July 23, 2026
Mumbai News Kannada
ಮುಂಬಯಿ

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.







     

   ಬಂಟರ ಪ್ರತಿಷ್ಟಿತ ಸಂಸ್ಥೆ ಮೀರಾ ಡಹಾಣೂ ಬಂಟ್ಸ್ ಇದರ ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಇದೇ  ತಾ.09 ಮಾರ್ಚ್ ಶನಿವಾರದಂದು ಸಂಜೆ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು. ಬೊಯಿಸರ್ ನ ಪ್ರೀಮಿಯಮ್ ಹೋಟೆಲ್ ರೆಯಾಂಶ್ ಪ್ರೈಡ್ ನಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ  ಕಳೆದ ಫೆಬ್ರುವರಿ ತಾ.10 ರಂದು ವಿರಾರ್ ನಲ್ಲಿ    ಜರಗಿದ ಸಂಸ್ಥೆಯ ಕ್ರೀಡಾ ಉತ್ಸವದಲ್ಲಿನ ವಿಜೇತ ಸದಸ್ಯರನ್ನು ಗೌರವಿಸಲಾಯಿತು. ಹಾಗೂ ಇತ್ತೀಚೆಗೆ ಸರಾವಲಿ ಗ್ರಾಮಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಲತಾ ಜಗದೀಶ್ ಶೆಟ್ಟಿ ಇವರನ್ನು ಸತ್ಕರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟೀ ಕೆ.ಭುಜಂಗ ಶೆಟ್ಟಿ , ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ ಹಾಗೂ ಮಹಿಳಾ ಮತ್ತು ಯುವ ವಿಭಾಗ ಸೇರಿದಂತೆ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ” ಇದೇ ಮೊದಲ ಬಾರಿ ಎಂಬಂತೆ ಇಂದು ಜರಗಿದ ಈ  ಸ್ನೇಹ ಸಮ್ಮಿಲನದ ಮೂಲಕ ನಮ್ಮ ಸಮಾಜದ ಯುವಕರನ್ನು ಉತ್ತೇಜಿಸುವುದು ಹಾಗೂ ಡಹಾಣೂವಿನಿಂದ ಪಾಲ್ಘರ್ ತನಕ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟಬಾಂಧವರನ್ನು ಒಗ್ಗೂಡಿಸಿ ಪರಿಚಯ ಸಂಬಂಧ ಬೆಳೆಸುವುದು ಈ ಸುಂದರ ಸಂಜೆಯ ಕಾರ್ಯಕ್ರಮದ ಉದ್ದೇಶವಾಗಿದೆ ” ಎಂದು ಕೆ.ಭುಜಂಗ ಶೆಟ್ಟಿ ವಿವರಿಸಿ ಶುಭ ಹಾರೈಸಿದರು. 

   ವಿವಿಧ ಮನೋರಂಜನಾ ಆಟಗಳಲ್ಲಿ ಸದಸ್ಯರ ಮಕ್ಕಳು ಹಾಗೂ ಮಹಿಳೆಯರು ಭಾಗವಹಿಸಿದ್ದು ಪ್ರೀತಿ ಭೋಜನದೊಂದಿಗೆ  ಕಾರ್ಯಕ್ರಮ ಸಂಪನ್ನಗೊಂಡಿತು.

ಚಿತ್ರ  ಹಾಗೂ ವರದಿ :

ಪಿ.ಆರ್.ರವಿಶಂಕರ್ 8483980035



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಧನ್ವೀ ಶ್ರೀಧರ್ ಕಾರ್ನಾಡ್ ಗೆ ಶೇ 93.20% ಅಂಕ.

Mumbai News Desk

ಮಲಾಡ್ ಇರಾನಿ ಕಾಲನಿಯ ಶ್ರೀ ಶನಿ ಮಂದಿರದಲ್ಲಿ ಭಕ್ತಿ,ಸಡಗರದಿಂದ ನಡೆದ ಶ್ರೀ ಶನಿಜಯಂತ್ಯೋತ್ಸವ

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಗಣರಾಜ್ಯೋತ್ಸವ ಆಚರಣೆ.

Mumbai News Desk

ಕುಲಾಲ ಸಂಘ ಮುಂಬಯಿ ಇದರ ವಿದ್ಯಾರ್ಥಿ ವೇತನ ವಿತರಣೆ

Mumbai News Desk

ಮುಂಬೈ : ಭಾಂಡುಪ್‌ನಲ್ಲಿ ಪಾದಚಾರಿಗಳಿಗೆ ಬೆಸ್ಟ್ ಬಸ್ ಡಿಕ್ಕಿ ಹೊಡೆದ ಪರಿಣಾಮ 4 ಸಾವು, 8 ಜನರಿಗೆ ಗಾಯ

Mumbai News Desk