
ಸಮಾಜದಲ್ಲಿ ಮಹಿಳೆಯ ಸ್ಥಾನ ಶ್ರೇಷ್ಠವಾದುದು- ಅಮೃತಾ ಶೆಟ್ಟಿ
ಚಿತ್ರ ವರದಿ : ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ ಮಾ.10: ಯಾವುದಕ್ಕೂ ಬಾಗದ ಹೃದಯ ಪ್ರೀತಿಗೆ ಬಾಗುತ್ತದೆ ಜಾಗತಿಕ ಮಹಿಳಾ ದಿನಾಚರಣೆಗೆ ಡೊಂಬಿವಲಿ ಪರಿಸರದಲ್ಲಿ ಸೇರಿದ ಕನ್ನಡದ ಅಭಿಮಾನಿಗಳನ್ನು ಕಂಡು ಸಂತೋಷವಾಗುತ್ತಿದೆ. ಮಹಿಳೆಯರ ಸಮಾನತೆ, ಸಬಲಿಕರಣಕ್ಕಾಗಿ ಅಚರಿಸಲಾಗುತ್ತದೆ. ವೇದ, ಪುರಾಣದ ದೇಶದಲ್ಲಿ ಹುಟ್ಟಿದ ಮಹಿಳೆ ಇಂದು ಯಾವ ಸಾಧನೆ ಮಾಡುತ್ತಿದ್ದಾಳೆ ? ಇಂದಿನ ದಿನಗಳಲ್ಲಿ ಅತ್ತೆ ಮಾವನನ್ನು ನಾನು ನೋಡಲಾರೆ ಎಂಬ ಮಟ್ಟಿಗೆ ಬೆಳೆದ ಮಹಳೆಯರ ಸಾಧನೆಯೇ ? ಮಹಿಳೆ ತಾನು ಮಹಿಳೆಯಾಗಿ ಬದುಕಲು ಮೊದಲು ಕಲಿತಲ್ಲಿ ಸಂಸಾರ ಎರಡು ಚಕ್ರದ ಗಾಡಿಯಂತೆ ನಡೆಯಲು ಸಾಧ್ಯ, ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ನಾವು ದುರುಪಯೋಗ ಮಾಡಬಾರದು. ವಿದ್ಯೆ ವಿನಯವನ್ನು ಕಲಿಸುತ್ತದೆ ನಮಗೆ ಕೊಟ್ಟ ಸಮಾನತೆಯಿಂದ ನಮ್ಮವರನ್ನು ಒಗ್ಗೂಡಿಸುವ ಕೆಲಸ ಮಾಡ ಬೇಕು, ನಮ್ಮ ಅತ್ತೆ ಮಾವಂದಿರನ್ನು ತಂದೆ- ತಾಯಿಯಂತೆ ನೋಡಿದಾಗ ಮಹಿಳೆ ಸಣ್ಣವರಾಗುವುದಿಲ್ಲ, ಮಹಿಳೆ ಅಹಂಕಾರಿಯಾಗ ಬಾರದು ಮಹಿಳೆ ಮಹಿಳೆಯಾಗಿ ಬಾಳಬೇಕು, ಸೃಷ್ಟಿಯಲ್ಲಿ ಮಹಿಳೆಯರ ಸ್ಥಾನ ಶ್ರೇಷ್ಠವಾಗಿದೆ, ಇಂದು ಮಹಿಳೆಯರು ತಮಗೆ ಸಿಕ್ಕ ಸ್ವಾತಂತ್ರ್ಯವನ್ನು ಕಳೆದು ಕೊಳ್ಳುತ್ತಿದ್ದಾಳೆ ಒಬ್ಬ ಮಹಿಳೆಯಾಗಿ ಮಹಿಳೆಯರ ರಕ್ಷಣೆಗಾಗಿ ನಮ್ಮ ಸ್ವಾತಂತ್ರ್ಯವನ್ನು ಬಳಸೋಣ, ಸಮಾಜದಲ್ಲಿ ಮಹಿಳೆಯ ಸ್ಥಾನ ಸರ್ವ ಶ್ರೇಷ್ಠವಾಗಿದ್ದು
ಮಹಿಳೆಯರಲ್ಲಿ ತಾನು ಮಹಿಳೆ ಎಂಬ ಭಾವನೆ ಬಂದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ, ಯಶಸ್ಸು ಪಡೆಯಲು ಸಾಧ್ಯ ಇಂದು ದಾಂಪತ್ಯದ ಸಣ್ಣ ಸಣ್ಣ ವಿಷಯ ಗಳಿಗೆ ವಿಚ್ಚೇದನ ಪಡೆಯುವ ನಾವು ಎತ್ತ ಸಾಗುತ್ತಿದ್ದೇವೆ ಎಂದು ಖ್ಯಾತ ವಾಗ್ಮಿ ಕನ್ನಡ ಭವನ ಸೊಸೈಟಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಪ್ರಾನ್ಸುಪಾಲೆ ಅಮೃತಾ ರ. ಶೆಟ್ಟಿ ನುಡಿದರು.
ಅವರು ಮಾ 9 ರ ಭಾನುವಾರ ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಸಂಘ ಡೊಂಬಿವಲಿ ಇದರ ಮಹಿಳಾ ವಿಭಾಗದ ವತಿಯಿಂದ ಜರಗಿದ ಜಾಗತಿಕ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಶಾ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಡೊಂಬಿವಲಿ ಪರಿಸರದ ಕನ್ನಡಿಗರನ್ನು ಒಗ್ಗೂಡಿಸಲು ಸ್ಥಾಪಿಸಿದ ನಮ್ಮ ಹೆಮ್ಮೆಯ ಸಂಸ್ಥೆ ಕರ್ನಾಟಕ ಸಂಘ ಡೊಂಬಿವಲಿ ನಾವು ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಕಲಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಮಹಿಳೆ ಸೃಷ್ಟಿಕರ್ತೆ, ಸಹೋದರಿಯಾಗಿ, ಮಡದಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಹಗಲಿರುಳು ದುಡಿದು ಜೀವನ ಸಾಗಿಸಿದವರು ಪ್ತೀತಿ, ತ್ಯಾಗದ ಸಂಕೇತವಾಗಿ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಅಚರಿಸುತ್ತಿದ್ದೇವೆ ಎಂದರು.
ಅತಿಥಿ ಡಾ. ರಶ್ಮಾ ಶೆಟ್ಟಿ ಮಾತನಾಡುತ್ತಾ ಮಗಳ ಸಾಧನೆಗೆ ತಂದೆ- ತಾಯಿಯ ಸ್ಪೂರ್ತಿ ಸಾಮಾನ್ಯ ಅದರೆ ಮದುವೆಯ ನಂತರ ನನ್ನನ್ನು ವೇದಿಕೆಗೆ ಕರೆ ತಂದವರು ನನ್ನ ಅತ್ತೆ ಮತ್ತು ಮಾವ ಹಾಗೂ ಪತಿ ಇವರ ಸ್ಪೂರ್ತಿ ಪರಸ್ಪರ ಸಹಕಾರ ನನ್ನನ್ನು ಎತ್ತರಕ್ಕೆ ಬೆಳೆಸಿದೆ ಪ್ರತಿಯೊಬ್ಬ ಮಹಿಳೆ ತನ್ನ ತಂದೆ- ತಾಯಿಗೆ ನೀಡುವ ಪ್ರೀತಿ ಅತ್ತೆ- ಮಾವನಿಗೂ ನೀಡಿದರೆ ಕುಟುಂಬ ಎಂದೂ ಒಡೆಯದು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘದ ಸದಸ್ಯರು ದಾಂಪತ್ಯ ಜೀವನದ ಸುವರ್ಣ ಮಹೋತ್ಸವವನ್ನು ಅಚರಿಸಿದ ಹಿರಿಯ ನಾಗರಿಕರಾದ ರತ್ನಾಕರ ಅಧಿಕಾರಿ ಮತ್ತು ಶ್ರೀದೇವಿ ಅರ್. ಅಧಿಕಾರಿ ದಂಪತಿಯನ್ನು ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ವೇದಿಕೆಯ ಮೇಲೆ ಸನ್ಮಾನಿಸಲಾಯಿತು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಶಾ ಎಲ್. ಶೆಟ್ಟಿ, ಯೋಗಿನಿ ಶೆಟ್ಟಿ, ಮಾಧುರೀಕಾ ಬಂಗೇರ ಇವರನ್ನು ವಿಶೇಷವಾಗಿ ಸತ್ಕರಿಸಲಾಯಿತು ಹಾಗೂ ಜಯಂತಿ ಶೆಟ್ಟಿ, ಯೋಗಿನಿ ಶೆಟ್ಟಿ ಮತ್ತು ದೇವಿಕಾ ಸಾಲ್ಯಾನ್ ಅತಿಥಿ ಗಣ್ಯರನ್ನು ಪರಿಚಯಿಸಿದರು
ಮಾಜಿ ಅಧ್ಯಕ್ಷರಾದ ವಿಠಲ ಎ. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಅನಂದ ಡಿ. ಶೆಟ್ಟಿ ಎಕ್ಕಾರ್, ರಮೇಶ್ ಎ. ಶೆಟ್ಟಿ, ನ್ಯಾ. ರಾಮಣ್ಣ ಭಂಡಾರಿ, ಚಂದ್ರ ನಾಯ್ಕ್, ಸುಷ್ಮಾ ಡಿ. ಶೆಟ್ಟಿ, ಜಯಂತಿ ಶೆಟ್ಟಿ, ದೇವಿಕಾ ಸಾಲ್ಯಾನ್, ಸರೋಜ ರೈ, ದೀಪಾ ಪ್ರಭು, ಸುನೀತಾ ಶೆಟ್ಟಿ ಪತ್ರಕರ್ತ ಗುರುರಾಜ ಪೋತನಿಸ ಇವರನ್ನು ಪುಷ್ಪಗೌರವನೀಡಿ ಸತ್ಕರಿಸಿದರು.
ದೀಪಾ ಪ್ರಭು ಮತ್ತು ಸುನೀತಾ ಶೆಟ್ಟಿಯವರ ಪ್ರಾರ್ಥನೆ ಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ವೇದಿಕೆಯಲ್ಲಿ ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಪ್ರಿನ್ಸಿಪಲ್ ಅಮೃತ ಎ. ಶೆಟ್ಟಿ, ಡಾ ರಶ್ಮ ಎಂ. ಶೆಟ್ಟಿ, ಲೋಕನಾಥ್ ಶೆಟ್ಟಿ, ದೇವದಾಸ್ ಕುಲಾಲ್, ಅಜಿತ್ ಉಮ್ರಾಣಿ, ಅಶಾ ಶೆಟ್ಟಿ, ವಿಮಲ ವಿ. ಶೆಟ್ಟಿ, ಯೋಗಿನಿ ಎಸ್. ಶೆಟ್ಟಿ, ಸರೋಜ ರೈ, ಮಾಧುರೀಕಾ ಬಂಗೇರ, ಜಯಂತಿ ಶೆಟ್ಟಿ, ದೇವಿಕಾ ಸಾಲ್ಯಾನ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಸುಷ್ಮಾ ಡಿ. ಶೆಟ್ಟಿ ನಿರೂಪಿಸಿದರೆ ಸಭಾ ಕಾರ್ಯಕ್ರಮವನ್ನು ಮಾಧುರೀಕಾ ಬಂಗೇರ ನಿರೂಪಿಸಿ ಸರೋಜ ರೈ ವಂದಿಸಿದರು
ನಾವು ಇಂದಿನ ಜೀವನ ಶೈಲಿಯಲ್ಲಿ ಮಾಡುವ ತಪ್ಪಿನಿಂದಾಗಿ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಸರಿಯಾಗದೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ರೋಗಗಳು ಉದ್ಭವವಾಗುತ್ತದೆ ದೇಹಕ್ಕೆ ಒಂದಯ ಗಂಟೆ ವ್ಯಾಯಮ, ಯೋಗ, ನಿಯಮಿತ ಅಹಾರ, ಕಡಿಮೆ ಪಕ್ಷ ದಿನಕ್ಕೆ 3 ಲೀಟರ್ ನೀರು, ಅರೋಗ್ಯಕರ ಅಹಾರ, ಸರಿಯಾಗಿ ನಿದ್ರೆ ಮಾಡಿದಾಗ ರೋಗಗಳು ತನ್ನಿಂದ ತಾನಾಗಿಯೇ ಕಡಿಮೆಯಾಗುತ್ತದೆ. ತರಕಾರಿ, ಹಣ್ಣು ಹಂಪಲು, ಖಾರ ರಹಿತ ಆಹಾರ, ಬೆಳಗಿನ ತಿಂಡಿಯನ್ನು ಹೊಟ್ಟೆ ತುಂಬುವಷ್ಟು ಸೇವಿಸಿ ಮಧ್ಯಾಹ್ನದ ಅಹಾರದಲ್ಲಿ ಸಲಾದ್ ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ ನಾರಿನ ಅಂಶವಿರುವ ಹಣ್ಣು, ರಾತ್ರಿ 7-8 ಗಂಟೆಗೆ ಊಟ ಮುಗಿಸಿ 10 ಗಂಟೆಯ ವರೆಗೆ ನಿದ್ರಿಸಿದಾಗ ತಮ್ಮ ರೋಗಗಳು ಯಾವುದೇ ಗುಳಿಗೆಗಳನ್ನು ತಿನ್ನದೆ ತನ್ನಿಂದ ತಾನಾಗಿಯೇ ಕಡಿಮೆಯಾಗುತ್ತದೆ,ನಮ್ಮ ರೋಗದ ಕಾರಣ ನಾವೇ ಹುಡುಕಿಕೊಳ್ಳ ಬೇಕು ಇಂದಿನ ದಿನಗಳಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಪಿ.ಸಿ.ಒ.ಡಿ ಅಥವಾ ಥೈರಾಯ್ಡ್ ಸಮಸ್ಯೆ ಯಿಂದ ಬಳಲುತ್ತಿದ್ದಾರೆ ಅದಕ್ಕೆ ಹೆಚ್ಚಿನ ಗುಳಿಗೆ ಗಳನ್ನು ತೆಗೆದುಕೊಳ್ಳುವ ಬದಲು ಜೀವನ ಶೈಲಿಯನ್ನು ಬದಲಿಸಿ ಹೊರಗಿನ ಆಹಾರ ಕಡಿಮೆಮಾಡಿ ರೋಗಕ್ಕೆ ಬೇಕಾದ ಗುಳಿಗೆಯನ್ನು ಪಡೆದಾಗ ರೋಗ ಗುಣಮುಖವಾಗುತ್ತದೆ. ನಮ್ಮ ಮನೆಯ ವಾತಾವರಣವನ್ನು ನಗು ಮುಖದತ್ತ ಬದಲಿಸಿದಾಗ ಹಲವಾರು ರೋಗಗಳು ಮಾಯವಾಗುತ್ತದೆ—( ಡಾ. ರಶ್ಮಾ ಮೋಹಿತ್ ಶೆಟ್ಟಿ )
ಸಮಾರಂಭದ ಅಧ್ಯಕ್ಷರ ಮಾತು:-
ಭಾರತ ದೇಶದಲ್ಲಿ ಸ್ರೀಯರಿಗೆ ವಿಶೇಷ ಸ್ಥಾನ ಮಾನವಿದೆ. ಡೊಂಬಿವಲಿ ಕರ್ನಾಟಕ ಸಂಘವೂ ಮಹಿಳೆಯರಿಗೆ ವಿಶೇಷ ಗೌರವನ್ನು ನೀಡುತ್ತಿದೆ.
ವಿಮಲಾ ವಿಠಲ ಶೆಟ್ಟಿ ಅವರ ಮುಂದಾಳುತ್ವದಲ್ಲಿ ಪ್ರಾರಂಭವಾದ ಮಹಿಳಾ ವಿಭಾಗ ಇಂದು ತನ್ನದೇ ಆದ ಕಾರ್ಯ ವೈಖರಿಯ ಮೂಲಕ ಪ್ರತಿಯೊಬ್ಬರ ಮನದಾಳದ ವರೆಗೂ ತಲುಪಿದ್ದು ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಕ್ರಮಗಳು ಇತರ ಸಂಘಟಣೆಗಳಿಗೆ ಮಾದರಿಯಾಗಿವೆ. ಮಹಿಳೆಯರ ಸಾಧನೆಯಲ್ಲಿ ಪುರುಷರ ಸಹಕಾರವೂ ಮುಖ್ಯವಾಗಿದೆ, ಪತಿ – ಪತ್ನಿ ಒಂದು ರಥದ ಎರಡು ಚಕ್ರವಿದ್ದಂತೆ ಪರಸ್ಪರ ಸಹಕಾರ ವಿದ್ದಲ್ಲಿ ಎರಡು ಚಕ್ರ ಸರಿಯಾಗಿ ನಡೆಯುತ್ತದೆ. ಮಹಿಳೆಯರು ತನ್ನ ಅತ್ತೆ- ಮಾವರನ್ನು ಹೆತ್ತ ತಂದೆ ತಾಯಿ ಯಂತೆ ಗೌರವಿಸುವದರ ಜೋತೆಗೆ ಅವರು ವೃದ್ಧಾಶ್ರಮದ ದಾರಿ ಹಿಡಿಯದಂತೆ ನೋಡಿಕೊಳ್ಳಬೇಕು, ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ಮಹಾವಿದ್ಯಾಲಯದಲ್ಲಿ ಅರ್ಟ್ಸ್ ಮತ್ತು ವಿಜ್ನಾನ ವಿಭಾಗ ಪ್ರಾರಂಭವಾಗಲಿದ್ದು ಇದರ ಲಾಭವನ್ನು ಕನ್ನಡಿಗರು ಪಡೆಯ ಬೇಕು :– ( ಸಮಾರಂಭದ ಅಧ್ಯಕ್ಷರು ಡಾ. ದಿವಾಕರ ಟಿ. ಶೆಟ್ಟಿ ಇಂದ್ರಾಳಿ , ಕಾರ್ಯಾಧ್ಯಕ್ಷರು ಕರ್ನಾಟಕ ಸಂಘ ಡೊಂಬಿವಲಿ )
-: ಸನ್ಮಾನಿತರ ಮಾತು :-
ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಸಂಘ ನಮ್ಮನ್ನು ಗುರುತಿಸಿ ಸನ್ಮಾನಿಸಿದಕ್ಕೆ ನಾವು ಚಿರ ಋಣಿ, ಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಿರಂತರ ನಡೆಯುತ್ತಿರಲಿ — ( ಶ್ರೀದೇವಿ ಅಧಿಕಾರಿ)