ಮುಂಬಯಿ : ಪನ್ವೆಲ್ ಪರಿಸರದಲ್ಲಿ ಜನಜನಿತವಾಗಿರುವ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ನೀಡುತ್ತಿರುವ, ಕರ್ನಾಟಕ ಸಂಘ ಪನ್ವೆಲ್ ಇದರ ವಾರ್ಷಿಕೋತ್ಸವ ಸಮಾರಂಭವು ಫೆ. 23ರಂದು ಸಾಯಂಕಾಲ 5.30 ರಿಂದ 9.30 ತನಕ ಕರ್ನಾಟಕ ಸಂಘ ಗ್ರೌಂಡ್, ಕರ್ನಾಟಕ ಸಂಘದ ಕಟ್ಟಡದ ಹಿಂದುಗಡೆ ನ್ಯು ಪನ್ವೆಲ್ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕರ್ನಾಟಕ ಸಂಘ ಪನ್ವೆಲ್ ನ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೆಟ್ಟಿ ಪದ್ಮ ಇವರ ಅಧ್ಯಕ್ಷತೆಯಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ಮಾಜಿ ಸಭಾಪತಿ ಶ್ರೀ ಸಂತೋಷ್ ಜಿ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ವೈದ್ಯ ಡಾ. ಶಶಿರ್ ಶೆಟ್ಟಿ, ಗೌರವ ಅತಿಥಿಗಳಾಗಿ ಸಾಹಿತಿ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಸಂಗೀತ ವಿಶಾರದೆ ಶ್ರೀಮತಿ ನಳಿನಿ ರಾವ್ ಉಪಸ್ಥಿತರಿರುವರು. ಮನೋರಂಜನೆಯ ಅಂಗವಾಗಿ ಸಂಘದ ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಯ ಕಾರ್ಯಕ್ರಮ, ನೃತ್ಯ ವೈಭವ ನಡೆಯಲಿದೆ. ಅಲ್ಲದೆ ಶ್ರೀ ಸತೀಶ್ ಶೆಟ್ಟಿ ಕುತ್ಯಾರ್ ರಚಿಸಿ ಶ್ರೀ ಶೈಲೇಶ್ ಪುತ್ರನ್ ನಿರ್ದೇಶನದ, ಕನ್ನಡ ಪೌರಾಣಿಕ ನಾಟಕ ’ಕರ್ಣ ಅವಸಾನ’ ಪ್ರದರ್ಶನ ವಿದೆ
ತುಳು ಕನ್ನಡಿಗರು ಈ ವಾರ್ಷಿಕ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕಾಗಿ ಕರ್ನಾಟಕ ಸಂಘ ಪನ್ವೆಲ್ ಪರವಾಗಿ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೆಟ್ಟಿ ಪದ್ಮ, ಕಾರ್ಯಾಧ್ಯಕ್ಷರಾದ ಶೀ ಸಂತೋಷ್ ಜಿ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಗುರು ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀ ಸತೀಶ್ ಶೆಟ್ಟಿ, ಕುತ್ಯಾರ್, ಜೊತೆ ಕಾರ್ಯದರ್ಶಿ ಶ್ರೀಮತಿ ಕಾಂತಿ ವಿ. ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಸುಧಾ ಎನ್ ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ಶ್ರೀಮತಿ ಶಬುನ ಎಸ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಸಲಹಾ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.
ಕಾರ್ಯಕ್ರಮದ ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.