತಿ ಎ. ರಾವ್ ಹಾಗೂ  ಮಹಿಳಾ ಸಮಿತಿ ಸದಸ್ಯರಾದ ವಿಶಾಲಾಕ್ಷಿ ಎ. ಚಂದ್ರಗಿರಿ, ಬಿಂದು ಕುಂದರ್ ,‌  ಶಯಾತ್ರಿ ವಿ. ರಾವ್ ಮತ್ತು ರೇಖಾ ಸಾವಂತ್ ಇವರೆಲ್ಲರೂ ಉಪಸ್ಥಿತಿತರಿದ್ದರು.

ಕಾರ್ಯಕ್ರಮದ ನಿರೂಪಣೆ ಸಂಘದ ಮಹಿಳಾವಿಭಾಗದ ಗೌ. ಪ್ರ. ಕಾರ್ಯದರ್ಶಿ ಕವಿತಾ ರೋಹನ್ ಕಾರ್ಯಕ್ರಮ ನಿರೂಪಣೆಯಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಗೌ. ಪ್ರ. ಕಾರ್ಯದರ್ಶಿ ಉಮನಾಥ್ ವಿ. ರಾವ್  ಧನ್ಯವಾದ ಅರ್ಪಿಸಿದರು.

Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನೀಲ್ ರಾಜೇಶ್ ಶೆಟ್ಟಿ ಶೇ 91.20 ಅಂಕ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಮಿತ್ ಉಮೇಶ್ ಪೂಜಾರಿಗೆ ಶೇ 87.40 ಅಂಕ.

Mumbai News Desk

ಕುಲಾಲ ಸಂಘದ ವತಿಯಿಂದ ಸಂಭ್ರಮದ ಗಣೇಶೋತ್ಸವ,

Mumbai News Desk

ಮುಂಬಯಿ ನ್ಯೂಸ್ ವೀಕ್ಷಕರ / ಓದುಗರ ಮನೆ, ಮನೆ ಗಣಪತಿ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಥಾ ಸತೀಶ್ ಶೆಟ್ಟಿ ಗೆ ಶೇ 92 ಅಂಕ.

Mumbai News Desk

ಬಿಲ್ಲವರ ಎಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk