April 1, 2025
ಪ್ರಕಟಣೆ

ಮಾ. 15, ತುಳು ಸಂಘ, ಬೋರಿವಲಿ 15ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

ಮುಂಬಯಿ: ತುಳು ಸಂಘ, ಬೊರಿವಲಿ ಯ 15ನೇ ವಾರ್ಷಿಕೋತ್ಸವ ಸಮಾರಂಭವು ಮಾ. 15 ರಂದು ಶನಿವಾರ ಸಂಜೆ 5 ಗಂಟೆಯಿಂದ ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, (ಅದಾನಿ ಇಲಿಕ್ಟ್ರಿಸಿಟಿ ಎದುರು) ಬೋರಿವಲಿ (ಪ.) ಮುಂಬಯಿ ಇಲ್ಲಿ ಸಂಘದ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ರ ಉಪಸ್ಥಿತಿಯಲ್ಲಿ ಜರಗಲಿದೆ.
ಮುಖ್ಯ ಅತಿಥಿಯಾಗಿ ಉದ್ಯಮಿ, ಬಂಟರ ಸಂಘ ಮುಂಬಯಿ ಬೊರಿವಲಿ ಶಿಕ್ಷಣ ಸಂಸ್ಥೆಯ ಉಪ ಕಾರ್ಯಾಧ್ಯಕ್ಷರಾದ ನಿತ್ಯಾನಂದ ಹೆಗ್ಡೆ ನಡಿಬೆಟ್ಟು ಆಗಮಿಸಲಿದ್ದು ಸಮಾರಂಭದ ಗೌರವ ಅಥಿತಿಗಳಾಗಿ ಉತ್ತರ ಮುಂಬಯಿಯ ಮಾಜಿ ಸಂಸದ ಗೋಪಾಲ್ ಸಿ. ಶೆಟ್ಟಿ, ಮೋಡಲ್ ಕೋ ಅಪರೇಟಿವ್ ಬ್ಯಾಂಕಿನ ಕಾರ್ಯಾಧ್ಯಕ್ಷ ಅಲ್ಪರ್ಟ್ ಡಬ್ಲ್ಯ್. ಡಿ.ಸೋಜಾ ಮತ್ತು ಓಂ ಜ್ಯುವೆಲ್ಲರಿಯ ಆಡಳಿತ ನಿರ್ದೇಶಕ ಮುಕೇಶ್ ಜಾಕಿಯಾ ಉಪಸ್ಥಿತರಿರುವರು.
ಸಂಘದ ಸ್ಥಾಪಕ ಅಧ್ಯಕ್ಷ ವಾಸು ಪುತ್ರನ್, ಪಯ್ಯಡೆ ಇಂಟರ್ನೇಷನಲ್ ಹೋಟೇಲ್ಸ್ ನ ನಿರ್ದೇಶಕ ಡಾ. ಪಿ. ವಿ. ಶೆಟ್ಟಿ ಮತ್ತು ಖ್ಯಾತ ಸಾಹಿತಿ, ಹೋಟೇಲು ಉದ್ಯಮಿ ಬಾಬು ಶಿವ ಪೂಜಾರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಮನೋರಂಜನೆಯ ಅಂಗವಾಗಿ ಕೊಡ್ಯಡ್ಕ ಕ್ರಿಯೇಷನ್ಸ್ ರವರ ಅಶೋಕ್ ಕುಮಾರ್ ಕೊಡ್ಯಡ್ಕ ನಿರ್ದೇಶನದ ರಾಜೇಶ್ ಆಚಾರ್ಯ ಪರ್ಕಳ ರಚಿಸಿದ “ಕುಸೆಲ್ದ ಅಜ್ಜಿ”, ತುಳು ನಾಟಕ, ಸಂಘದ ಮಹಿಳಾ ಸದಸ್ಯರಿಂದ, ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಬೇಕಾಗಿ ತುಳು ಸಂಘ ಬೊರಿವಲಿ ಪರವಾಗಿ ಉಪಾಧ್ಯಕ್ಷ ರಜಿತ್ ಸುವರ್ಣ,
ಗೌ. ಪ್ರ. ಕಾರ್ಯದರ್ಶಿಕೃಷ್ಣರಾಜ್ ಸುವರ್ಣ, ಗೌ. ಕೋಶಾಧಿಕಾರಿ ದಿವಾಕರ ಕರ್ಕೇರ , ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ., ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸವಿತ ಸಿ. ಶೆಟ್ಟಿ, ಚಂದ್ರಹಾಸ ಬೆಳ್ಚಡ, ಎಂ. ಜಿ. ಶೆಟ್ಟಿ, ಕಸ್ತೂರಿ ಎಸ್. ಶೆಟ್ಟಿ, ರಾಜೇಶ್ವರಿ ಜಿ. ಸುವರ್ಣ, ಜಯಂತಿ ಕೆ. ಶೆಟ್ಟಿ, ಸುಮತಿ ಸಾಲ್ಯಾನ್, ವಿಜಯಕುಮಾರ್ ಮೂಲ್ಕಿ, ಕುಸುಮ ಬಿ. ಶೆಟ್ಟಿ, ಪೂರ್ಣಿಮಾ ಆರ್. ಪೂಜಾರಿ, ವೇದ ಶೆಟ್ಟಿ, ಅಶೋಕ್ ಪೂಜಾರಿ, ಲಕ್ಷ್ಮಿ ದೇವಾಡಿಗ, ಜಯರಾಮ್ ಶೆಟ್ಟಿ, ಸರಸ್ವತಿ ರಾವ್, ಸುನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ವಿಶೇಷ ಆಮಂತ್ರಿತರಾದ ಈಶ್ವರ್ ಎಂ. ಐಲ್, ಯಶವಂತ್ ಪೂಜಾರಿ, ಬಾಲಕೃಷ್ಣ ಬಂಗೇರ, ವತ್ಸಲ ಪೂಜಾರಿ, ನಿತ್ಯಾನಂದ ಶೆಟ್ಟಿ , ಪ್ರಿಯ ಲಕ್ಷ್ಮಿ ಡಿ. ಉಪ್ಪೂರು ಮತ್ತು ವಸುದಾ ಪೈ ಸಂಘದ ಸಲಹೆಗಾರರಾದ ವಾಸು ಕೆ. ಪುತ್ರನ್, ಪ್ರಕಾಶ್ ಶೆಟ್ಟಿ ಪೇಟೆಮನೆ, ಶ್ರೀನಿವಾಸ ಸಾಫಲ್ಯ, ಪ್ರದೀಪ್ ಶೆಟ್ಟಿ, ಕರುಣಾಕರ ಶೆಟ್ಟಿ ಮತ್ತು ಮುಂಡಪ್ಪ ಪಯ್ಯಡೆ ಮತ್ತು ಉಪಸಮಿತಿಗಳ ಎಲ್ಲಾ ಸದಸ್ಯರುಗಳು ವಿನಂತಿಸಿದ್ದಾರೆ.

Related posts

ಶ್ರೀ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ. ಸಾಧಕರಿಗೆ ಸನ್ಮಾನ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ : ಮಾ. 9ರಂದು 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ

Mumbai News Desk

ನವೆಂಬರ್ 26 ರಂದು ಚಿಣ್ಣರ ಬಿಂಬ  ಮುಂಬಯಿ ವತಿಯಿಂದ ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ  ಪ್ರತಿಭಾ ಸ್ಪರ್ಧೆ

Mumbai News Desk

ಡೊಂಬಿವಲಿ, ಠಾಕೂರ್ಲಿ, ಕೋಪರ್ ಪರಿಸರದ ತುಳು-ಕನ್ನಡಿಗರ ಸ್ನೇಹ ಸಮ್ಮಿಲನ.

Mumbai News Desk