
ಮುಂಬಯಿ; ನಗರದ ಪ್ರತಿಷ್ಠಿತ ಜಾತಿಯ ಸಂಸ್ಥೆಯಲ್ಲಿ ಒಂದಾದ ಬೋಂಬೆ ಬಂಟ್ಸ್ ಅಸೋಷಿಯೇಶನಿನ 41ನೇ ವಾರ್ಷಿಕ ಮಹಾಸಭೆಯು ಮಾ. 9 ರಂದು ಬೆಳಿಗ್ಗೆ 10.30 ಕ್ಕೆ ನವಿ ಮುಂಬಯಿ ಯ ಜೂಯಿ ನಗರದ ಬಂಟ್ಸ್ ಸೆಂಟರ್‌ನ ಶಶಿಕಲಾ ಮನ್‌ಮೋಹನ್ ಶೆಟ್ಟಿ ಕಾಂಪ್ಲೆಕ್ಸ್‌ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ಎಸೋಸಿಯೇಷನ್ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ
. ಆನಂತರ ನಡೆಯಲಿರುವ ಬಹಿರಂಗ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಮಾಜದ ಸಾಧಕರಾದ ರಘುರಾಮ್ ಕೆ ಶೆಟ್ಟಿ (ಹಾಸ್ಪಿಟಾಲಿಟಿ), ಡಾ. ಶ್ರೀಧರ್ ಶೆಟ್ಟಿ (ಶಿಕ್ಷಣ) ಡಾ. ಸುನಿಲ್ ಎಚ್ ಶೆಟ್ಟಿ (ವೈದ್ಯಕೀಯ) ಮತ್ತು ಪ್ರತಾಪ್ ವಿ ಶೆಟ್ಟಿ (ಕ್ರೀಡೆ) ಇವರಿಗೆ ಬಂಟ್ಸ್ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಹಾಗೂ
ಬೋಂಬೆ ಬಂಟ್ಸ್ ಅಸೋಷಿಯೇಶನಿನ ಮಾಜಿ ಅಧ್ಯಕ್ಷರುಗಳಾದ ಎನ್.ಸಿ .ಶೆಟ್ಟಿ , ಜಯರಾಮ್ ಎಸ್. ಮಲ್ಲಿ, ಜಯಂತ್ ಕೆ. ಶೆಟ್ಟಿ, ನ್ಯಾ. ರತ್ನಾಕರ್ ವಿ. ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ನ್ಯಾ.ಯು. ಶೇಖರ್ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ 3.00 ರಿಂದ ಮಹಿಳಾ ವಿಭಾಗದ ವತಿಯಿಂದ ಕುಣಿತ ಭಜನೆ ಸ್ಪರ್ಧೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಥಳೀಯ ಶಾಸಕಿ ಮಂದ ವಿ. ಮ್ಯಾತ್ರೆ (ಸಿಬಿಡಿ ಬೇಳಾಪುರ) ಮತ್ತು ಗೌರವ ಅತಿಥಿಯಾಗಿ ಪ್ರಭಾ ಸುರೇಂದ್ರ. ಶೆಟ್ಟಿ ಪಾಲ್ಗೊಳ್ಳಲಿದ್ದಾರೆ,
.
ಸಮಾರಂಭದಲ್ಲಿ ಹಿತೈಷಿಗಳು, , ದಾನಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಬಾಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ ,
ಗೌರವ ಪ್ರಧಾನ ಕಾಠ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಗೌರವ ಕೋಶಾಧಿ ಕಾರಿ ಸಿಎ ವಿಶ್ವನಾಥ ಶೆಟ್ಟಿ ,ಜೊತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ,
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿಎಸ್. ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಕೆ. ಶೆಟ್ಟಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾಠ್ಯಕಾರಿ ಸಮಿತಿಯ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
———–