ವಸಾಯಿ ತಾಲೂಕಿನ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ವಸಾಯಿ ಕರ್ನಾಟಕ ಸಂಘದ 2025-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಿತು. ಸಭೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಹೊಟೇಲ್ ಉಧ್ಯಮಿ ದೇವೇಂದ್ರ ಬುನ್ನನ್, ಗೌರವ ಅಧ್ಯಕ್ಷರಾಗಿ ವಿನೀತ್ ಕೆಮಿಕಲ್ಸ್ ನ ಮಾಲಕರಾದ ವಿಶ್ವನಾಥ್ ಪಿ.ಶೆಟ್ಟಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ಉಪಾಧ್ಯಕ್ಷರಾಗಿ ಕರ್ನೂರು ಶಂಕರ್ ಆಳ್ವ, ಗೌ.ಪ್ರ.ಕಾರ್ಯದರ್ಶಿಯಾಗಿ ರವೀಂದ್ರ ಕೆ.ಶೆಟ್ಟಿ, ಕೋಶಾಧಿಕಾರಿಯಾಗಿ ವಿಜಯ್ ಎಂ.ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸಿ.ಎ.ವಿಜಯ್ ಕುಂದರ್, ಜೊತೆ ಕೋಶಾಧಿಕಾರಿಯಾಗಿ ಹರಿಪ್ರಸಾದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಉಷಾ ಎಸ್ ಶೆಟ್ಟಿ, ಯುವ ವಿಭಾಗದ ಕಾಯಾಧ್ಯಕ್ಷರಾಗಿ
ರಿತೇಶ್ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪಾಂಡು ಎಲ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಒ ಪಿ ಪೂಜಾರಿ,
ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರಾಗಿ ಯಶೋಧರ ವಿ.ಕೋಟ್ಯಾನ್, ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಸದಸ್ಯ ನೋಂದಾಣಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹರೀಶ್ ಎನ್ ಶೆಟ್ಟಿ , ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸುಕೇಶ್ ವಿ.ರೈ ಹಾಗೂ
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ
ಕರುಣಾಕರ ಅಮೀನ್, ನವೀನ್ ಎಂ.ಶೆಟ್ಟಿ, ತಾರಾನಾಥ್ ವಿ.ಶೆಟ್ಟಿ, ವಿಟ್ಟಲ್ ರೈ , ಶೇಖರ್ ಟಿ ಕರ್ಕೇರ ,ಗಂಗಾಧರ ಟಿ.ಶೆಟ್ಟಿ, ರಾಮಚಂದ್ರ ಆಚಾರ್ಯ, ಹರೀಶ್ಚಂದ್ರ ಸಿ.ಕೋಟ್ಯಾನ್, ಆನಂದ ವೈ.ಪೂಚಾರಿ, ಉಮೇಶ್ ಮೂಲ್ಯ, ಮುಕುಂದ್ ಪಿ.ಶೆಟ್ಟಿ, ರಾಮಚಂದ್ರ ಹೆಗ್ಡೆ, ಮೋಹನ್ ಪುತ್ರನ್, , ಗಣೇಶ್ ಸುಮರ್ಣ ಮತ್ತು ವಿಶೇಷ ಆಮಂತ್ರಿತ ಸದಸ್ಯರಾಗಿ ಆರ್.ಜಿ.ಕಾಮಂತ್ ಆಯ್ಕೆಯಾಗಿದ್ದಾರೆ.