ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾರ್ಚ್ 1 ರಿಂದ ಮಾರ್ಚ್ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ವಾರ್ಷಿಕ ವಿಹಾರ ಕೂಟದಲ್ಲಿ ಗೆಜ್ಜೆ ಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ದಿನಾಂಕ 8. 2.2025ರ ಸಂಜೆ ಗಂಟೆ 5.00 ಕ್ಕೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು *ಸೇವಾ ಟ್ರಸ್ಟ್ ನ ಅಧ್ಯಕ್ಷರು, ಗೆಜ್ಜೆ ಗಿರಿ ಕ್ಷೇತ್ರದ ಟ್ರಸ್ಟಿ, ಹಾಗೂ ಜಾತ್ರಾ ಮಹೋತ್ಸವದ ಮುಂಬಯಿಯ ಸಂಚಾಲಕರು ಆಗಿರುವ ಶ್ರೀ ನಿತ್ಯಾನಂದ ಡಿ ಕೋಟಿಯಾನರು* ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಎಲ್ಲಾ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರಾ ಮಹೋತ್ಸವಕ್ಕೇ ಆಮಂತ್ರಿಸಿದರು. ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಹಾಗೂ ಶ್ರೀ ಕ್ಷೇತ್ರ ಗೆಜ್ಜಿಗಿರಿಯ ಹಲವಾರು ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಉಪಾದ್ಯಕ್ಷರುಗಳಾದ D.B.ಅಮೀನ್ ಮತ್ತು C.K. ಪೂಜಾರಿ.ವಿಶ್ವನಾಥ್ ತೋನ್ಸೆ, ಹಿರಿಯರಾದ ಸೋಮ ಸುವರ್ಣ ದಂಪತಿ, ಸಲಹೆಗಾರರಾದ V.C. ಪೂಜಾರಿ, ಶಶಿ ನಿತ್ಯಾನಂದ ಕೋಟ್ಯಾನ್,ಭಾರತಿ ಸುವರ್ಣ ದಂಪತಿ, ಸುಧಾಕರ್ ಕೋಟ್ಯಾನ್ ದಂಪತಿ, ವಿಜಯ ಸಂಜೀವ ಪೂಜಾರಿ, ಕೃಷ್ಣ ಪಾಲನ್ ದಂಪತಿ,ವಿಜಯ್ ಸನಿಲ್ ದಂಪತಿ, ಸುಲೋಚನಾ ರಾಘು ಪೂಜಾರಿ ದಂಪತಿ, ಸಂಜೀವಿನಿ ಲೀಲಾದರ ದಂಪತಿ,ಸಂಘಟಕಿ ಮೃದುಲಾ ಅರುಣ್ ಕೋಟ್ಯಾನ್, ಸವಿತಾ ನರೇಶ್, ಉದಯ ಎನ್ ಪೂಜಾರಿ. ರಮಣಿ ಕರ್ಕೇರ, ಭವಾನಿ ಬಂಗೇರ, ಕಸ್ತೂರಿ ರೂಪ್ ಕುಮಾರ್,ಇಂದಿರಾ ಎಸ್ ಕೋಟ್ಯಾನ್, ತುಷಾರ್ ಪಾಲನ್ ರತನ್ ಕರ್ಕೇರ ಮತ್ತು ಶೌರ್ಯ ಸನಿಲ್ ಉಪಸ್ಥಿತರಿದ್ದರು.
ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ವಿಶ್ವನಾಥ್ ತೋನ್ಸೆ ಕಾರ್ಯಕ್ರಮವನ್ನು ಸಂಘಟಿಸಿ ಬಂದ ಭಕ್ತಾಭಿಮಾನಿಗಳನ್ನು ಸ್ವಾಗತಿಸಿದರು.ಸಂಜೀವ ಪೂಜಾರಿ ತೋನ್ಸೆಯವರ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.