30 C
Mumbai
September 27, 2026
Mumbai News Kannada
ಮುಂಬಯಿ

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 94ನೇ ಜನ್ಮದಿನಾಚರಣೆ 



ಜಾರ್ಜ್ ರವರ ಸೇವಾ ಕಾರ್ಯವನ್ನು ಪರಿಸರ ಪ್ರೇಮಿ ಸದಾ ನೆನಪಿಸುತ್ತದೆ – ಎಲ್. ವಿ. ಅಮೀನ್

ಚಿತ್ರ ವರದಿ ದಿನೇಶ್ ಕುಲಾಲ್ 

ಮುಂಬಯಿ ಜೂ6. ಜಾರ್ಜ್ ಫೆರ್ನಾಂಡಿಸ್ ಅವರು ಕರಾವಳಿಗೆ ಮಾತ್ರವಲ್ಲ ದೇಶದ ಜನತೆಗೆ ನೀಡಿದ ಸಹಕಾರವನ್ನು ಕರಾವಳಿಯ ಜನರು ಸದಾ ನೆನಪಿಸಲು ಸರಕಾರವು ಅವರ ಹೆಸರನ್ನು ಅಮರವಾಗಿರಿಸುವಲ್ಲಿ ಕಾರ್ಯಪ್ರವೃತ್ತವಾಗಬೇಕು. ಜಾರ್ಜ್ ರವರ ಸೇವಾ ಕಾರ್ಯವನ್ನು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸದಾ ನೆನಪಿಸುತ್ತದೆ ಎಂದು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ನುಡಿದರು. 

ಜೂ. 3 ರಂದು ಬಿಲ್ಲವ ಭವನ, ಸಂತಾಕ್ರೂಸ್ ಪೂರ್ವ ಮುಂಬಯಿ ಇಲ್ಲಿ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ನಡೆದ ಜಾರ್ಜ್ ಫೆರ್ನಾಂಡಿಸ್ ರವರ 94ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಜಾರ್ಜ್ ಫೆರ್ನಾಂಡಿಸ್ ಅವರ ಬದುಕಿನ ಆದರ್ಶಗಳನ್ನು ತೆರಿದೆಟ್ಟು ಅವರು ಸಮಿತಿಯೊಂದಿಗೆ ಪ್ರಾರಂಭದಿಂದಲೇ ಇದ್ದು ಅವರು ಮಾಡಿದ ಸೇವಾ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾ ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳವಣಿಗೆಯಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರು ಮಹತ್ತರ ಪಾತ್ರವನ್ನು ವಹಿಸಿದ ಬಗ್ಗೆ ವಿವರಿಸಿದರು. 

ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು, ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪದಾಧಿಕಾರಿಗಳಾದ  ಪಿ. ಡಿ. ಶೆಟ್ಟಿ. ಧರ್ಮಪಾಲ್ ದೇವಾಡಿಗ, ಹಿರಿಯಡ್ಕ ಮೋಹನ್ ದಾಸ್,  ನ್ಯಾ ಆರ್‌.ಎಂ. ಭಂಡಾರಿ, ಶ್ರೀನಿವಾಸ್ ಸಾಪಲ್ಯ, ನಿತ್ಯಾನಂದ ಡಿ ಕೋಟ್ಯಾನ್, ಡಾ. ಪ್ರಭಾಕರ ಶೆಟ್ಟಿ ಬೋಳ, ಸಮಿತಿಯ , ಸದಾನಂದ ಆಚಾರ್ಯ, ಪತ್ರಕರ್ತ ದಯಾ ಸಾಗರ್ ಚೌಟ, ಚಿತ್ರಾಪು ಕೆ. ಎಂ. ಕೋಟ್ಯಾನ್,  ಹ್ಯಾರೀ ಸಿಕ್ವೇರಾ, , ರವಿ ದೇವಾಡಿಗ.. ಸಂಜೀವ ಪೂಜಾರಿ ತೋನ್ಸೆ, ರಾಕೇಶ್ ಭಂಡಾರಿ,  ಜಿತೇಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಸ್ವಾಗತಿಸಿದರು. ಕೋಶಾಧಿಕಾರಿ ತುಳಸಿದಾಸ್ ಅಮೀನ್ ಧನ್ಯವಾದ ಸಮರ್ಪಿಸಿದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನುಷಾ ಗಣೇಶ್ ಮೂಲ್ಯ ಗೆ ಶೇ 89.40 ಅಂಕ.

Mumbai News Desk

ಮುಂಬಯಿ : ರಸಿಕರಿಗೆ ರಸದೌತಣ ನೀಡಿದ ದಿ.ಲಕ್ಷ್ಮೀ ಸುಧೀಂದ್ರ ಸ್ಮಾರಕ ಸಂಗೀತ ಕಛೇರಿ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಆಯುಷ್ ಬಿ ಸನಿಲ್ ಗೆ ಶೇ. 88.40 ಅಂಕ.

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗದ ಮಹಿಳಾ ವಿಭಾಗದಿಂದ ‘ಹಳದಿ–ಕುಂಕುಮ’ ಕಾರ್ಯಕ್ರಮ

Mumbai News Desk

ಶ್ರೇಯಸ್ ಶೆಟ್ಟಿ ಯವರು ,83 :60 ಅಂಕ 

Mumbai News Desk

ಕಾಪು ಮೊಗವೀರ ಮಹಾ ಸಭಾ ಹಾಗೂ ಮಹಿಳಾ ಮಂಡಳಿ ಇದರ ಮುಂಬಯಿ ಶಾಖೆವತಿಯಿಂದ “ ಆಟಿದ ಒಂಜಿ ಕೂಟ” , “ಅಭಿನಂದನಾ ಕಾರ್ಯಕ್ರಮ”

Mumbai News Desk