
ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮವು ಮುಲ್ಕಿ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ದೈವ ಪಾತ್ರಿ ಮುರಳಿ ಪೂಜಾರಿ ಪಡುಹಿತ್ಲು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾ. ಸಾ. ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡುತ್ತಾ ” ತುಳುನಾಡಿನ ಸಂಸ್ಕಾರ ಸಂಸ್ಕೃತಿಯನ್ನು ಈಗಿನ ಜನಾಂಗಕ್ಕೆ ತಿಳಿಸುವುದರಲ್ಲಿ ದೈವ ಪಾತ್ರಿಗಳು ಪ್ರಮುಖರಾಗಿದ್ದಾರೆ.ಅವರು ನಡೆ,ನುಡಿ, ಆಚಾರದ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾ ಬರುತ್ತಿದ್ದಾರೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುಲ್ಕಿ ಬಂಟರ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಹೊಸ ಅಂಗಣ ಪತ್ರಿಕೆ ಮುಲ್ಕಿಯ ಸುತ್ತಮುತ್ತಲಿನ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಬೇರೆ ಬೇರೆ ಊರುಗಳಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು, ಪತ್ರಿಕೆಯ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಅತಿಥಿ ಹಬೀಬುಲ್ಲ ಅವರು ಹೊಸ ಅಂಗಣ ಪತ್ರಿಕೆಯು ಎಂಟು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗಿ, ಒಳ್ಳೆಯ ಲೇಖನಗಳು ಬರುತ್ತಿರುವುದು
ಸಂತಸ ಎಂದರು.
ಪಡುಹಿತ್ಲು ಜಾರಂದಾಯ ದೈವದ ಪಾತ್ರಿ ಜಯಶೀಲ ಪೂಜಾರಿ, ಕಲ್ಲಟ ಜಾರಂದಾಯ ದೇವಸ್ಥಾನದ ಅರ್ಚಕ ರಮೇಶ್ ಪೂಜಾರಿ, ಉದ್ಯಮಿ ಜೋನ್ ಕಾಡ್ರಸ್, ನಿವೃತ್ತ ಪೊಲೀಸ್ ಅಧಿಕಾರಿ ಕೆ ಎನ್ ಕೋಟ್ಯಾನ್, ಬಂಕಿ ನಾಯಕ್, ಚಿತ್ರಾಪು ಉದ್ಯಮಿ ವಾಸು ಪೂಜಾರಿ, ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲಿಯನ್ ಉಪಸ್ಥಿತರಿದರು.
ರವಿಚಂದ್ರ ಕಾರ್ಯಕ್ರಮ ನಿರೂಪಿಸಿದರೆ ಜೆ.ಸಿ ದಿನೇಶ್ ವಂದಿಸಿದರು.