35.8 C
Karnataka
March 31, 2025
ಮುಂಬಯಿ

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

ಮಹಿಳೆಯರು ಸ್ವಾವಲಂಬಿಗಳಾಗಿ ದುಡಿಯುವಲ್ಲಿ ಯಶಸ್ವಿಯಾಗಬೇಕು : ಅನುಪಮ ಶೆಟ್ಟಿ

ಶಿವಸೇನಾ ಸೌತ್ ಇಂಡಿಯನ್ ಸೆಲ್ ಡೊಂಬಿವಲಿ ಹಾಗೂ ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ ಫೆಬ್ರವರಿ 10 ರ ಸಂಜೆ ಡೊಂಬಿವಲಿ ಪೂರ್ವ ದತ್ತ ನಗರದ ಲೇವಾ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ 14 ಮಹಿಳಾ ಭಚತ್ ಘಟಕ ಹಾಗೂ ಶಿವಸೇನಾ ದಕ್ಷಿಣ ಭಾರತ ಘಟಕದ ಮಹಿಳಾ ವಿಭಾಗದ , ಸದಸ್ಯೆಯರು ಪಾಲ್ಗೊಂಡಿದ್ದರು.

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷೆ ಅನುಪಮ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳೆಯರು, ತಮ್ಮತಮ್ಮ ತಂಡದೊಂದಿಗೆ ನೃತ್ಯ,
ಭಜನೆ ಕುಣಿತ, ಜಾನಪದ ನೃತ್ಯ, ಈಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಮಹಿಳಾ ಸ್ವ ಉದ್ಯೋಗಿ ಗಳಾದ 12 ಮಹಿಳೆಯರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಮಹಿಳೆಯರಿಗಾಗಿ ಸರಕಾರದ ಅನೇಕ ಯೋಜನೆಗಳು ಜಾರಿಯಲ್ಲಿದ್ದು ಅದರ ಸದುಪಯೋಗವನ್ನು ಎಲ್ಲಾ ಮಹಿಳೆಯರು ಪಡೆಯಬೇಕು, ಮಹಿಳೆಯರ ಹಕ್ಕನ್ನು ತಿಳಿದು, ಮಹಿಳೆಯರು ಸ್ವಾವಲಂಬಿಗಳಾಗಿ ದುಡಿಯುವಲ್ಲಿ ಯಶಸ್ವಿಯಾಗಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮತಿ ಅನುಪಮ ಶೆಟ್ಟಿ ಅವರು ಹೇಳುತ್ತಾ ಇನ್ನು ಮುಂದೆಯೂ ಹೆಚ್ಚಿನ ಕಾರ್ಯಕ್ರಮದಲ್ಲಿ ಮಹಿಳೆಯರು ಭಾಗವಹಿಸುವಂತಾಗಲಿ ಎನ್ನುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಹಾಗು ಕಾರ್ಯಕ್ರಮದ ಸಂಚಲಕರಿಗೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಕುಂಭ ಮೇಳ ದಿಂದ ತಂದ ಗಂಗಾ ಜಲ ಹಾಗು ಪ್ರಸಾದವನ್ನು ವಿತರಿಸಲಾಯಿತು.

ಸ್ವಾತಿ ಕಾರ್ಯಕ್ರಮ ನಿರೂಪಿಸಿದರೆ, ಪ್ರೇಮ ಸುವರ್ಣ, ವಿಶಾಲ ದೇವಾಡಿಗ, ಸಂಧ್ಯಾ ಎಕ್ಕಾರು ಮತ್ತಿತರ ಸಂಗಡಿಗರು ಕಾರ್ಯಕ್ರಮ ನಿರ್ವಹಿಸುವಲ್ಲಿ ಸಹಕರಿಸಿದರು.

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನಡೆಸುತ್ತಿರುವ ಶ್ರೀ ಮೂಕಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ದುರ್ಗಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಬ್ರಾಮರಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಜಗದಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಲಲಿತಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಪ್ರಭಾಂಬಿಕಾ ಮಹಿಳಾ ಬಚತ್ ಗತಟ್, ಶ್ರೀ ಶಾರದಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಸ್ವರ್ಣಾಬಿಕಾ ಮಹಿಳಾ ಬಚತ್ ಗಟ್, ಶ್ರೀ ಚಿತ್ರಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಗೀತಾಂಬಿಕಾ ಮಹಿಳಾ ಬಚತ್ ಗಟ್, ಶ್ರೀ ಕಟೀಲಾಂಬಿಕಾ ಮಹಿಳಾ ಬಚತ್ ಗ, ಶ್ರೀ ಯಶಸ್ವಿ ಮಹಿಳಾ ಬಚತ್ ಗಟ್, ಶ್ರೀ ವೈಭವ್ ಲಕ್ಷ್ಮಿ ಮಹಿಳಾ ಬಚತ್ ಗಟ್, ಶ್ರೀ ಶಕ್ತಿ ಮಹಿಳಾ ಬಚತ್ ಗಟ್ ನ ಸದಸ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

ಪತಾರ್ಲಿ ದುರ್ಗಾ ಪರಮೇಶ್ವರಿ ದೇವಿಯ ನವರಾತ್ರಿ ಪೂಜೆ.

Mumbai News Desk

ಮಲಾಡ್ ಲಕ್ಷ್ಮಣ ನಗರದ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ,

Mumbai News Desk

ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್, ಮುಂಬಯಿ : ವಾರ್ಷಿಕ ವಿಹಾರಕೂಟ

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಇದರ 41ನೇ ವಾರ್ಷಿಕ ಮಹಪೂಜೆ ಸಂಪನ್ನ

Mumbai News Desk

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk