29.1 C
Karnataka
March 31, 2025
ಪ್ರಕಟಣೆ

ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು : ಮಾ. 8ರಂದು ಜಾಗತಿಕ ಮಹಿಳಾ ದಿನಾಚರಣೆ

ಬಿಲ್ಲವ ಸಮಾಜದ ಮಹಾನ್ ನಾಯಕ, ಅಭಿವೃದ್ಧಿಯ ಹರಿಕಾರ ದಿ. ಜಯ ಸಿ ಸುವರ್ಣ ಅವರ ಅಭಿಮಾನಿಗಳ, ಹಿತೈಷಿಗಳ ಸಂಘಟನೆ ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ ಮಾರ್ಚ್ 8ರ ಶನಿವಾರ, ಮಧ್ಯಾಹ್ನ 2.30ಗಂಟೆಗೆ ‘ಜಾಗತಿಕ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ಗೊರೇಗಾಂವ್ ಪೂರ್ವ ದಿ ಜಯ ಸಿ ಸುವರ್ಣ ಮಾರ್ಗ, ಜಯಲೀಲಾ ಬ್ಯಾಂಕ್ವೆಟ್ಸ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಶಿತಾ ಸೂರ್ಯಕಾಂತ ಸುವರ್ಣ ವಹಿಸಲಿದ್ದಾರೆ.
ಈ ಶುಭಾವಸರದಲ್ಲಿ ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಭಾರತ್ ಬ್ಯಾಂಕ್ ನ ಮಾಜಿ ಉಪಕಾರ್ಯಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ ಸಾಲ್ಯಾನ್ ಅವರಿಗೆ ‘ಜಯ ಸುವರ್ಣ’ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮುಖ್ಯ ಅತಿಥಿಯಾಗಿ ಥಾಣೆಯ ಮಾಜಿ ಮೇಯರ್ ಮೀನಾಕ್ಷಿ ಶಿಂದೆ ಆಗಮಿಸಲಿರುವರು.
ಗೌರವ ಅತಿಥಿಗಳಾಗಿ ಜಯಲಕ್ಷ್ಮಿ ಪಿ ಸಾಲ್ಯಾನ್, ಜಯಶ್ರೀ ಎಮ್ ಹೆಜಮಾಡಿ, ಆಶಾ ಆರ್ ಬಂಗೇರ, ಶೋಭಾ ಎಸ್ ಪೂಜಾರಿ, ಕೃಪಾ ಬಿ ರಾಠೋಡ್, ಸ್ನೇಹಾ ಪಿ ಪೂಜಾರಿ, ಪ್ರಭಾ ಎನ್ ಸುವರ್ಣ, ಸುಜಾತ ಎಸ್ ಕೋಟ್ಯಾನ್ ಉಪಸ್ಥಿತರಿರುವರು.
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು, ಹಿರಿಯ ನಾಗರಿಕ ದಂಪತಿಗಳನ್ನು, ಹಾಗೂ ಸಮಾಜ ಸೇವೆಯಲ್ಲಿ ಕೊಡುಗೆ ನೀಡಿದ ಮಹಿಳೆಯರನ್ನು ಗೌರವಿಸಲಾಗುವುದು.
ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮದೊಂದಿಗೆ, ಇತರ ಆಕರ್ಷಕ ವಿನೋದವಳಿ ಸ್ಪರ್ಧೆ ನಡೆಯಲಿದೆ.
ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು, ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

Related posts

ಕುಲಾಲ ಪ್ರತಿಷ್ಠಾನದ ಆಶ್ರಯದಲ್ಲಿ ನ.23 ರಂದು ವಿಜಯ ಕಲಾವಿದರು ಕಿನ್ನಿಗೋಳಿ ಇದರ ಮುಂಬೈ ಪ್ರವಾಸದ ಉದ್ಘಾಟನೆ

Mumbai News Desk

ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ನವೆಂಬರ್ 26 ರಂದು ಚಿಣ್ಣರ ಬಿಂಬ  ಮುಂಬಯಿ ವತಿಯಿಂದ ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ  ಪ್ರತಿಭಾ ಸ್ಪರ್ಧೆ

Mumbai News Desk

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

Mumbai News Desk

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ರಿ. 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

Mumbai News Desk

ನ.16 ರಂದು ಕರ್ನಾಟಕ ಸಂಘ, ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಆಚರಣೆ

Mumbai News Desk