ಭಾರತ್ ಬ್ಯಾಂಕ್ ನ ಪ್ರಿಯ ಗ್ರಾಹಕರು ಮತ್ತು ಶೇರುದಾರರ ಅವಗಾಹನೆಗೆ
*ಮುಂಬಯಿ ಯ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ, “ಕೆಲವು ಬ್ಯಾಂಕುಗಳು ಸಮಸ್ಯೆಯಲ್ಲಿವೆ” ಎಂದು ಪ್ರಕಟವಾಗಿರುವ ಬ್ಯಾಂಕ್ ಗಳ ಪಟ್ಟಿಯಲ್ಲಿ *ಭಾರತ್ ಕೋ ಆಪರೇಟಿವ್ ಬ್ಯಾಂಕ್ (ಮುಂಬಯಿ ಲಿಮಿಟೆಡ್) ನ ಹೆಸರನ್ನು ಸೇರಿಸುವುದರ ಮೂಲಕ ಸುಳ್ಳು ಮಾಹಿತಿಯನ್ನು ಪ್ರಕಟಿಸಿದ್ದಾರೆ.*
ನಾವು ಇಲ್ಲಿ ತಿಳಿಯಪಡಿಸುವುದೇನೆಂದರೆ ಭಾರತ್ ಬ್ಯಾಂಕ್ ಯಾವುದೇ ರೀತಿಯ ಸಂಕಷ್ಟದಲ್ಲಿ ಇಲ್ಲ. ಬ್ಯಾಂಕಿನ ವ್ಯವಹಾರದಲ್ಲಿಯೂ ಸಂಪೂರ್ಣ ಸಮತೋಲನ ಕಾಪಾಡಿಕೊಂಡು ಬರುತ್ತಿದೆ. ಗ್ರಾಹಕರು ಮತ್ತು ಷೇರುದಾರರರು ಯಾವುದೇ ತರಹದ ಭಯ ಪಡುವ ಅಗತ್ಯ ಇಲ್ಲ ಎಂದು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ.
ಯಾವುದೇ ಸಾಕ್ಷಾಧಾರಗಳಿಲ್ಲದೆ ಈ ತಪ್ಪು ಮಾಹಿತಿ ಮತ್ತು ವರದಿಯನ್ನು ಪ್ರಕಟಿಸಿದ ಪತ್ರಿಕೆಯ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೂ ಈ ವರದಿ ಮತ್ತು ಸಂದೇಶವನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ, ವಾಟ್ಸಾಪ್ಗಳಲ್ಲಿ ರವಾನಿಸುವ ವ್ಯಕ್ತಿಗಳ ಮತ್ತು watsapp ಗ್ರೂಪ್ admin ಗಳ ಮೇಲೆ ಭಾರತ್ ಬ್ಯಾಂಕ್ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.
ಷೇರುದಾರರೇ, ಗ್ರಾಹಕರೇ ಹಾಗೂ ಹಿತೈಷಿಗಳೇ ನಿಮ್ಮ ಭಾರತ್ ಬ್ಯಾಂಕ್ ಯಾವುದೇ ತೊಂದರೆಯಲ್ಲಿ ಇಲ್ಲ. ಎಲ್ಲಾ ಕ್ಷೇತ್ರದಲ್ಲಿಯೂ ಸಮತೋಲನವನ್ನು ಕಾಪಾಡಿಕೊಂಡು ಯಶಸ್ಸಿನ ಪಥದಲ್ಲಿ ಸಾಗುತ್ತಿದೆ. ಭಾರತ್ ಬ್ಯಾಂಕ್ 18000 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸುತ್ತಿದೆ, ಠೇವಣಿ ಹಾಗೂ ಮುಂಗಡ ವ್ಯವಸ್ಥಿವಾಗಿದೆ, CRAR ratio 13.70 %ಇದೆ, ಅದರಲ್ಲೂ ಸ್ವಂತ ಕೇಂದ್ರ ಕಚೇರಿ ಹಾಗೂ ಬ್ಯಾಂಕ್ ನ 103 ಶಾಖೆಗಳಲ್ಲಿ ಶೇಕಡಾ 60 ಪ್ರತಿಶತ ಸ್ವಂತ ಕಟ್ಟಡಗಳನ್ನು ಹೊಂದಿ ಬ್ಯಾಂಕ್ ಸದೃಢವಾಗಿದೆ. ಹಾಗಾಗಿ ತಪ್ಪು ಸಂದೇಶಗಳ ಕುರಿತು ಆತಂಕಪಡದೆ ನಿಶ್ಚಿಂತರಾಗಿರಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.
ಭಾರತ್ ಬ್ಯಾಂಕ್ ಪರವಾಗಿ
ಶ್ರೀ ವಿದ್ಯಾನಂದ್ ಎಸ್ ಕರ್ಕೇರ.
MD & CEO