
ಭಕ್ತರ ಸಹಕಾರದಿಂದ ಧಾರ್ಮಿಕ ಕಾರ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿದೆ: ದಿವಾಕರ್ ಜಿ ರೈ
ಡೊಂಬಿವಲಿ ಮಾ11. ಡೊಂಬಿವಲಿ ಪಶ್ಚಿಮ ಗೋಪಿನಾಥ್ ಚೌಕ್ ಬಳಿಯ ಯಕ್ಷ ಕಲಾ ಸಂಸ್ಥೆ ಸ್ಥಾಪಿಸಿ, ಜಗದಂಬಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕತ್ವದ ಶ್ರೀ ಜಗದಂಬಾ ಮಂದಿರದ, ಶ್ರೀ ಜಗದಂಬಾ ದೇವಿ ಹಾಗೂ ಪರಿವಾರ ದೇವರ 10ನೇ ವಾರ್ಷಿಕ ಮಹೋತ್ಸವವು ಮಾರ್ಚ್ 8 ರ ಶನಿವಾರ ಮತ್ತು 09 ರ ಆದಿತ್ಯವಾರ ಪುರೋಹಿತ ಸುಬ್ರಮಣ್ಯ ರಾವ್ ಇವರ ಸಾರಥ್ಯದಲ್ಲಿ ಹಾಗೂ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಜಗದೀಶ ಭಟ್ ಇವರ ನೇತೃತ್ವದಲ್ಲಿ ಭಕ್ತಿ ಶ್ರದ್ಧೆಯಿಂದ ಜರುಗಿತು.

ಶನಿವಾರ ಬೆಳಿಗ್ಗೆ ಮಂದಿರದ ಅಧ್ಯಕ್ಷರಾದ ದಿವಾಕರ್ ಜಿ ರೈ ಅವರ ಸಂಕಲ್ಪದಲ್ಲಿ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸ್ವಸ್ತಿ ಪುಣ್ಯಾಹವಾಚನ, ತೋರಣ ಮುಹೂರ್ತ ಗಣಪತಿ ಹೋಮ ನಡೆದು, ವಿಘ್ನೇಶ್ ಸುರೇಶ್ ದೇವಾಡಿಗ ದಂಪತಿಗಳ ಸಂಕಲ್ಪದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಮಧ್ಯಾಹ್ನ ಮಹಾಮಂಗಳಾರತಿ ನಡೆದು, ಪಲ್ಲಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ ಮಂಡಳಿಯ ಸದಸ್ಯರಾದ ಸುರೇಶ ಟಿ. ಅಂಚನ್‌ರವರ ಹಸ್ತದಿಂದ, ದಯಾನಂದ್ ಶೆಟ್ಟಿ ಪರಿವಾರದವರ ಸಂಕಲ್ಪದಲ್ಲಿ ಕಲಶ ಪ್ರತಿಷ್ಠಾಪನೆ ನಡೆದು ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ಮೊದಲಿಗೆ ವಾಚನ ರೂಪದಲ್ಲಿ ಶನಿಗ್ರಂಥ ಪಾರಾಯಣ ನಡೆಯಿತು. ನಂತರ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಗ್ರಂಥ ಪಾರಾಯಣ ಮುಂದುವರಿಯಿತು.

ನಗರದ ಪ್ರಸಿದ್ಧ ವಾಚಕರು, ಅರ್ಥದಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಪರಾಯಣದಲ್ಲಿ ಪಾಲು ಪಡೆದರು. ವಾಚಕರುಗಳಾಗಿ ಲಕ್ಷ್ಮಣ್ ಚಿತ್ರಾಪು, ವಾಸು ಸಾಲ್ಯಾನ್, ವಾಸು ಮೊಗವೀರ, ಸುರೇಶ ಶೆಟ್ಟಿ ಶೃಂಗೇರಿ, ಪ್ರಕಾಶ್ ಭಂಡಾರಿ, ಚಂದ್ರಹಾಸ್ ರೈ, ಅಶೋಕ್ ಪುತ್ರನ್, ರಾಜೇಶ್ ಸಿ ಕೋಟ್ಯಾನ್, ಅರ್ಥದಾರಿಗಳಾಗಿ ಸುರೇಶ ಅಂಚನ್, ಭಾಸ್ಕರ್ ಅಮೀನ್, ಚಂದ್ರಶೇಖರ್ ಅಮೀನ್, ರತ್ನಾಕರ್ ಬಂಗೇರ, ಅಶೋಕ್ ದಾಸು ಶೆಟ್ಟಿ, ಸೋಮನಾಥ್ ಪೂಜಾರಿ, ಶೇಖರ್ ಮೆಂಡನ್, ಉದಯಾನಂದ ಕರುಣಾಕರ್, ಜೆ ಜೆ ಕೋಟ್ಯಾನ್, ನಾಗೇಶ್ ಸುವರ್ಣ, ಎಂ ಎಸ್ ಕೋಟ್ಯಾನ್, ಕಿಶೋರ್ ಸಾಲ್ಯಾನ್. ಭಾಗವತರುಗಳಾಗಿ ಜಗದೀಶ್ ನಿಟ್ಟೆ, ಮೋಹನದಾಸ್ ರೈ, ಚೆಂಡೆಯಲ್ಲಿ ಪ್ರವೀಣ್ ಶೆಟ್ಟಿ, ಮೃದಂಗದಲ್ಲಿ ಚಂದ್ರಹಾಸ್ ರೈ, ಹರೀಶ್ ಸಾಲ್ಯಾನ್, ವರುಣ್ ಪೂಜಾರಿ ಚಕ್ರದಲ್ಲಿ ಹರ್ಷಿತ್ ಜಗದೀಶ್ ನಿಟ್ಟೆ ಸಹಕರಿಸಿದರು. ಶನೀಶ್ವರ ದೇವರಿಗೆ ಮಹಾ ಮಂಗಳಾರತಿ ನಡೆಯಿತು. ಸುರೇಶ ಟಿ. ಅಂಚನ್ ಪೂಜೆ ನೆರವೇರಿಸಿದರೆ, ಕಿಶೋರ್ ಸಾಲ್ಯಾನ್, ಲಕ್ಷ್ಮಣ್ ಚಿತ್ರಫು, ಸುರೇಶ್ ಕರ್ಕೇರ ಶನಿಪೂಜೆಗೆ ಸಹಕರಿಸಿದರು.

ಸಾಯಂಕಾಲ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, ನಡೆದು ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಿತು.
ಮಾರ್ಚ್ 9 ರವಿವಾರ, ಬೆಳಿಗ್ಗೆ ಶ್ರೀದೇವಿ ಸನ್ನಿಧಿಯಲ್ಲಿ 25 ಕಲಶದ ಕಲಶಾರಾಧನೆ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವರಿಗೆ ನವಕಕಲಶ ಹಾಗೂ ಕಲಶಾಭಿಷೇಕ ನಡೆಯಿತು.
ಬಳಿಕ ಶ್ರೀ ದೇವಿಯ ಬಲಿ ಮೂರ್ತಿಯ ಭವ್ಯ ಮೆರವಣಿಗೆಯು ಶ್ರೀ ಜಗದಂಬಾ ಮಂದಿರದಿಂದ ಗೋಪಿನಾಥ ಚೌಕಿನ ಹರಿ ಹರೇಶ್ವರ ಮಂದಿರದವರೆಗೆ ನಡೆಯಿತು.ತದನಂತರ ಉತ್ಸವ ಬಲಿ, ಕಟ್ಟೆಪೂಜೆ ಜರಗಿತು,ನಾದಸ್ವರ ದಲ್ಲಿ ದಿನೇಶ್ ಕೋಟ್ಯಾನ್, ಹಾಗೋ ಚೆಂಡೆ ಯಲ್ಲಿ ಅಶೋಕ್ ದೇವಾಡಿಗ ಬಳಗ ಸಹಕರಿಸಿದರು, ಶ್ರೀ ಜಗದಂಬಾ ದೇವಿಗೆ ಮಹಾಮಂಗಳಾರತಿ ಬೆಳಗಿ, ಪ್ರಸಾದ ವಿತರಣೆ, ಪಲ್ಲಪೂಜೆ, ನಡೆದು ಸತೀಶ್ ಶೆಟ್ಟಿ ಅಜೇಕಾರ್ ಮತ್ತು ಕುಟುಂಬಸ್ತರಿಂದ ಸೇವಾ ರೂಪದಲ್ಲಿ ಅನ್ನ ಸಂತರ್ಪಣೆ ಜರುಗಿತು. ಸಾಯಂಕಾಲ ಕುಂಕುಮಾರ್ಚನೆ, ಮಹಾಪೂಜೆ ನಡೆದು ರಂಗಪೂಜೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ, ನೃತ್ಯ ಹಾಗೋ ಜಗದಂಬಾ ಮಂದಿರದ ಸದಸ್ಯರಿಂದ ಧನಂಜಯ ಮೂಳೂರು ನಿರ್ದೇಶನದ ಅರುಣ ಚಂದ್ರ, ಬಿ. ಸಿ. ರೋಡ್ ವಿರಚಿತ “ಎನ್ನ ಬುಡೆದಿ” ತುಳು ನಾಟಕ ಪ್ರದರ್ಶನ ಗೊಂಡಿತು. ಈ ಸಂದರ್ಭದಲ್ಲಿ ನಿರ್ದೇಶಕ ಧನಂಜಯ ಮೂಳೂರು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಅಧ್ಯಕ್ಷ ದಿವಾಕರ ಜಿ. ರೈ ಮಾತನಾಡಿ ಕ್ಷೇತ್ರ ಬರುವ ಭಕ್ತರ ಇಷ್ಟಾರ್ಥಗಳನ್ನು ದೇವಿ ಅನುಗ್ರಹಿಸುತ್ತಿದ್ದಾಳೆ ಆದ್ದರಿಂದ ದಿನದಿಂದ ದಿನಕ್ಕೆ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಈ ವರ್ಷ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗುವಳು ಭಕ್ತರು ಮತ್ತು ದಾನಿಗಳು ಸಹಕಾರ ನೀಡಿದ್ದಾರೆ, ಸಂಸ್ಥೆಯ ಪದಾಧಿಕಾರಿಗಳು ಮಹಿಳಾ ಸದಸ್ಯರು ಅಪಾರವಾದ ಶ್ರಮವಹಿಸಿದ್ದಾರೆ ಎಂದು ನುಡಿದರು,
ಎರಡೂ ದಿನದ ಈ ದಶಮಾನೋತ್ಸವ ಸಂಭ್ರಮದಲ್ಲಿ ನೂರಾರು ಭಕ್ತರು ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದಾನ ದೇವರಾದ ಜಗದಂಬಾ ದೇವಿ ಹಾಗೂ ಕಲಿಯುಗ ಒಡೆಯ ಶ್ರೀ ಶನೀಶ್ವರ, ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ನಾಗದೇವರ ದರ್ಶನ ಪಡೆದು ಸಾನಿಧ್ಯ ದೇವರುಗಳ ಶ್ರೀಗಂಧ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.
ಯಕ್ಷ ಕಲಾ ಸಂಸ್ಥೆಯ ಗೌರವಾಧ್ಯಕ್ಷ ಹರೀಶ್ ಡಿ. ಶೆಟ್ಟಿ, ಅಧ್ಯಕ್ಷ ದಿವಾಕರ ಜಿ. ರೈ, ಉಪಾಧ್ಯಕ್ಷ ರವೀಂದ್ರ ವೈ ಶೆಟ್ಟಿ, ಗೌ.ಪ್ರ. ಕಾರ್ಯದರ್ಶಿ ರಾಜೇಶ ಸಿ. ಕೋಟ್ಯಾನ್, ಕೋಶಾಧಿಕಾರಿ ಸಂತೋಷ ಎಮ್. ಶೆಟ್ಟಿ, ಜೊತೆ ಕಾರ್ಯದರ್ಶಿ ಸಚಿನ್ ಎಸ್. ಪೂಜಾರಿ, ಸಾಂಸ್ಕೃತಿಕ ವಿಭಾಗದ ವಿಜಯ್ ಶೆಟ್ಟಿ ಸಜೀಪಗುತ್ತು, ಹಾಗೂ ಕಾರ್ಯಕಾರಿ ಸಮಿತಿ, ಶನಿಪೂಜೆ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಎಲ್ಲಾ ಸದಸ್ಯರ ಸಹಕಾರ ದಿನದ ಮಂದಿರದ ದಶಮಾನೋತ್ಸವ ದೇವತಾ ಕಾರ್ಯಗಳು ಶ್ರದ್ಧೆ ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.