
ವಿಶ್ವಕ್ಕೆ ತಾಯಿಯ ಸಂಬಂಧವನ್ನು ತೋರಿಸಿಕೊಟ್ಟ ಮಗ ಪ್ರವೀಣ್ ಭೋಜ ಶೆಟ್ಟಿ: ಐಕಳ ಹರೀಶ್ ಶೆಟ್ಟಿ
ಚಿತ್ರ ವರದಿ ದಿನೇಶ್ ಕುಲಾಲ್
ಮುಲ್ಕಿ, ಮಾ 17 ಬಂಟರ ಸಂಘ ಮುಂಬಯಿಯ ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿಯವರ ಮಾತೃಶ್ರೀ, ಎಲ್ಲೂರು ಮಲ್ಲ ಬೆಟ್ಟು ಪರಾಡಿ ದಿ। ಭೋಜ ಶೆಟ್ಟಿಯವರ ಧರ್ಮ ಪತ್ನಿ ,ಯರ್ಲಪಾಡಿ ಚೆಂಡೆ ಬೈಲು ದಿ| ಗಿರಿಜ ಮಹಾಬಲ ಹೆಗ್ಡೆಯವರ ಪುತ್ರಿ ನಳಿನ ಭೋಜ ಶೆಟ್ಟಿ ಮಾರ್ಚ್ 5 ರಂದು ಮೂಲ್ಕಿಬಪ್ಪನಾಡು ರಾಷ್ಟೀಯ ಹೆದ್ದಾರಿಯ ಎದುರು, ವೆಂಕಟಗಿರಿ ರೆಸಿಡೆನ್ಸಿ, ಸ್ವರ್ಗಸ್ಥರಾಗಿದ್ದು ಈ ಬಗ್ಗೆ ಉತ್ತರ ಕ್ರಿಯೆ ಬಪ್ಪನಾಡು ಶ್ರೀ ದುರ್ಗಪರಮೇಶ್ವರಿಯ ಸನ್ನಿಧಾನದಲ್ಲಿರುವ ಜ್ಞಾನ ಮಂದಿರ ಸಭಾಗ್ರದಲ್ಲಿ ನಡೆಯಿತು,

ಅಪಾರ ಸಂಖ್ಯೆಯಲ್ಲಿ ಸೇರಿಕೊಂಡಿದ್ದ ನಳಿನ ಭೋಜ ಶೆಟ್ಟಿಯವರ ಬಂಧು, ಮಿತ್ರರು, ಹಿತೈಷಿಗಳು ವಿವಿಧ ಬಂಟ ಸಮಾಜದ ಗಳ ಬಂಧುಗಳು ಪುಷ್ಪ ನಮನವನ್ನು ಸಲ್ಲಿಸಿದರು,
ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ನಳಿನ ಭೋಜ ಶೆಟ್ಟಿಯವರು ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಬಳಿಕ ಮಾತನಾಡುತ್ತಾ ತಾಯಿಯೊಬ್ಬಳು ಮಕ್ಕಳಿಗೆ ಸಮಾಜದಲ್ಲಿ ಯಾವ ರೀತಿ ಬೆಳೆಯಬೇಕು ಸಮಾಜಕ್ಕೆ ತನ್ನಿಂದ ಏನನ್ನು ನೀಡಬೇಕು ಎನ್ನುವುದನ್ನು ಬಾಲ್ಯದಲ್ಲಿ ತಿಳಿಸಿಕೊಟ್ಟರೆ ಮುಂದೆ ಆ ಮಕ್ಕಳು ಸಮಾಜಕ್ಕೆ ಆದರ್ಶರಾಗಿ ಬೆಳೆಯಬಹುದು ಎನ್ನುವುದಕ್ಕೆ ನಳಿನ ಶೆಟ್ಟಿಯವರು ಮಗ ಪ್ರವೀಣ್ ಭೋಜ ಶೆಟ್ಟಿ ಸಾಕ್ಷಿಯಾಗಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬಂದಿರುವಂತ ಪ್ರವೀಣ್ ಬಿ ಶೆಟ್ಟಿ ಅವರು ಮುಂಬೈ ನಗರ ಅಲ್ಲದೆ ವಿದೇಶ ದಲ್ಲೂ ಕೂಡ ತನ್ನ ಸೇವಾ ಕಾರ್ಯಗಳ ಮೂಲಕ ಜನಪ್ರಿಯ ರಾಗಿದ್ದಾರೆ ಇದಕ್ಕೆ ತಾಯಿ ತಂದೆ ಮತ್ತು ಹಿರಿಯರ ಆಶೀರ್ವಾದ ಕಾರಣ. ಮುಂಬೈ ಬಂಟರ ಸಂಘದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಅಧ್ಯಕ್ಷರಾಗಿ ಎಲ್ಲಾ ವರ್ಗದ ಜನರಿಗೆ ಆಶ್ರಯವನ್ನು ನೀಡುತ್ತಾ ಬಂದಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸೇವಾ ಕಾರ್ಯಗಳಿಗೆ ತಂದೆ ಹೆಸರಿನಲ್ಲಿ ತಾಯಿ ಹೆಸರಿನಲ್ಲಿ ಬಹಳಷ್ಟು ನೆನಪು ಉಳಿಯುವ ಕಾರ್ಯವನ್ನು ಮಾಡಿದ್ದಾರೆ, ಆದಾಯಕ್ಕಿಂತ ಬಹು ಪಾಲನ್ನು ಸಮಾಜಕ್ಕೆ ನೀಡಿದ್ದಾರೆ. ಉಡುಪಿಯಲ್ಲಿ ನಡೆದ ಬಂಟರ ಸಮಾವೇಶಕ್ಕೆ ತಾಯಿಯ ಹೆಸರನ್ನು ವೇದಿಕೆಯನ್ನು ನಿರ್ಮಾಣ ಮಾಡಿ ಇಡೀ ಜಗತ್ತಿಗೆ ತಾಯಿಯ ಹೆಸರನ್ನು ಪಸರಿಸಿದ್ದಾರೆ . ತಾಯಿಯ ಅಂತಿಮ ಕ್ಷಣದಲ್ಲೂ ಕೂಡ ಅವರೊಟ್ಟಿಗಿದ್ದು. ಮಗನಾಗಿ ಮಾಡುವ ಎಲ್ಲಾ ಸೇವೆಗಳನ್ನು ಪ್ರವೀಣ್ ಭೋಜ ಶೆಟ್ಟಿ ಅವರು ತಾಯಿಗೆ ಸಮರ್ಪನ ಭಾವದಿಂದ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕೂಡ ಬಹಳಷ್ಟು ಜನ ಮುಂಬೈಯ ಅವರು ಸೇರಿಕೊಂಡಿದ್ದಾರೆ, ಇಂದು ಕೂಡ ಮುಂಬೈಯ ಸಮಾಜ ಬಾಂಧವರು ಅಪಾರ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ. ನಳಿನ ಶೆಟ್ಟಿ ಯುವರು ಅವರ ಆಶೀರ್ವಾದ ಇಡೀ ಸಮುದಾಯಕ್ಕೆ ವಿರಲಿ ಎಂದು ನುಡಿದರು,

ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ ತಂದೆ ತಾಯಿ ಆಶೀರ್ವಾದದಿಂದಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಬಂಟರ ಸಂಘ ಮುಂಬೈಯ ಅಧ್ಯಕ್ಷರಾಗಿ ಸೇವೆ ಮಾಡುವ ನಳಿನ ಪೂಜಾ ಶೆಟ್ಟಿಯವರ ಮಗ ಭಾಗ್ಯ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಲಭಿಸಿದೆ. ಸಮಾಜದಲ್ಲಿ ನಿರ್ಗತಿಕರಾಗಿರುವವರಿಗೆ ಆಶ್ರಯ ನೀಡುವ ಉದ್ದೇಶದಿಂದ 6 ಎಕರೆ ಪ್ರದೇಶದಲ್ಲಿ ಆಶ್ರಮ ಮಾಡುವ ಉದ್ದೇಶ ಪ್ರವೀಣ್ ಶೆಟ್ಟಿ ಇಲ್ಲಿದೆ. ಸಂಪತ್ತು ಬಾಳ ಜನರಲ್ಲಿದೆ ಆದರೆ ಸಮಾಜಕ್ಕೆ ನೀಡುವ ಉದ್ದೇಶ ಜನರಲ್ಲಿ ಕಡಿಮೆ ಇದೆ ತಂದೆ ತಾಯಿ ಹೆಸರೆಯಾದ ಮಾರ್ಗದರ್ಶನ ನೀಡಿದರೆ ಮಾತ್ರ ಮಗ ಉನ್ನತ ಮಟ್ಟದಲ್ಲಿ ಸಮಾಜ ಸೇವೆ ಮಾಡಲು ಸಾಧ್ಯ ಎಂದು ನುಡಿದರು.
ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಸೇರಿಕೊಂಡವರಿಗೆ ಕೃತಜ್ಞತೆಗಳು ಹೇಳುತ್ತಾ. ಮಗನಾಗಿ ತಾಯಿಯ ಎಲ್ಲಾ ಸೇವೆಗಳನ್ನು ಮಾಡಿದ್ದೇನೆ ಅಮ್ಮನ ಆತ್ಮ ಪರಮಾತ್ಮ ಸನ್ನಿಧಿಗೆ ಸೇರುವ ದಿನ ಪವಿತ್ರವಾಗಿದೆ ಕಾಪು ಅಮ್ಮನಿಗೆ ಬ್ರಹ್ಮ ಕಳಸ, ಇಂದು ಸೋಮವಾರ ಎಲ್ಲೂರಿನ ಶ್ರೀ ದೇವರಿಗೆ ಅತಿಪ್ರಿಯವಾದ ದಿನವಾಗಿದೆ ಇಂತಹ ಪವಿತ್ರ ದಿನ ವಾಗಿದೆ ಎಂದು,

ಈ ಸಂದರ್ಭದಲ್ಲಿ ಪುತ್ರರಾದ ಪ್ರವೀಣ್ ಭೋಜ ಶೆಟ್ಟಿ, ಸುಧೀರ್ ಶೆಟ್ಟಿ , ಮಗಳು ವನಿತಾ ಸುಧಾಕರ್ ಶೆಟ್ಟಿ, ಸೊಸೆ ನೈನಿತ ಪಿ ಶೆಟ್ಟಿ, ಮೊಮ್ಮಕ್ಕಗಳ,ಹಾಗೂ ಅಪಾರ ಬಂಧುಗಳು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು, ಜೊತೆ ಕೋಶಾಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ, ಎಸ್ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಡಾ. ಪಿ ವಿ ಶೆಟ್ಟಿ, ಹೇರಂಬ ಕೆಮಿಕಲ್ಸ್ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ. ಬಂಟರ ಸಂಘ ಮುಂಬೈಯ ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಧ್ಯಕ್ಷರು ಪದಾಧಿಕಾರಿಗಳು ಮಹಿಳಾ ವಿಭಾಗದ ಪದಾಧಿಕಾರಿಗಳು, ಮುಂಡಪ್ಪ ಪೈಯಾಡೆ. ಸಿಎ ಹರೀಶ್ ಶೆಟ್ಟಿ .ರವೀಂದ್ರನಾಥ್ ಭಂಡಾರಿ. ಚಂದ್ರಶೇಖರ್ ಸುಬ್ಬಯ್ಯ ಶೆಟ್ಟಿ. ಸುರೇಶ್ ಎಲ್ ಶೆಟ್ಟಿ . ಬಾಬು ಶೆಟ್ಟಿ ಪೆರಾರ. ಎಕ್ಕಾರು ಆನಂದ ಶೆಟ್ಟಿ. ಸುರೇಶ್ ಶೆಟ್ಟಿ ನವಿ ಮುಂಬೈ. ಜಯರಾಮ್ ಶೆಟ್ಟಿ .ಲತಾ ಜಯರಾಮ್ ಶೆಟ್ಟಿ. ನಿತ್ಯಾನಂದ ಹೆಗ್ಡೆ. ಭಾಸ್ಕರ್ ಶೆಟ್ಟಿ ಕಾಂದೇಶ್ ಶೆಟ್ಟಿ .ಕೊಂಡಾಡಿ ಪ್ರೇಮನಾಥ್ ಶೆಟ್ಟಿ. ಆದರ್ಶ ಶೆಟ್ಟಿ. ಗಣೇಶ್ ಶೆಟ್ಟಿ ಐಕಳ.ದಿವಾಕರ್ ಶೆಟ್ಟಿ ಕುರ್ಲಾ. ಭಾಸ್ಕರ್ ಶೆಟ್ಟಿ ತಾಳಿಪಾಡಿ. ಅಂಗಡಿಗುತ್ತು ಪ್ರಸಾದ್ ಶೆಟ್ಟಿ. ನವಿ ಮುಂಬೈ ಸಂತೋಷ್ ಶೆಟ್ಟಿ ಅಧ್ಯಪಾಡಿ. ಬಾಲಕೃಷ್ಣ ಶೆಟ್ಟಿಯಂತೆ ಪಾಡಿ. ಅಶೋಕ್ ಅಡ್ಯಂತ್ಾಯ. ನ್ಯಾಯವಾದಿ ಆರ್ ಜಿ ಶೆಟ್ಟಿ. ಹರೀಶ್ ಹೆಜ್ಮಡಿ. ಬೆಲ್ಲಂಪಳ್ಳಿಬಾಲಕೃಷ್ಣ ಹೆಗ್ಡೆ ಮತ್ತಿತರರು ಉಪಸ್ಥಿರಿದ್ದರು
ಕಾರ್ಯಕ್ರಮವನ್ನು ನಮ್ಮ ಟಿವಿ ನಿರೂಪ ನವೀನ್ ಶೆಟ್ಟಿ ನಿರೂಪಿಸಿದರು. ವಿಜಯ್ ಶೆಟ್ಟಿ ಮೂಡುಬೆಳ್ಳೆ ಅವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು
———-
Show quoted text