
ಮಲಾಡ್, ಮಾ. 5: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಲಾಡ್ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಮಾರ್ಚ್ 8 ರಂದು ರವಿವಾರ ಸಂಜೆ ಘಂಟೆ 5:00ಕ್ಕೆ ಮಾರ್ವೆ ರೋಡ್ ಯುನಿಟಿ ಅಪಾರ್ಟ್ಮೆಂಟ್ ನ ಸಂಘದ ಕಚೇರಿಯ ರಮನಾಥ್ ಪಯ್ಯಡೆ ಸ್ಮಾರಕ ಮಿನಿ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಲಾಡ್ ಕನ್ನಡ ಸಂಘ ಆಯೋಜಿಸಿರುವ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತ ವಿ ಭಂಡಾರಿ ಅವರ ನೇತೃತ್ವದಲ್ಲಿ ಸರ್ವ ಸದಸ್ಯರ ಸಹಯೋಗದೊಂದಿಗೆ ಜರಗಲಿರುವ ಈ ಕಾರ್ಯಕ್ರಮದಲ್ಲಿ ಚಾರ್ಕೋಪ್ ಪೇಶ್ವಾ-ಮೋರ್ಯ ಗ್ರೂಪ್ ಅಪ್ ಮಿತ್ರಮಂಡಳಿಯ ಮಹಿಳಾ ಕಾರ್ಯಧ್ಯಕ್ಷೆ ರೇಷ್ಮಾ ಸುವರ್ಣ ಸತ್ಪುತೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಜಗದೀಶ್ ಎಸ್ ಹೆಗ್ಡೆ ಗೌರವ ಪ್ರಧಾನ ಕಾರ್ಯದರ್ಶಿ, ಆಶಾಲತ ಎಸ್ ಕೋಟ್ಯಾನ್ ಮತ್ತು ಗೌರವ ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರಗಲಿದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದ್ದು ಮಹಿಳೆಯರಿಗಾಗಿ ಹಲವಾರು ಸಾಂಸ್ಕೃತಿಕ ಹಾಗು ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಸದುಪಯೋಗದ ಅವಕಾಶವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ