30.9 C
Mumbai
June 8, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ.





ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ದೇವರ ತತ್ವದಡಿಯಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ದಿನಾಂಕ 06.07.2025 ರಂದು ಆದಿತ್ಯವಾರ ಸಂಜೆ 4 ಘಂಟೆಗೆ ಸರಿಯಾಗಿ ಸಂಘದ ಕಚೇರಿಯಲ್ಲಿ ನಡೆಯಿತು.
ಪ್ರಾರಂಭದಲ್ಲಿ ಅರ್ಚಕರಾದ ಅನ್ನು ಪೂಜಾರಿಯವರಿಂದ ಗುರು ಪೂಜೆ ನೆರವೇರಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರು ವಹಿಸಿದರು. ಮುಖ್ಯ ಅಥಿತಿಗಳಾಗಿ ಗಂಗಾಧರ ಎಸ್ ಪೂಜಾರಿ (CA ) ರವಿ ಎಸ್ ಪೂಜಾರಿ ( ಮಾಲಕರು ಹೋಟೆಲ್ ವರ್ಷಾ ಠಾಕೂರ್ಲೀ) ರಾಘವೇಂದ್ರ ಕಾಪು ( ಸಮಾಜ ಸೇವಕರು) ಡಾಕ್ಟರ್ ಮೊಯಿತ್ ಶಶಿಧರ್ ಸುವರ್ಣ ಮತ್ತು ಶ್ರೀಮತಿ ಗಿರಿಜಾ ಸಂಜೀವ ಪಾಲನ್ ಹಾಗೂ ಧಾನಿಗಳಾದ ರಾಮಚಂದ್ರ ಬಂಗೇರ, ಶರತ್ ಬಂಗೇರ ಉಪಸ್ಥಿತರಿದ್ದರು . ಮಾತ್ರವಲ್ಲದೆ ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಉಪಾಧ್ಯಕ್ಷರಾದ ಪುರುಷೋತ್ತಮ ಎಸ್ ಕೋಟ್ಯಾನ್, ಕೋಶಾಧಿಕಾರಿ ರವಿ ಎಸ್ ಸನಿಲ್, ವಿದ್ಯಾ ಸಮಿತಿಯ ಕಾರ್ಯದರ್ಶಿ ಹರೀಶ್ ಪೂಜಾರಿ ಕೊಕರ್ಣೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿ ಸಹಕರಿಸಿದ
ಎಲ್ಲಾ ಧಾನಿಗಳನ್ನು , ಯುವ ವಿಭಾಗದ ಎಲ್ಲಾ ಸದಸ್ಯರನ್ನು , ಮತ್ತು ಬಿಜೆಪಿ ನೇತಾರ ರವೀಂದ್ರ ಚೌಹಾಣ್ ಇವರು ಕೊಡ ಮಾಡಿದ ನೋಟ್ ಬುಕ್ ಸಂಘಕ್ಕೆ ತಂದು ಧಾನ ಮಾಡಿದ ಸಮಿತಿಯ ಸದಸ್ಯರಾದ ರತನ್ ಪೂಜಾರಿಯವರನ್ನು ಅಧ್ಯಕ್ಷರು ಮತ್ತು ಅತಿಥಿಗಳು ಗೌರವಿಸಿದರು.
ಮುಖ್ಯ ಅಥಿತಿಯಾದ ಗಂಗಾಧರ ಪೂಜಾರಿ ಮಾತನಾಡುತ್ತಾ ತಾನು ಪರಿಶ್ರಮ ಪಟ್ಟು ಕಲಿತ ವಿದ್ಯೆಯ ಮಹತ್ವ ಮತ್ತು ವಿದ್ಯೆಯು ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಪ್ರಾಮುಕ್ಯತೆ ಪಡೆಯುತ್ತದೆ ಎಂಬುದನ್ನು ವಿದ್ಯಾರ್ಥಿಯರಿಗೆ ಮನದಟ್ಟು ಮಾಡಿದರು. ನೀವು ವಿದ್ಯಾವಂತರಾಗಿ
ಈ ಸಂಸ್ಥೆಯ ಋಣವನ್ನು ತೀರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅತಿಥಿಯಾಗಿ ಬಂದ ರವಿ ಎಸ್ ಪೂಜಾರಿ, ರವಿ ಸನಿಲ್ , ಹರೀಶ್ ಪೂಜಾರಿ ಕೊಕರ್ಣೆ, ರಾಮಚಂದ್ರ ಬಂಗೇರ, ಶ್ರೀಮತಿ ಚೇತನಾ ಕೋಟ್ಯಾನ್, ಮತ್ತು ಉಪಾಧ್ಯಕರಾದ ಚಂದ್ರಹಾಸ ಎಸ್ ಪಾಲನ್ ಸಂದರ್ಭೋಚಿತ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ
ವಿದ್ಯಾರ್ಥಿಗಳು ಸಂಘದ ಎಲ್ಲಾ ನೆರವನ್ನು ಪಡೆದು ಉತ್ತಮ ವಿದ್ಯಾರ್ಥಿಯಾಗಿ ಮತ್ತು ತಂದೆ ತಾಯಿಯಂದಿರಿಗೆ ಉತ್ತಮ ಮಕ್ಕಳಾಗಿ , ಗೌರವ ನೀಡಿ ಬಾಳಬೇಕು ಎಂದು ಹಿತವಚನ ನೀಡಿದರು.
ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಂಘದ ಹಿತಚಿಂತಕರಾದ ಸಚಿನ್ ಜಿ ಪೂಜಾರಿ, ಪುರಂದರ ಪೂಜಾರಿ, ವಿಠಲ್ ಪಿ ಅಮೀನ್, ಜಗನ್ನಾಥ ಸನಿಲ್, ಮಂಜಪ್ಪ ಪೂಜಾರಿ, ದೇವದಾಸ್ ಗುಜರನ್, ಆನಂದ್ ಪೂಜಾರಿ, ಕೃಷ್ಣ ಎಲ್ ಪೂಜಾರಿ, ರಾಜೇಶ್ ಕೋಟ್ಯಾನ್, ಈಶ್ವರ್ ಕೋಟ್ಯಾನ್, ಅನ್ನು ಪೂಜಾರಿ, ರತನ್ ಪೂಜಾರಿ, ಗಣೇಶ್ ಪೂಜಾರಿ, ದೇವರಾಜ್ ಪೂಜಾರಿ, ರಾಜೇಶ್ ಸಿ ಕೋಟ್ಯಾನ್, ಮಹಿಳಾ ವಿಭಾಗ, ವಿಶೇಷ ಆಮಂತ್ರಿತರು, ಮತ್ತು ಯುವ ವಿಭಾಗದವರು ಸಹಕರಿಸಿದರು.
ಗೌ.ಕಾರ್ಯದರ್ಶಿ ಜೆ ಜೆ ಕೋಟ್ಯಾನ್ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಕೋಶಾಧಿಕಾರಿ ಆನಂದ ಪೂಜಾರಿಯವರು ಧನ್ಯವಾದ ನೀಡಿದರು.



Related posts

ಕುಲಾಲ ಸಂಘ ಮುಂಬಯಿಯ ನವಯುಗ: ಮಂಗಳೂರಿನಲ್ಲಿ ಭವನ ಲೋಕಾರ್ಪಣೆಗೆ ದಿನಾಂಕ ನಿಗದಿ

Mumbai News Desk

ಡೊಂಬಿವಿಲಿಯ ಶ್ರೀಮಹಾವಿಷ್ಣು ಮಂದಿರದಲ್ಲಿ “ದಶಾವತಾರ ” ಹರಿನಾಮವಳಿ – ಶುಭ ಚಿಂತನ ” ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಶನ್ , ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ : 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್, ಮುಂಬಯಿ : ವಾರ್ಷಿಕ ವಿಹಾರಕೂಟ

Mumbai News Desk

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ ಸಾಧಕರಿಗೆ ಸನ್ಮಾನ, ನೃತ್ಯ ವೈಭವ, ನಾಟಕ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮತ್ತು ಹರಿನಾರಾಯಣ ಅಸ್ರಣ್ಣರಿಗೆ ಗೌರವಾರ್ಪಣೆ

Mumbai News Desk