
ಸ್ತನ್ಯಪಾನ ಕೇಂದ್ರ ಇಂದಿನ ಅಗತ್ಯ – ಎಂ ಅರುಣ್ ಐತಾಳ
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ನಗರ ಪ್ರಾಥಮಿಕ ಅರೋಗ್ಯಕೇಂದ್ರ ಜೆಪ್ಪು ಮಂಗಳೂರು ಇಲ್ಲಿ ಸ್ತನ್ಯಪಾನ ಕೊಠಡಿ ಉದ್ಘಾಟನೆಗೊಂಡಿತು.
ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ ಅರುಣ್ ಐತಾಳ ಸ್ತನ್ಯಪಾನ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ “ಸಾರ್ವಜನಿಕ ಸ್ಥಳಗಳಲ್ಲಿ ತಾಯಿ ಮಗುವಿಗೆ ಎದೆಹಾಲು ಕೊಡುವಾಗ, ಎಲ್ಲಿ ಕೊಡಬೇಕು ಎಂಬ ಮುಜುಗರ ಅವರನ್ನು ಕಾಡುತಿತ್ತು. ಇಂದು ಈ ಸಮಸ್ಯೆಗೆ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪರಿಹಾರ ಪೂರೈಸಿದೆ, ಇದು ನಿಜಕ್ಕೂ ಹೆಮ್ಮೆಯ ವಿಷಯ ಎನ್ನುತ್ತಾ ಇಂದಿನ ದಿನಗಳಲ್ಲಿ ಸ್ತನ್ಯಪಾನ ಕೇಂದ್ರದ ಅಗತ್ಯತೆಯನ್ನು ವಿವರಿಸಿದರು.




ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಆರ್ ಸೀ ಎಚ್ ಅಧಿಕಾರಿ ಡಾ. ರಾಜೇಶ್ ಅವರು “ಇಂದು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮೂಲಕ ಎರಡನೇ ಸ್ತನ್ಯಪಾನ ಕೇಂದ್ರ ಉದ್ಘಾಟನೆಯಾಗಿರುವುದು ಸಂತಸವಾಗಿದೆ. ಟ್ರಸ್ಟ್ ಮೂಲಕ ಮತ್ತಷ್ಟು ಸೇವಾ ಕಾರ್ಯಗಳು ನಡೆಯುತ್ತಿರಲಿ ಎಂದರು.
ಇನ್ನೋರ್ವ ಅತಿಥಿ 92.7 ಬಿಗ್ ಎಫ್ ಎಂ ನ ಆರ್ ಜೆ ನಯನ ಶೆಟ್ಟಿ “ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಜನಪರ ಕಾರ್ಯಗಳು ಅಭಿನಂದನೀಯ, ಅವರ ಸಮಾಜಮುಖಿ ಕಾರ್ಯಗಳಿಗೆ ಎಲ್ಲರೂ ಪ್ರೋತ್ಸಾಹ ನೀಡೋಣ ಎಂದರು.




ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್, ಟ್ರಸ್ಟ್ ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿ, ಎಲ್ಲರನ್ನೂ ಸ್ವಾಗತಿಸಿದರು.
ಫಾದರ್ ಮುಲ್ಲರ್ ಹಾಸ್ಪಿಟಲ್ ನ ಡಾ. ಸುಧೀಂದ್ರ ಪ್ರಭು, ನಗರ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾ ರಾವ್, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಲಕ್ಷ್ಮೀಶ ಕೋಟ್ಯಾನ್, ಹಾಗೂ ಪೃಥ್ವಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಲೋಲಾಕ್ಷಿ ಫೆರ್ನಾಂಡಿಸ್, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಯಾದ ಶ್ರೀಮತಿ ಶೈನಿ ನೆರವೇರಿಸಿದರೆ, ಡಾ. ವಿದ್ಯಾ ರಾವ್ ವಂದಿಸಿದರು.
” ಮೂಲತ್ವ ನಾನೇ ನೀನು ನೀನೇ ನಾನು” ಎಂಬ ತತ್ವದಡಿಯಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು, ಇಂದು ಟ್ರಸ್ಟ್ ವತಿಯಿಂದ 2ನೇ ಸ್ತನ್ಯಪಾನ ಕೇಂದ್ರ ಉದ್ಘಾಟನೆಗೊಂಡಿದ್ದು ಅಭಿನಂದನೀಯ.