
ಮುಂಬೈ ತುಳು ಕನ್ನಡಿಗರ ಪ್ರಪ್ರಥಮ ಧಾರ್ಮಿಕ ಸಂಸ್ಥೆ ಶ್ರೀಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ ಹಾಗೂ 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಫೆಬ್ರವರಿ 23 ರಂದು ಅಂಧೇರಿ ಪಶ್ಚಿಮ ವೀರ ದೇಸಾಯಿ ಮಾರ್ಗದ ಎಂ ವಿ ಎಮ್ ಎಜುಕೇಶನ್ ಕ್ಯಾಂಪಸ್ ಬಳಿಯ ಶ್ರೀಮದ್ಭಾರತ ಮಂಡಳಿ ಸಂಚಾಲಿತ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಭಕ್ತಿ, ಶ್ರದ್ದೆಯಿಂದ ವಿಜೃಂಭಣೆಯಿಂದ ಜರಗಿತು.

ಬೆಳಿಗ್ಗೆಯಿಂದ ವಿವಿಧ ಪೂಜಾ ವಿಧಿಗಳು ಜರಗಿದ ಬಳಿಕ ಮಧ್ಯಾಹ್ನ ಶ್ರೀ ಲಕ್ಷ್ಮೀ ನಾರಾಯಣ ದೇವರಿಗೆ ಮಹಾಪೂಜೆ ನಡೆಯಿತು.
ಈ ಸಂಧರ್ಭದಲ್ಲಿ ಶ್ರೀಮದ್ಭಾರತ ಮಂಡಳಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮಂಡಳಿಯ ಶೇಯೋಭಿವೃದ್ಧಿಗಾಗಿ ಸೇವೆಗೈಯುತ್ತಿರುವ, ಅಧ್ಯಕ್ಷರಾದ ಜಗನ್ನಾಥ್ ಪಿ. ಪುತ್ರನ್ ದಂಪತಿಯನ್ನು ಹಾಗೂ ಕಾರ್ಯದರ್ಶಿಯಾಗಿ ನಿಸ್ವಾರ್ಥ ಸೇವೆ ಮಾಡುತ್ತಾ, ಪ್ರಸ್ತುತ ಉಪಾಧ್ಯಕ್ಷರಾಗಿರುವ ಸಣ್ಣ ಗುಂಡಿ ಲೋಕನಾಥ್ ಪಿ. ಕಾಂಚನ್ ದಂಪತಿಯನ್ನು ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

ಕಳೆದ 15 ವರ್ಷಗಳಿಂದ ಶ್ರೀಮದ್ಭಾರತ ಮಂಡಳಿಯಲ್ಲಿ ಸಕ್ರಿಯರಾಗಿ ಕಾರ್ಯವೆಸಗುತ್ತಿರುವ, ಸಂಸ್ಥೆಯ ಜತೆ ಕೋಶಾಧಿಕಾರಿ ಪಡುಬಿದ್ರಿ ಜಗನ್ನಾಥ್ ಆರ್ ಕಾಂಚನ್ ಅವರಿಗೆ ಈ ವರ್ಷದ ಅತ್ಯುತ್ತಮ ಕಾರ್ಯಕರ್ತ ಬಿರುದುನೊಂದಿಗೆ ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಹಾಗೂ 147ನೇ ಸಮಾಪ್ತಿ ಮಂಗಳೋತ್ಸವ ಮತ್ತು 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವಕ್ಕೆ ಹೆಚ್ಚು ದೇಣಿಗೆ ಸಂಗ್ರಹ ಮಾಡಿದ, ಮಹಿಳಾ ವಿಭಾಗದ ಕಾರ್ಯಕರ್ತೆ ವಿದ್ಯಾ ಕಾಂಚನ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಅಂದು ಅನ್ನ ಸಂತರ್ಪಣೆಯ ಸಂಪೂರ್ಣ ಖರ್ಚು ನೀಡಿದ ಉದ್ಯಮಿ ವೇದ ಪ್ರಕಾಶ್ ಶ್ರೀಯಾನ್, ಮಂಡಳಿ, ಮಂದಿರದ ಪ್ರತಿ ಕಾರ್ಯಕ್ಕೂ ಸಹಾಯ ಮಾಡುತ್ತಿರುವ ಚಂದ್ರಶೇಖರ್ ಆರ್ ಸಾಲ್ಯಾನ್ ರನ್ನು ಗೌರವಿಸಲಾಯಿತು.

ಅದೇ ರೀತಿಯಲ್ಲಿ ಅನ್ನದಾನಕ್ಕೆ ದೇಣಿಗೆ ನೀಡಿದ ಕಮಲ್ ಕುಮಾರ್, ಶಂಕರ್ ಎಸ್ ಮೆಂಡನ್, ಹರೀಶ್ ಕಾಂಚನ್ ಮೂಳೂರು, ದಿವಾಕರ್ ಪಿ ಸಾಲ್ಯಾನ್, ವಿಜಯ ಎ ಕುಂದರ್, ಶೋಭಾ ಶೆಟ್ಟಿ, ಜಗನ್ನಾಥ್ ಪುತ್ರನ್ – ವಸಂತಿ ಪುತ್ರನ್, ಸುಧಾಕರ್ ಕರ್ಕೇರ, ಸುಭಾಷ್ ಗೀತಾ ಶೆಟ್ಟಿ , ರೇಷ್ಮಾ ನಾಯಕ್, ಸಾವಿತ್ರಿ ಭಟ್, ಸದಾನಂದ ಕೋಟ್ಯಾನ್, ಯೋಗೇಶ್ ಶೆಟ್ಟಿ, ಗುಣಕರ್ ಶೆಟ್ಟಿ, ಚೈತನ್ಯ ನಾಯಕ, ಅಶ್ವಿನಿ ನಾಯ್ಕ ಇವರನ್ನು ಸತ್ಕಾರಿಸಲಾಯಿತು.

ಶ್ರೀಮದ್ಭಾರತ ಮಂಡಳಿಯ 147ನೇ ಮಂಗಳೋತ್ಸವ ಮತ್ತು 23ನೇ ಪ್ರತಿಷ್ಠಾ ಮಹೋತ್ಸವದಲ್ಲಿ ಮುಂಬೈ ಹಾಗೂ ಉಪನಗರಗಳ ಸುಮಾರು 2 ಸಾವಿರ ಜನರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಶ್ರೀ ಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ, ಹಾಗೂ 23ನೇ ವಾರ್ಷಿಕ ಪ್ರತಿಷ್ಠ ಮಹೋತ್ಸವದ ಸಾಂಗವಾಗಿ ನಡೆಯಲು
ಮಂಡಳಿಯ ಟ್ರಸ್ಟಿಗಳಾದ ಜಗನ್ನಾಥ್ ಪಿ ಪುತ್ರನ್, ನಾಗೇಶ್ ಎಲ್ ಮೆಂಡನ್, ಗೋವಿಂದ ಪುತ್ರನ್, ಹರಿಶ್ಚಂದ್ರ ಸಿ ಕಾಂಚನ್, ಮೋಹನ್ ದಾಸ್ ಓಡಿ ಮೆಂಡನ್, ಅಧ್ಯಕ್ಷರಾದ ಜಗನ್ನಾಥ ಪಿ ಪುತ್ರನ್ ಉಪಾಧ್ಯಕ್ಷರುಗಳಾದ ನಾಗೇಶ್ ಐ ಮೆಂಡನ್ ಲೋಕನಾಥ್ ಪಿ ಕಾಂಚನ್ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸಿ ಕಾಂಚನ್, ಗೌರವ ಪ್ರಧಾನ ಕೋಶಧಿಕಾರಿ ಕೇಶವ ಆರ್ ಪುತ್ರನ್, ಜೊತೆ ಕಾರ್ಯದರ್ಶಿಗಳಾದ ಸುರೇಂದ್ರನಾಥ್ ಹಳೆಯಂಗಡಿ, ಶ್ಯಾಮ್ ಕೆ ಪುತ್ರನ್, ಜೊತೆ ಕೋಶಾಧಿಕಾರಿಗಳಾದ ಜಗನ್ನಾಥ್ ಆರ್ ಕಾಂಚನ್, ರಮೇಶ್ ಎಸ್ ಅಮೀನ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯರು, ಹಾಗೂ ಮೊಗವೀರ ಗಾರ್ಡ್ಸ್ ವಿಶೇಷ ಶ್ರಮಿಸಿದರು.

ಶ್ರೀಮದ್ ಭಾರತ ಮಂಡಳಿಯು ಕಳೆದ 146 ವರ್ಷಗಳಿಂದ ಪುಣ್ಯ ಗ್ರಂಥ ವಾಚನ ಮಾಡುತ್ತಿದ್ದು,, ಈ ವರ್ಷ 08.ಜೂನ್ 2024ರಲ್ಲಿ “ಕುಮಾರ ವ್ಯಾಸ ಭಾರತ” ಎಂಬ ಪುಣ್ಯ ಗ್ರಂಥದ ಪಾರಾಯಣ ಆರಂಭಿಸಿದ್ದು, ಇದರ ಸಮಾಪ್ತಿ ಮಂಗಲೋತ್ಸವ 22/2/25ರಂದು ನಡೆಯಿತು.
ಶ್ರೀ ಹರಿನಾಮ ಅನವರತ ಸ್ಮರಿಸುವುದರಿಂದ ಮತ್ತು ಪರಮಾತ್ಮನ ಲೀಲಾವತಾರದ ಕಥೆಗಳನ್ನು ಶ್ರವಣ ಮಾಡುವುದರಿಂದ ಭವ ಬಂಧನದಿಂದ ಪಾರಾಗಿ ಮೋಕ್ಷವನ್ನು ಪಡೆಯುವ ಸುಲಭ ಮಾರ್ಗ ಎಂದು ಶ್ರೀ ಕೃಷ್ಣ ಪರಮಾತ್ಮ ಗೀತೆಯಲ್ಲಿ ಉಪದೇಶಿಸಿದ್ದು, ಶ್ರೀಮದ್ಭಾರತ ಮಂಡಳಿಯು ಕಳೆದ 146 ವರ್ಷಗಳಿಂದ ಗ್ರಂಥ ವಾಚನ ಮಾಡುತ್ತಿರುವುದು ಒಂದು ದಾಖಲೆಯಾಗಿದೆ.