April 1, 2025
ಮುಂಬಯಿ

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

ಸದಸ್ಯರ ದೂರದರ್ಶಿತ್ವ ಪರಿಶ್ರಮದಿಂದ ಬಳಗ ವಿಶಾಲ ಮರವಾಗಿ ಬೆಳೆದಿದೆ: ಸರೋಜಿನಿ ಹರಿ ಶೆಟ್ಟಿಗಾರ್

ಚಿತ್ರ ವರದಿ ರಮೇಶ್ ಉದ್ಯಾವರ

ಕಾಂದಿವಲಿ, ಫೆ. 25: ಕಾಂದಿವಿಲಿ ಚಾರ್ಕೋಪ್   ಪರಿಸರದಲ್ಲಿ ಕಳೆದ 25 ವರ್ಷಗಳ ಹಿಂದೆ ಹುಟ್ಟು ಹಾಕಿದ ಸಂಸ್ಥೆಯಲ್ಲಿ ಅಂದಿನ ಕಾರ್ಯಕಾರಿ ಸಮಿತಿ ಸದಸ್ಯರ ಪರಿಶ್ರಮ ದೂರದರ್ಶಿತ್ವ ಇಂದು ಬಳಗ ವಿಶಾಲ ಮರವಾಗಿ ಬೆಳೆಯಲು ಸಾಧ್ಯವಾಗಿದೆ. ಸಂಸ್ಥೆಯೊಂದನ್ನು ಸ್ಥಾಪಿಸುವುದಕ್ಕಿಂತಲೂ ಅದನ್ನು ಬಲಿಷ್ಠ ಗೊಳಿಸುವುದು ಕಷ್ಟಕರ . ಆ ಮೂಲಕ ಬಳಗದ ಕಾರ್ಯಯೋಜನೆ ಯಾವ ನಿಟ್ಟಿನಲ್ಲಿ ಸಾಗಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ. ಜೊತೆಗೆ ಬಳಗಕ್ಕೆ ಹತ್ತು ವರ್ಷ ತುಂಬುವ ಸಮಯದಲ್ಲಿಯೇ ಸ್ವಂತ ಕಟ್ಟಡ ಹೊಂದುವ ಮೂಲಕ ಸವಾಲಿನ ಸಾಹಸವನ್ನು ಸಶಕ್ತಗೊಳಿಸಿರುವುದು ಒಂದು ಯಶೋಗಾಥೆ ಎಂದು ಪದ್ಮಶಾಲಿ ಸಮಾಜ ಸೇವಾ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಹರಿ ಶೆಟ್ಟಿಗಾರ್ ಬಳಗದ ಕಾರ್ಯ ವೈಕರಿಯ ಕಾರ್ಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

    ಫೆ. 23ರಂದು ಚಾರ್ಕೋಪ್ ಕನ್ನಡಿಗರ ಬಳಗ ಬೆಳ್ಳಿ ಹಬ್ಬದ ಅಂಗವಾಗಿ ಕಾಂದಿವಲಿ ಪೊಯ್ಸರ್ ಜಿಮ್ಕಾನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಮಹಿಳಾ ಸಮಾವೇಶ ಕಾರ್ಯಕ್ರಮದ ಉದ್ಘಾಟನೆಯಲ್ಲಿ  ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಭಜನೆ ಸಂಘಟನೆಗೆ ಪ್ರಮುಖ ಅಸ್ತ್ರವಾಗಿದ್ದು ಆ ಮೂಲಕ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಲು ಸಾಧ್ಯ. ಭಗವದ್ಗೀತೆ  ತರಗತಿಗಳನ್ನು ಪ್ರಾರಂಭಿಸುವ ಮೂಲಕ ನಮ್ಮ ಗ್ರಂಥ ಶಾಸ್ತ್ರದ ಬಗ್ಗೆ ಆಳವಾದ ಧಾರ್ಮಿಕ ಆಧ್ಯಾತ್ಮಿಕ ಬಗ್ಗೆ ಭಗವದ್ಗೀತೆಯಲ್ಲಿ ತಿಳಿದುಕೊಳ್ಳಲು ಸಾಧ್ಯ.  ದೇವರ ನಾಮ ಸ್ಮರಣೆಗೆ ಇದು ಒಂದು ಪ್ರತಿಕೂಲ ವಾತಾವರಣ ಸೃಷ್ಟಿಸಲಿದೆ. ಮಹಾನಗರದ ಮಧ್ಯಮ ವಲಯದಲ್ಲಿ ಬೆಳೆದ ಬಳಗ ಬೆಳೆಯುತ್ತಿದ್ದಂತೆ ಅದರ ನೆರಳು ಎಲ್ಲರಿಗೂ ದೊರಕುವಂತಾಗಲಿ ಎಂದು ಹಾರೈಸಿದರು.

 ಇನ್ನೊರ್ವ  ಅತಿಥಿ ಕಂಠ ಧ್ವನಿ ಕಲಾವಿದೆ ಮಾಡೆಲ್ ಧನುಷ್ಮತಿ ಉದ್ಯಾವರ ಬಳಗದ ಕಾರ್ಯ ಕಲಾಪಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಕ್ಕಳಲ್ಲಿ ಭಾಷೆ ಬೆಳೆದರೆ ಅಲ್ಲಿ ಸಂಸ್ಕೃತಿ ಉಗಮವಾಗುತ್ತದೆ. ಆದ್ದರಿಂದ ಭಾಷೆಗೆ ನಾವು ಮಹತ್ವ ನೀಡಿದರೆ ಸಂಸ್ಕೃತಿ ಸಂಪ್ರದಾಯಗಳು ಬೆಳೆಯುತ್ತದೆ.  ಬಳಗದ ವತಿಯಿಂದ ಕನ್ನಡ ಕಲಿಸುವ ತರಗತಿಗಳು ಪ್ರಾರಂಭಿಸಬೇಕು. ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಯಲು ಇದು ಸಹಕಾರಿ ಯಾಗುವುದರ ಜೊತೆಗೆ ಕಲಿಕೆಯನ್ನು ಸೂತ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ ಅವರು ಸಾಂಸ್ಕೃತಿಕ ಸಾಮಾಜಿಕ ಧಾರ್ಮಿಕವಾಗಿ ಬಳಗ ಎಲ್ಲಾ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

   ಈ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸಮಿತಿಯ ಕಾರ್ಯಾಧ್ಯಕ್ಷರಾದ ಮುಂಡಪ್ಪ ಎಸ್ ಪಯ್ಯಡೆ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರು ನಗರವಾಸಿಗಳಾಗಿರಲಿ ಅಥವಾ ಹಳ್ಳಿ ಬದುಕಿನಲ್ಲಿರಲಿ ಅವರ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂದು ದೇಶವಿದೇಶದ ಎಲ್ಲಾ ರಂಗದಲ್ಲೂ ಮಹಿಳೆ ಸ್ರೀ ಸ್ವಾತಂತ್ರ್ಯದ ಮೂಲಕ ಉನ್ನತ ಸ್ಥಾನಮಾನ ಗಳಿಸಿ ವಿವಿಧ ಕ್ಷೇತ್ರದಲ್ಲಿ ತನ್ನ ವ್ಯಕ್ತಿ ಗೌರವವನ್ನು ಅಲಂಕರಿಸಿದ್ದಾರೆ.  ಮಹಿಳೆಯರ ಬದುಕಿನ ವೈವಿಧ್ಯತೆಯ ಬಗ್ಗೆ ಹಮ್ಮಿಕೊಳ್ಳಲಾದ ಇಂದಿನ ಸಮಾವೇಶ ಕಾರ್ಯಕ್ರಮವು ಅವರ ಬದುಕಿಗೆ ಹೊಸ ಚೈತನ್ಯ, ದಾರಿ ದೀಪವಾಗಲಿ ಎಂದು ಹೇಳಿ ಬಹು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರನ್ನು ಅಭಿನಂದಿಸಿದರು.

  ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ಸದಸ್ಯರು ಪ್ರಾರ್ಥನೆ ಆಡಿದರು ಅತಿಥಿ ಗಣ್ಯರು ಸಮೂಹವಾಗಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ ಸ್ವಾಗತಿಸಿದರು ಸಂಚಾಲಕಿ ಶಾಂತ ಎನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು ಬಳಿಕ ಅತಿಥಿ ಗಣ್ಯರಿಗೆ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ ಶೆಟ್ಟಿ ಮಹಿಳಾ ಸದಸ್ಯರು ಅತಿಥಿ ಗಣ್ಯರನ್ನು ಸನ್ಮಾನಿಸಿದರು ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ  ಎಸ್ ಪಯ್ಯಡೆ ಅವರನ್ನು ಬಳಗದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಗೌರವಿಸಿದರು‌.

     ಕಾರ್ಯಕ್ರಮದ ಪ್ರಾರಂಭದಲ್ಲಿ ಸುವರ್ಣ ಭಟ್,  ಭೂಮಿಕಾ ವಿವಿಧ ಹಾಡುಗಳನ್ನು ಹಾಡಿ ರಂಜಿಸಿದರು.  ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು ವೇದಿಕೆಯಲ್ಲಿ ವಿಶ್ವಸ್ಥರಾದ ಭಾಸ್ಕರ ಸರಪಾಡಿ ಹಿರಿಯ ಸದಸ್ಯರಾದ ಎನ್‌ಜಿ ಭಟ್ ಸಾಹಿತ್ಯ ಸಾಂಸ್ಕೃತಿಕ ವಿಭಾಗದ ಸಂಚಾಲಕ ಕವಿ ಲೇಖಕ ಗೋಪಾಲ್ ತ್ರಾಸಿ ಉಪಸ್ಥಿತರಿದ್ದರು ವಿವಿಧ ಸಮಿತಿಯ ಸದಸ್ಯರು ಉಪಸ್ಥಿರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.  ಬಳಿಕ ಮಹಿಳಾ ಪ್ರಪಂಚ ಭ್ರಮೆ -ವಾಸ್ತವದ ಗೋಷ್ಠಿ ನ್ಯಾಯವಾದಿ, ಸಾಹಿತಿ ಅಮಿತಾ ಭಾಗವತ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

 ಕವಿ ಲೇಖಕಿ ದೀಪಾ ಗೋನಾಲ್ ಹಾನಗಲ್ , ಪ್ರಾಧ್ಯಾಪಕಿ ಲೇಖಕಿ ಡಾ. ಮಧುಮಾಲ ಕೆ. ಮಂಗಳೂರು, ಕವಿ ಲೇಖಕಿ ಜಿ. ಪಿ ಕುಸುಮ ರವರು ಭಾಗವಹಿಸಿದ್ದರು.  ಶಿವ ಸಾಗರ್ ಗ್ರೂಪ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ಎನ್‌. ಟಿ.  ಪೂಜಾರಿ ಮತ್ತು ಎಲ್‌ಡಿಎಸ್‌ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಅಮರನಾಥ್  ಶೆಟ್ಟಿ ಗೋಷ್ಠಿಯನ್ನು ಪ್ರಾಯೋಜಿಸಿದರು.

ಬಳಿಕ ಬಳಗದ ಮಹಿಳೆಯರಿಂದ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿತು,

ಶಶಿಕಲಾ ಹೆಗಡೆ ರೂಪಾ ಭಟ್ ತನುಜಾ ಭಟ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ವರದಿ ರಮೇಶ್ ಉದ್ಯಾವರ

Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಿಯಾನ್ ಸತೀಶ್ ಕೋಟ್ಯಾನ್ ಗೆ ಶೇ 94.20 ಅಂಕ.

Mumbai News Desk

ಥಾಣೆ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ದಶಮಾನೋತ್ಸವ, ಸಾಂಸ್ಕೃತಿಕ ವೈಭವ

Mumbai News Desk

ಗೋರೆಗಾಂವ್ ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನ -ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ .

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣೆ ಶಿಬಿರ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀತಮ್ ಮೋಹನ್ ಬಂಗೇರ ಗೆ ಶೇ 88 ಅಂಕ.

Mumbai News Desk