September 6, 2026
Mumbai News Kannada
ಮುಂಬಯಿ

ಬಂಟ್ಸ್ ನ್ಯಾಯ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ  ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರ ಜಯ ಎ ಶೆಟ್ಟಿ ಶಿಮಂತೂರು  ಆಯ್ಕೆ,





ಮುಂಬೈ ಹಾಗೂ ಉಪನಗರಗಳ ಬಂಟ ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಬೇಕೆನ್ನುವ ಉದ್ದೇಶದಿಂದ 25 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಬಂಟ್ಸ್ ನ್ಯಾಯ ಮಂಡಳಿಗೆ ನೂತನ ಅಧ್ಯಕ್ಷರಾಗಿ  ಕಬಡ್ಡಿ ಕ್ರೀಡಾಪಟು, ಅಂತರಾಷ್ಟ್ರೀಯ ಕಬ್ಬಡಿ ತೀರ್ಪುಗಾರರಾಗಿರುವ ,ಛತ್ರಪತಿ ಶಿವಾಜಿ ಪ್ರಶಸ್ತಿ ಪುರಸ್ಕೃತ, ಸೌತ್ ಕೆನರಾ ಸ್ಪೋರ್ಟ್ಸ್ ಕ್ಲಬ್ ಹಾಗೂ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್‌ ನ ಕಾರ್ಯದರ್ಶಿ ಜಯ ಎ. ಶೆಟ್ಟಿ ಶಿಮಂತೂರು ಆಯ್ಕೆಯಾಗಿದ್ದಾರೆ,.

 ಫೆ.22 ರಂದು ಕುರ್ಲಾ ಪೂರ್ವದ ಬಂಟರ ಸಂಘದ ಎನೆಕ್ಸ್ ಸಭಾಗೃಹದಲ್ಲಿ ನಡೆದ ಬಂಟ್ಸ್ ನ್ಯಾಯ ಮಂಡಳಿ   ವಾರ್ಷಿಕ ಮಹಾಸಭೆಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜಯ ಎ ಶೆಟ್ಟಿ ಅವರಿಗೆb ನ್ಯಾಯಮಂಡಳಿಯ  ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಎಲ್ ಶೆಟ್ಟಿ ಕಡಂದಲೆಯವರು ಹೂಗುಚ್ಚ ನೀಡಿ ಅಭಿನಂದಿಸಿದರು,

  ಜಯ ಎ ಶೆಟ್ಟಿ ಯವರು ಬ್ಯಾಂಕ್ ಆಫ್ ಮಹಾರಾಷ್ಟ್ರದ  ನಿವೃತ್ತ ಅಧಿಕಾರಿ ಆಗಿದ್ದು, ಬಂಟರ ಸಂಘ ಮುಂಬೈಯ ಮಾಜಿ ಕಾರ್ಯದರ್ಶಿಯಾಗಿ, ಉನ್ನತ ಶಿಕ್ಷಣ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿ , ಮಾತೃಭೂಮಿ ಕೋ ಆಪರೇಟಿವ್  ಸೊಸೈಟಿಯ ಮಾಜಿ ಕಾರ್ಯದರ್ಶಿ,
ಹಲವು ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವರು.ಇವರು ಮಾರ್ಗದರ್ಶನದಲ್ಲಿ
ನಗರದ ವಿವಿಧ ಸಂಘ, ಸಂಸ್ಥೆಗಳ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯುವಲ್ಲಿ ಸಹಕಾರಿಯಾಗಿದೆ,          ಪ್ರತಿ ವರ್ಷ ಬಂಟರ ಸಂಘ ನಡೆಸುವ ಕ್ರೀಡಾಕೂಟದ ಯಶಸ್ವಿಗೆ ಇವರ ಪೂರ್ಣ ಸಹಕಾರ ಮುಖ್ಯ ಕಾರಣವಾಗಿದೆ, ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿ ಎರಡು ಬಾರಿ ನಡೆದ ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ  ಪಂದ್ಯಾಟಕ್ಕೆ ಮುಖ್ಯ ಮಾರ್ಗದರ್ಶಕರಾಗಿದ್ದಾರು,ಅಲ್ಲದೆ
ದೇಶದ ಪ್ರಮುಖ ರಾಜ್ಯಗಳಲ್ಲಿ ಕಬ್ಬಡಿ ಆಟವಾಡಿದ ಅನುಭವ ಅಲ್ಲದೆ ತೀರ್ಪುಗಾರರಾಗಿ ಕೂಡ ಕಾರ್ಯನಿರ್ವಹಿಸಿದವರು,

 ಕ್ರೀಡಾ ಮೈದಾನದಲ್ಲಿ ಆಟಗಾರರಿಗೆ ನ್ಯಾಯ  ನೀಡುವಲ್ಲಿ ಸಮರ್ಥರೆನಿಸಿಕೊಂಡವರು, ಇವರ ಕ್ರೀಡಾ ಅಭಿಮಾನವನ್ನು ಗುರುತಿಸಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳು  ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ,

ಜಯ ಶೆಟ್ಟಿ ಅವರ ಪರಿವಾರ ಕಬ್ಬಡಿ ಆಟಗಾರರ ಪರಿವಾರವಾಗಿದ್ದು, ಪತ್ನಿ ರಾಷ್ಟ್ರೀಯ ಕಬಡ್ಡಿ ಆಟಗಾರರಾಗಿದ್ದು ,
ಮಗ ಕೂಡ ರಾಷ್ಟ್ರೀಯ ಕಬಡ್ಡಿ ಆಟಗಾರರಾಗಿದ್ದು ಇವರಿಬ್ಬರಿಗೂ ಛತ್ರಪತಿ ಶಿವಾಜಿ ಪ್ರಶಸ್ತಿಯನ್ನು ಮಹಾರಾಷ್ಟ್ರ ಸರಕಾರ ನೀಡಿ ಗೌರವಿಸಿದೆ.



Related posts

ಮೊಗವೀರ ಸಮಾಜದ ಯುವ ನೇತಾರ ಸಂತೋಷ್ ಪುತ್ರನ್ ಅವರ ಮಾತೃಶ್ರೀ ಸೀತಾ ಕೃಷ್ಣ ಪುತ್ರನ್ ರಿಗೆ ನುಡಿ ನಮನ. 

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk

ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದ  ನವರಾತ್ರಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ.

Mumbai News Desk

ಎಸ್ ಎಸ್ ಸಿ ಪರೀಕ್ಷೆ: ರಕ್ಷ್ಮಾ ಜಯಂತ್ ಕುಳಾಯಿಗೆ ಶೇ. 99.20 ಅಂಕ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರ – 47 ನೇ ವಾರ್ಷಿಕ ಮಹಾ ಸಭೆ

Mumbai News Desk