
ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇಲ್ಲಿ ದಿನಾಂಕ 26/02/2024 ಬುಧವಾರ ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆಯ ಜರುಗಿತು.
ಬೆಳಿಗ್ಗೆ 6 ಗಂಟೆ ಸರಿಯಾಗಿ ಮಹಾಗಣಪತಿ ಹೋಮ ಜರುಗಿತು,ನಂತರ 7.30 ಕುಕ್ಕೆ ಸರಿಯಾಗಿ ಏಕಾಹ ಭಜನೆ ದೇವರ ಪ್ರಾರ್ಥನೆ,ದೀಪ ಪ್ರಜ್ವಲನೆ ಯೊಂದಿಗೆ ಪ್ರಾರಂಭಿಸಲಾಯಿತು. ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿ ಯು ಉಪಾಧ್ಯಕ್ಷರಾದ ಶ್ರೀ ಸುಬ್ಬಯ್ಯ ಶೆಟ್ಟಿ, ದೇವಸ್ಥಾನದ ಅಧ್ಯಕ್ಷರಾದ ರಾಜೇಶ್ ಜೆ ಶೆಟ್ಟಿ
ಬಂಟರ ಸಂಘ ಮುಂಬಯಿ ಬಿವಾಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ ಯು ಸಂಯೋಜಕರಾದ ರವೀಂದ್ರ ವೈ ಶೆಟ್ಟಿ , ದೇವಸ್ಥಾನದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು,








ಅಲ್ಲದೆ ಸಂಜೆ, ಶಿವರಾತ್ರಿಯ ವೀಶೇಷ ಪೂಜೆ ಸಹ ನೆರವೇರಿತು,
ಆಗಮಿಸಿದ ಎಲ್ಲಾ ಭಜನಾ ಮಂಡಳಿಗಳನ್ನು, ಹೂವು,ಹಣ್ಣು ಪ್ರಸಾದ,ಗೌರವ ಕಾಣಿಕೆ ಇತ್ತು ಗೌರವಿಸಲಾಯಿತು.
ಬೆಳಿಗ್ಗೆ ,ಮಧ್ಯಾಹ್ನ, ಸಂಜೆ ಫಲಾಹಾರ, ಅನ್ನಸಂತರ್ಪಣೆ ,ಚಹಾ ದ ವ್ಯವಸ್ಥೆ ಮಾಡಲಾಯಿತು,
ಏಕಾಹ ಭಜನೆಗೆ ವೀಶೇಷ ವಾಗಿ ದೇವಾನಂದ್ ಕೋಟ್ಯಾನ್,ಆಶಾ ನಾಯಕ್, ಶ್ರೀಧರ್ ರೈ, ಅಲ್ಲದೆ, ಜೈ ಪ್ರಸಾದ್ ಶೆಟ್ಟಿ,, ಮಂಡಳಿಯ ಟ್ರಸ್ಟಿಗಳು, ಸಲಹೆ ಗಾರರು, ಮುಖ್ಯ ಸಮಿತಿ,ಉಪ ಸಮಿತಿಯ ಕಾರ್ಯಾಧ್ಯಕ್ಷರರು, ಮಹಿಳಾ ವಿಭಾಗ, ಯುವ ವಿಭಾಗ, ತಂತ್ರಿಯವರು, ಅರ್ಚಕರು, ದೇವಸ್ಥಾನದ ಸಿಬ್ಬಂದಿ ವರ್ಗ, ಬಾರಿ ಉತ್ಸಾಹದಿಂದ ಸಹಕರಿಸಿದರು,








24 ಘಂಟೆಗಳ ಕಾಲ ಅಖಂಡ ಭಜನೆ ಯೊಂದಿಗೆ, ದಿನಾಂಕ 27 ರಂದು ಬೆಳಿಗ್ಗೆ ದೇವರ ಮಂಗಳಾರತಿ ಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು..
ಪ್ರತ್ಯಕ್ಷವಾಗಿ ಪರೋಕ್ಷವಾಗಿ ತನು ಮನ ಧನ ದಿಂದ ಸಹಕರಿಸಿರುವ ಎಲ್ಲಾರಿಗೂ ದೇವಸ್ಥಾನದ ಪರವಾಗಿ ತುಂಬು ಹೃದಯದ ಧನ್ಯವಾದಗಳು..