September 6, 2026
Mumbai News Kannada
ಮುಂಬಯಿ

ಹರಟೆ ಸಾಹಿತಿ ದಿ. ಚಂದ್ರಶೇಖರ ರಾವ್ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭ





ಮುಂಬಯಿ :ಭಾಂಡುಪ್
ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 24 ರಂದು, ಭಾಂಡುಪ್ ನಲ್ಲಿಯ ಹರಟೆ ಸಾಹಿತಿ ಚಂದ್ರಶೇಖರ ರಾವ್ ಅವರ ಸ್ವಗೃಹದಲ್ಲಿ ಅವರ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ನೆರವು ನೀಡುವ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.

ಟ್ರಸ್ಟ್‌ನ ನಿರ್ದೇಶಕಿ ಶ್ರೀಮತಿ ಶ್ರೀದೇವಿ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಚಂದ್ರಶೇಖರ ರಾವ್ ಅವರು ಹಿಂದಿನಿಂದಲೂ ಬಡಮಕ್ಕಳ ಶಿಕ್ಷಣಕ್ಕೆ ನರವಾಗುವುದರಲ್ಲಿ ತೃಪ್ತಿ ಕಂಡವರು. ಹೊಸಹೊಸ ಪ್ರತಿಭೆಗಳು ಬೆಳಕಿಗೆ ಬರಬೇಕೆಂದು ಅನವರತ ಪ್ರಯತ್ತಿಸುತ್ತಿದ್ದರು. ಅವರ ಮನದಿಚ್ಚೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈ ಟ್ರಸ್ಟ್ ಸದಾ ಪ್ರಯತ್ನಿಸುತ್ತಿದೆ. ಅದೆಷ್ಟೋ ಮಕ್ಕಳಿಗೆ ಈ ಟ್ರಸ್ಟ್ ನಿಂದ ಸಹಾಯ ಧನವನ್ನು ನೀಡಲಾಗಿದೆ ಎಂದು ಹೇಳಿದರಲ್ಲದೆ ರಾವ್ ಅವರ ನೆನಪಿನಲ್ಲಿ ಟ್ರಸ್ಟ್ ಹಮ್ಮಿಕೊಳ್ಳುತ್ತಿರುವ ಇತರ ಕಾರ್ಯಕ್ರಮಗಳ
ಬಗ್ಗೆಯೂ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅರುಣ್ ಶೇಟ್, ಪ್ರತಾಪ್ ಶೇಟ್ ಹಾಗೂ ಶ್ರೀಮತಿ ಅವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ
ಶ್ರೀಮತಿಯವರು ಚಂದ್ರಶೇಖರ್ ಯಾವಾಗಲೂ ಇತರರ ಕಷ್ಟಗಳಿಗೆ ಸ್ಪಂದಿಸಲು ಮುಂದಾಗುತ್ತಿದ್ದ ಅವರ ಸ್ವಭಾವ ಆದರ್ಶನೀಯವಾದುದು ಎಂದು ಹೇಳಿದರು. ಅತಿಥಿಗಳಾದ ಅರುಣ್ ಶೇಟ್ ಹಾಗೂ ಪ್ರತಾಪ್ ಶೇಟ್ ಇವರಿಬ್ಬರೂ ಚಂದ್ರಶೇಖರ ರಾವ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು. ರಾವ್ ಅವರ ಸರಳ ಸಜ್ಜನಿಕೆಯ ಸ್ವಭಾವ, ಸಾಹಿತ್ಯದ ಮೇಲಿನ ಅವರ ಪ್ರೀತಿ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮುಕ್ತಕಂಠದಿಂದ ಕೊಂಡಾಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಾಲಚಂದ್ರ ದೇವಾಡಿಗ, ಕೃಷ್ಣ ಪೂಜಾರಿ, ಸಂದೀಪ್ ಭಟ್ ಹಾಗೂ ಪರಮಾನಂದ ದಳಪತಿ ಅವರುಗಳು
ಚಂದ್ರಶೇಖರ ರಾವ್ ಅವರ ಬಗ್ಗೆ ಮಾತನಾಡಿ ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಸಮಾಜ ಸೇವೆ ಹಾಗೂ
ಸಾಹಿತ್ಯ ಸೇವೆಯನ್ನು ಕೊಂಡಾಡಿದರು.

‘ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್’ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಸಾಹಿತ್ಯಿಕ ಹಬ್ಬದಂತೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜಾನಪದ ಹಾಡುಗಳನ್ನು ಹಾಗೂ ನೃತ್ಯಗಳನ್ನು ಸಾದರಪಡಿಸಿದರು. ವಿಶೇಷವಾಗಿ ರಾಷ್ಟ್ರ ಪ್ರಶಸ್ತಿ ವಿಜೇತೆ ಪುಟಾಣಿ ಆರ್ನಾ ಸಂದೀಪ್ ಭಟ್ ಇವರ ನೃತ್ಯ ಮತ್ತು ಹಾಡು ಕಾರ್ಯಕ್ರಮದ
ಆಕರ್ಷಣೆಯಾಗಿತ್ತು.
ವಿಶೇಷವಾಗಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು ಕವಿಗಳು ತಮ್ಮ ಕವನಗಳ ಮೂಲಕ ಕಾರ್ಯಕ್ರಮಕ್ಕೆ ಸಾಹಿತ್ಯಕ ಮೆರುಗನ್ನು ನೀಡಿದರು.
ಸಂಜೆ 5:00 ಗಂಟೆಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು, ಆಪ್ತರು ಹಾಗೂ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಾರಂಭದಲ್ಲಿ ಅರ್ಪಿತಾ ಭಟ್ ಅವರು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮವನ್ನು
ಡಾ. ಜಿ.ಪಿ.ಕುಸುಮಾ ಅವರು ನಿರ್ವಹಿಸಿ ವಂದಿಸಿದರು.



Related posts

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಕಲೆಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ -ವಾರ್ಷಿಕ ಅಯ್ಯಪ್ಪ ಮಹಾಪೂಜೆ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾಚಿ ಭಂಡಾರಿ ಗೆ ಶೇ 93.40 ಅಂಕ.

Mumbai News Desk

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ.

Mumbai News Desk

ಮುಂಬೈ : ಗೋರೆಗಾಂವ್ ಅಗ್ನಿ ಅವಘಡ: ಒಂದೇ ಕುಟುಂಬದ ಮೂವರು ಸಾವು.

Mumbai News Desk

39ನೇ ವಾರ್ಷಿಕ ಮಹಾಸಭೆ – ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಸಂಚಾಲಕತ್ವದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ- ಶನೀ ಶ್ವರ ದೇವಸ್ಥಾನ, ರಾವಲ್ಪಾಡ, ದಹಿಸರ್ : ಅಧ್ಯಕ್ಷರಾಗಿ ಸಂತೋಷ್ ಪೂಜಾರಿ

Mumbai News Desk