ಡೊಂಬಿವಲಿ ಪಶ್ಚಿಮ ಗೋಪಿನಾಥ್ ಚೌಕ್ ಬಳಿ, ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆಬ್ರವರಿ 26ರಂದು,ಬುಧವಾರವಿವಿಧ ಧಾರ್ಮಿಕ ಆಚರಣೆಯೊಂದಿಗೆ ಜರಗಲಿದೆ.
ಅಂದು ಬೆಳಗ್ಗೆ 7.30ಕ್ಕೆ ರುದ್ರಾಭಿಷೇಕವಾದ ಬಳಿಕ ಬೆಳಗ್ಗೆ 8.00 ರಿಂದ ರಾತ್ರಿ 8.00 ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯಾಗಲಿದೆ.
ಶಿವರಾತ್ರಿ ಮಹೋತ್ಸವದಂದು ಭಜನಾ ಸೇವೆ ನೀಡುವ ಮಂಡಳಿಗಳು.
ಬೆಳಗ್ಗೆ 8.00 ಶ್ರೀ ಜಗದಂಬಾ ಮಂದಿರ
ಬೆಳಗ್ಗೆ 9.30 ಗೆಳೆಯರ ಸ್ವಲಂಬನ ಕೇಂದ್ರ ಡೊಂಬಿವಿಲಿ ಬೆಳಗ್ಗೆ 10.15 ಬ್ರಾಮರಿ ಭಜನಾ ಮಂಡಳಿ ಡೊಂಬಿವಿಲಿ ಬೆಳಿಗ್ಗೆ 11.00 ಜೈ ಭವಾನಿ ಶನೀಶ್ವರ ಮಂದಿರ ಅಜಡೆಗಾಂವ್ ಡೊಂಬಿವಲಿ
ಬೆಳಗ್ಗೆ 11.45 ಕ್ಕೆ ಬ್ರಾಮರಂಬಿಕೆ ಭಜನಾ ಮಂಡಳಿ ಡೊಂಬಿವಿಲಿ
ಮಧ್ಯಾಹ್ನ 12.30 ಬಂಟ್ಸ್ ಸಂಘ ಡೊಂಬಿವಿಲಿಯ ಮಹಿಳಾ ವಿಭಾಗ
ಮಧ್ಯಾಹ್ನ 1.15 ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿ
ಮಧ್ಯಾಹ್ನ 2.00 ವಿಷ್ಣು ಮಂದಿರ-ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಿಲಿ
ಮಧ್ಯಾಹ್ನ 2.45 ದೇವಾಡಿಗ ಸಂಘ,ಡೊಂಬಿವಿಲಿ
ಮಧ್ಯಾಹ್ನ 3.30 ಸಿರಿನಾಡ ವೆಲ್ಫೇರ್ ಅಸೋಸಿಯೇಷನ್ ಡೊಂಬಿವಿಲಿ
ಸಂಜೆ 4.15 ಶಬರಿ ಭಜನಾ ಮಂಡಳಿ ಡೊಂಬಿವಿಲಿ ಸಂಜೆ 5.00 ಶ್ರೀ ರಾಧಕೃಷ್ಣ ಶನೀಶ್ವರ ಮಂದಿರ ಡೊಂಬಿವಿಲಿ
5.45ಕ್ಕೆ ಚಿಣ್ಣರಬಿಂಬ ಡೊಂಬಿವಿಲಿ
ಸಂಜೆ 6.15 ಶಬರಿ ಭಜನಾ ಮಂಡಳಿ ಡೊಂಬಿವಿಲಿ
6.45 ಕ್ಕೆ ಶ್ರೀ ಜಗದಂಬಾ ಮಂದಿರ
ಶ್ರೀ ಜಗದಂಬಾ ಮಂದಿರದ ಮಹಾಶಿವರಾತ್ರಿ ಉತ್ಸವದಲ್ಲಿ ಸದ್ಭಕ್ತರು ಪಾಲ್ಗೊಂಡು ಶ್ರೀ ದೇವರ ತೀರ್ಥ ಪ್ರಸಾದ ಸ್ವೀಕರಿಸುವಂತೆ
ಮಂದಿರದ ಗೌರವ ಅಧ್ಯಕ್ಷರು, ಅಧ್ಯಕ್ಷರು,ಪದಾಧಿಕಾರಿಗಳು,
ಮಹಿಳಾ ವಿಬಾಗದ ಪದಾಧಿಕಾರಿಗಳು, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಪ್ರಕಟಣೆಯಲ್ಲಿ ಕೇಳಿ ಕೊಂಡಿದ್ದಾರೆ.