
ಚಿತ್ರ ವಿವರ : ಪಿ.ಆರ್.ರವಿಶಂಕರ್, ಬೊಯಿಸರ್ : 05.03.2025
ಬೊಯಿಸರ್ ಪರಿಸರದಲ್ಲಿನ ಧಾರ್ಮಿಕ ಮುಂದಾಳು ಹಾಗೂ ತುಳುಕನ್ನಡಿಗರ ಪ್ರತಿಷ್ಟಿತ ಮೀರಾ ಡಹಾಣೂ ಬಂಟ್ಸ್ ( ರಿ) ಸಂಸ್ಥೆಯ ಪಾಲ್ಘರ್ ಬೊಯಿಸರ್ ವಲಯದ ಮಾಜಿ ಅದ್ಯಕ್ಷರಾದ ಶ್ರೀ ವಿಜಯ್ ಶೆಟ್ಟಿಯವರ ಸಮರ್ಥ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಮಂದಿರದಲ್ಲಿ ಪ್ರತೀ ವರ್ಷವೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು ಜರಗುತ್ತಾ ಬಂದಿವೆ.
ಬೊಯಿಸರ್ ಪೂರ್ವದ ಖೈರಾಪಾಡಾದ ಮಹಾದೇವ್ ನಗರದಲ್ಲಿನ ಶ್ರೀ ಸೋಮೇಶ್ವರ್ ಮಂದಿರದಲ್ಲಿ ಇದೇ 03 ಮಾರ್ಚ್ 2025 ನೆಯ ಸೋಮವಾರದಂದು ಮಂದಿರದ 15 ನೆಯ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

ಪ್ರಾತಃಕಾಲ ಗಣಹೋಮ ಮತ್ತು ಶ್ರೀ ಗಣೇಶಪೂಜೆ ಯೊಂದಿಗೆ ಕಾರ್ಯಕ್ರಮ ಆರಂಭವಾಗಿ ನವ ಅಭಿಷೇಕ ಮತ್ತು ನಾಗ ಪೂಜೆಯ ಬಳಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಜರಗಿತು. ಜೊತೆಗೆ ಸ್ಥಳೀಯ ಭಜನಾ ಮಂಡಳಿಯವರ ವತಿಯಿಂದ ಭಕ್ತಿಪ್ರಧಾನ ಗೀತೆಗಳು , ಭಜನಾ ಕಾರ್ಯಕ್ರಮವಿತ್ತು.
ಮದ್ಯಾಹ್ನ 12.30 ರ ಮಹಾ ಮಂಗಳ ಆರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಜರಗಿತು.
ವೈದಿಕ ಪೂಜಾ ವಿಧಿವಿಧಾನಗಳು ಡಾ •ಎಮ್. ಜೆ.ಪ್ರವೀಣ್ ಭಟ್ ( ಅಂತರ ರಾಷ್ಟ್ರೀಯ ಆಧ್ಯಾತ್ಮಿಕ ಗುರು) ಇವರ ನೇತೃತ್ವ ಹಾಗೂ ಪುರೋಹಿತ ಶ್ರೀನಿವಾಸ ಉಡುಪ ಐರೋಳಿ ಇವರ ಸಹಕಾರದಲ್ಲಿ ಜರಗಿದವು.
ಕಾರ್ಯಕ್ರಮದಲ್ಲಿ ಸೋಮೇಶ್ವರ್ ಮಂದಿರ್ ಮಿತ್ರಮಂಡಳ್ ಮತ್ತು ಮಹಿಳಾ ವಿಭಾಗದ ಸದಸ್ಯರು , ಸ್ಥಳೀಯ ಭಕ್ತಾಭಿಮಾನಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಪಾಲ್ಘರ್, ಬೊಯಿಸರ್ ಹಾಗೂ ಡಹಾಣೂ ವಿನ ವಿವಿಧ ಸ್ಥಳಗಳಿಂದ ಆಗಮಿಸಿದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
✒️ ಚಿತ್ರ ಮತ್ತು ಸುದ್ದಿ : ಪಿ.ಆರ್.ರವಿಶಂಕರ್, ಡಹಾಣು 8483980035