September 6, 2026
Mumbai News Kannada
ಸುದ್ದಿ

ಬೊಯಿಸರ್ ಸೋಮೇಶ್ವರ ಮಂದಿರದ 15 ನೆಯ ವರ್ಧಂತ್ಯುತ್ಸವ ಸಂಪನ್ನ.





ಚಿತ್ರ ವಿವರ : ಪಿ.ಆರ್.ರವಿಶಂಕರ್, ಬೊಯಿಸರ್ : 05.03.2025

ಬೊಯಿಸರ್  ಪರಿಸರದಲ್ಲಿನ    ಧಾರ್ಮಿಕ ಮುಂದಾಳು  ಹಾಗೂ ತುಳುಕನ್ನಡಿಗರ ಪ್ರತಿಷ್ಟಿತ  ಮೀರಾ ಡಹಾಣೂ ಬಂಟ್ಸ್ ( ರಿ) ಸಂಸ್ಥೆಯ ಪಾಲ್ಘರ್ ಬೊಯಿಸರ್ ವಲಯದ ಮಾಜಿ ಅದ್ಯಕ್ಷರಾದ ಶ್ರೀ ವಿಜಯ್ ಶೆಟ್ಟಿಯವರ ಸಮರ್ಥ  ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಮಂದಿರದಲ್ಲಿ ಪ್ರತೀ ವರ್ಷವೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು ಜರಗುತ್ತಾ ಬಂದಿವೆ.              

ಬೊಯಿಸರ್ ಪೂರ್ವದ ಖೈರಾಪಾಡಾದ ಮಹಾದೇವ್ ನಗರದಲ್ಲಿನ  ಶ್ರೀ ಸೋಮೇಶ್ವರ್ ಮಂದಿರದಲ್ಲಿ ಇದೇ 03 ಮಾರ್ಚ್ 2025 ನೆಯ ಸೋಮವಾರದಂದು ಮಂದಿರದ  15 ನೆಯ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

     ಪ್ರಾತಃಕಾಲ ಗಣಹೋಮ ಮತ್ತು ಶ್ರೀ ಗಣೇಶಪೂಜೆ ಯೊಂದಿಗೆ ಕಾರ್ಯಕ್ರಮ ಆರಂಭವಾಗಿ ನವ ಅಭಿಷೇಕ ಮತ್ತು ನಾಗ ಪೂಜೆಯ ಬಳಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಜರಗಿತು. ಜೊತೆಗೆ ಸ್ಥಳೀಯ ಭಜನಾ ಮಂಡಳಿಯವರ ವತಿಯಿಂದ ಭಕ್ತಿಪ್ರಧಾನ ಗೀತೆಗಳು , ಭಜನಾ ಕಾರ್ಯಕ್ರಮವಿತ್ತು.

ಮದ್ಯಾಹ್ನ 12.30 ರ ಮಹಾ ಮಂಗಳ ಆರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಜರಗಿತು.

ವೈದಿಕ  ಪೂಜಾ ವಿಧಿವಿಧಾನಗಳು ಡಾ •ಎಮ್. ಜೆ.ಪ್ರವೀಣ್ ಭಟ್ ( ಅಂತರ ರಾಷ್ಟ್ರೀಯ ಆಧ್ಯಾತ್ಮಿಕ ಗುರು) ಇವರ ನೇತೃತ್ವ ಹಾಗೂ ಪುರೋಹಿತ ಶ್ರೀನಿವಾಸ ಉಡುಪ ಐರೋಳಿ ಇವರ ಸಹಕಾರದಲ್ಲಿ ಜರಗಿದವು.

  ಕಾರ್ಯಕ್ರಮದಲ್ಲಿ ಸೋಮೇಶ್ವರ್ ಮಂದಿರ್ ಮಿತ್ರಮಂಡಳ್ ಮತ್ತು ಮಹಿಳಾ ವಿಭಾಗದ ಸದಸ್ಯರು , ಸ್ಥಳೀಯ ಭಕ್ತಾಭಿಮಾನಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಪಾಲ್ಘರ್, ಬೊಯಿಸರ್ ಹಾಗೂ ಡಹಾಣೂ ವಿನ ವಿವಿಧ ಸ್ಥಳಗಳಿಂದ ಆಗಮಿಸಿದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

✒️ ಚಿತ್ರ ಮತ್ತು ಸುದ್ದಿ : ಪಿ.ಆರ್.ರವಿಶಂಕರ್, ಡಹಾಣು 8483980035



Related posts

ಉಡುಪಿ : ನಗರ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಭೀಕರ ಅಗ್ನಿ ಅವಘಡ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇದರ ನೂತನ ಅಧ್ಯಕ್ಷರಾಗಿ ಶ್ರೀ ರಾಜೇಶ್ ಜೆ ಶೆಟ್ಟಿ ಆಯ್ಕೆ

Mumbai News Desk

ದೆಹಲಿ ಹೋಟೆಲ್ ಅಗ್ನಿ ದುರಂತ: 21 ಜನ ದುರ್ಮರಣ

Mumbai News Desk

ಮಂಗಳೂರು ರೈಲ್ವೆ ವಲಯ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವಿಲೀನ : ಅಕ್ಟೋಬರ್ 1 ರಿಂದ ಹೊಸ ವ್ಯವಸ್ಥೆ ಜಾರಿ

Mumbai News Desk

GST 2.0 : ಸರಳೀಕರಣಗೊಂಡ ಹೊಸ ತೆರಿಗೆ ವ್ಯವಸ್ಥೆ – 5% ಮತ್ತು 18% ಶ್ಲಾಬ್,

Mumbai News Desk

ಡ್ರಾಮಾ ಜ್ಯೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಸಿಎಂ ಮೆಚ್ಚುಗೆ

Mumbai News Desk