September 6, 2026
Mumbai News Kannada
ಮುಂಬಯಿ

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ – ಆಷಾಢ ಹಬ್ಬ ಆಚರಣೆ,





ಸಮಿತಿಯ ಕಾರ್ಯಕ್ರಮ ಇತರರಿಗೆ ಮಾದರಿ:   ನ್ಯಾ. ಜಗನ್ನಾಥ್  ಶೆಟ್ಟಿ ಪಣಿಯೂರು  

ಪೂಜಾ ಸಮಿತಿಯ ಎಲ್ಲಾ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆ. ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗ ಹಾಗೂ ಯುವ ವಿಭಾಗ ಸಾಂಸ್ಕೃತಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಬಹಳ ಉತ್ಸಾಹದಿಂದ ನಡೆಸಿಕೊಡುತ್ತಿದ್ದು ಸದಸ್ಯರೆಲ್ಲರೂ ಸ್ಪೂರ್ತಿಯಿಂದ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ  ಪಣಿಯೂರು ತಿಳಿಸಿದರು.         

                  

ಮಲಾಡ್ ಪೂರ್ವ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಆಷಾಢ ಹಬ್ಬ ಕಾರ್ಯಕ್ರಮ ಮತ್ತು “ತುಳುವೆರೆನ ಆಟಿದ ಕಥೆ”ತುಳು ನಾಟಕ ಪ್ರದರ್ಶನವು ಜು. 20 ರಂದು ಉತ್ಕರ್ಷ ವಿದ್ಯಾ ಮಂದಿರ, ಪುಷ್ಪ ಪಾರ್ಕ್ ದಪ್ತರೆ ರೋಡ್, ಮಲಾಡ್ ಪೂರ್ವ ಇಲ್ಲಿ ನಡೆದಿದ್ದು,   ಅಧ್ಯಕ್ಷತೆಯನ್ನ ವಹಿಸಿ ಬೀಸು ಕಲ್ಲಿಗೆ ಅಕ್ಕಿಯನ್ನು ಹಾಕಿ ಬೀಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ
ಯುವ ಜನಾಂಗವು ನಾಟಕ, ಯಕ್ಷಗಾನ ಮಾತ್ರವಲ್ಲದೆ ಕುಣಿತ ಭಜನೆಯಲ್ಲಿ ಪಾಲ್ಗೊಂಡು ಪ್ರಶಸ್ತಿ  ಗಳಿಸಿದ್ದಾರೆ. ಪರಿಸರದ ಎಲ್ಲಾ ಸಮುದಾಯದವರು ಒಂದುಗೂಡಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಎಲ್ಲಾ ಕಾರ್ಯವನ್ನು ಯಶಸ್ಸಿಯಾಗಿ ನಡೆಸುತ್ತಿದೆ ಎಂದರು. 

ಮಹಿಳಾ ವಿಭಾಗದ  ಕಾರ್ಯಾಧ್ಯಕ್ಷೆ ಶ್ರೀಮತಿ ಕೆ  ಆಚಾರ್ಯ ಮಾತನಾಡುತ್ತಾ ಸಮಿತಿಯ ಮಹಿಳೆಯರು ಸಂಘಟಿತರಾಗಿ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಮುಂದಿನ ಆಗಸ್ಟ್ ತಿಂಗಳು 10 ನಡೆಯಲಿರುವ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ಎಂದು ಸಮಿತಿಯ ಮಹಿಳೆಯರು ತಾಳಮದ್ದಳೆ ಕಾರ್ಯಕ್ರಮವನ್ನು ನೀಡಲಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ಆರೋಗ್ಯದ ಕಡೆ ಗಮನ ಹರಿಸಿ, ಸಂತೋಷವಾಗಿರಲು ಸಂಘ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ನುಡಿದರು.

ವೇದಿಕೆಯಲ್ಲಿ  ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ  ಕಾರ್ಯದರ್ಶಿ ಸನತ್ ಪೂಜಾರಿ  .ಕೋಶಾಧಿಕಾರಿ ಸುರೇಂದ್ರ ಆಚಾರ್ಯ, ಸಂಚಾಲಕರಾದ ದಿನೇಶ್ ಕುಲಾಲ್, ಉಪಾಧ್ಯಕ್ಷರುಗಳಾದ ವಿ. ಕುಮಾರೇಶ್ ಆಚಾರ್ಯ . ಸಂತೋಷ್ ಪೂಜಾರಿ . ಜಗನ್ನಾಥ್ ಮೆಂಡನ್. ದಿನೇಶ್ ಪೂಜಾರಿ, ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ, ಜೊತೆ ಕಾರ್ಯದರ್ಶಿ, ಲಕ್ಷ್ಮಣ್ ರಾವ್, ಮಹಿಳಾ ವಿಭಾಗದ   ಕಾರ್ಯದರ್ಶಿ ಶೀಲಾ ಎಂ ಪೂಜಾರಿ,  ಉಪಕಾರ್ಯಾಧ್ಯಕ್ಷರುಗಳಾದ , ಗೀತಾ ಜೆ ಮೆಂಡನ್, ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್, ವಿದ್ಯಾ ನಾಯಕ್.

ಜೊತೆ ಕೋಶಾಧಿಕಾರಿಗಳಾದ  ಭಾರತಿ ಆಚಾರ್ಯ,ವಿದ್ಯಾ ಆಚಾರ್ಯ,  ಸಲಹೆಗಾರರಾದ ಮೋಹಿನಿ ಜೆ ಶೆಟ್ಟಿ ಮತ್ತು ರತ್ನ ಕುಲಾಲ್,  ಯುವ ವಿಭಾಗದ ಉಪಕಾರ್ಯಾಧ್ಯಕ್ಷರಾದ ಪ್ರಣಿತಾ ವರುಣ್ ಶೆಟ್ಟಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಸಮಾಜ ಸೇವಕ ಉದ್ಯಮಿ ಸುನಿಲ್ ಸಾಲ್ಯಾನ್, ಭಾರತ್ ಬ್ಯಾಂಕಿನ ನಿರ್ದೇಶಕ, ಸಮಿತಿಯ ಉಪಾಧ್ಯಕ್ಷರೂ ಆದ ಸಂತೋಷ್ ಪೂಜಾರಿ ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶೋಭಾ ಎಲ್ ರಾವ್ ಮತ್ತು ಜಯಂತಿ ಸಾಲ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮಾನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಶೀಲಾ ಎಂ ಪೂಜಾರಿ ಮತ್ತು ಸಲಹೆಗಾರರಾದ ರತ್ನಾ ಡಿ. ಕುಲಾಲ್ ನಿರ್ವಹಿಸಿದರು. ಜೊತೆ ಕೋಶಾಧಿಕಾರಿ ವಿದ್ಯಾ ಎಸ್. ನಾಯಕ್ ದನ್ಯವಾದ ಸಮರ್ಪಿಸಿದರು. ಉಪಕಾರ್ಯಾಧ್ಯಕ್ಷರುಗಳಾದ  ಗೀತಾ ಜೆ ಮೆಂಡನ್, ಸಂಧ್ಯಾ ಎಸ್ ಪ್ರಭು ಅವರು ಮನೆಯಲ್ಲಿ ಆಟಿಯ ಅಡುಗೆ ತಯಾರಿಸಿ ತಂದ ಎಲ್ಲಾ ಮಹಿಳೆಯರ ಹೆಸರನ್ನು ವಾಚಿಸಿದರು. 

ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿ ಮತ್ತು ನವೀನ್ ಸಾಲ್ಯಾನ್ ಇವರು ಆಟಿ ಕಳಂಜ ಪ್ರದರ್ಶನ ನಡೆಸಿದರು. ಸಮಿತಿಯ ಯುವ ವಿಭಾಗದ ಸದಸ್ಯರಿಂದ ಸುದೀಪ್ ಪೂಜಾರಿಯ ನಿರ್ದೇಶನದಲ್ಲಿ ಪ್ರಥಮ್ ಪೂಜಾರಿ ರಚಿಸಿರುವ “ತುಳುವೆರೆನ ಆಟಿದ ಕಥೆ” ತುಳು ನಾಟಕ ಎಲ್ಲರನ್ನೂ ರಂಜಿಸಿತು.

ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ತುಳು- ಕನ್ನಡಿಗರು ಪಾಲ್ಗೊಂಡಿದ್ದರು.

B. Dinesh Kulal

Mob.: 9821868674



Related posts

ಮೀರಾಬಾಯಂದರ್ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ಗಣೇಶ್ ಗೋಪಾಲ್ ಶೆಟ್ಟಿಯವರು ವಾರ್ಡ್ 3ರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ.

Mumbai News Desk

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ.

Mumbai News Desk

ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಕಚೇರಿ ಯಿಂದ ಪುಣ್ಯ ಕ್ಷೇತ್ರ ದರ್ಶನ

Mumbai News Desk

84 ವರ್ಷಗಳ ಇತಿಹಾಸವುಳ್ಳಹಿರಿಯ ಜಾತೀಯ ಸಂಸ್ಥೆ ಸಾಫಲ್ಯ ಸೇವಾ ಸಂಘದ 70 ನೇ ವಾರ್ಷಿಕ ಮಹಾಸಭೆ.

Mumbai News Desk

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಆಟಿದ ನೆನಪು ಕಾರ್ಯಕ್ರಮ.

Mumbai News Desk