September 6, 2026
Mumbai News Kannada
ಸುದ್ದಿ

ಮಣ್ಣಿನ ಮಗನ ಜಾಗತಿಕ ಗರ್ಜನೆ: ಆಸ್ಕರ್ ಅಂಗಳಕ್ಕೆ ‘ಕಾಂತಾರ ಚಾಪ್ಟರ್ ಒನ್’ ಲಗ್ಗೆ





ಆಸ್ಕರ್ ಅಂಗಳಕ್ಕೆ ಕಾಂತಾರ ಚಾಪ್ಟರ್ ಒನ್ ಕಾಲಿಟ್ಟಿದೆ. ಈ ಒಂದು ವಿಷಯವೇ ಇದೀಗ ಹೆಮ್ಮೆ ಪಡುವಂತೆ ಆಗಿದೆ. ಕಾಂತಾರ ಚಾಪ್ಟರ್ ಒನ್ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಥಾನ ಪಡೆದಿದೆ ಅಂತ ಹೊಂಬಾಳೆ ಸಂಸ್ಥೆನೂ ಖುಷಿಯಿಂದಲೇ ಹೇಳಿಕೊಂಡಿದೆ
ಈ ಒಂದು ವಿಚಾರವನ್ನ ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾದ ತಮ್ಮ ಅಧಿಕೃತ ಪೇಜ್ ಅಲ್ಲಿಯೇ ಇದನ್ನ ಪೋಸ್ಟರ್ ಸಮೇತ ಹೇಳಿಕೊಂಡಿದೆ. ಹಾಗೆ ಈ ವಿಷಯವನ್ನ ಇಂಗ್ಲಿಷ್ ಅಲ್ಲೂ ಹೀಗೆ ಬರೆದುಕೊಂಡಿದೆ.
‘ಕಾಂತಾರ ಚಾಪ್ಟರ್‌ – 1 ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್‌ನಲ್ಲಿ ಜಾಗ ಮಾಡಿಕೊಂಡು ಆಸ್ಕರ್ ವಿಭಾಗದಲ್ಲಿ ಪರಿಗಣನೆಗೆ ಒಳಪಟ್ಟಿರುವುದು ಸಂತಸದ ಸಂಗತಿ.

ಈವರೆಗೆ ಭಾರತದ ಕೆಲ ಡಾಕ್ಯುಮೆಂಟರಿ, ಶಾರ್ಟ್‌ ಫಿಲ್ಮ್‌ಗಳಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಫೀಚರ್ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆಯಲು ಫಿಲ್ಮ್ ಮೇಕರ್ಸ್ ಪ್ರಯತ್ನಿಸುತ್ತಲೇ ಇದ್ದಾರೆ. ಭಾರತದಲ್ಲಿ ನಿರ್ಮಾಣವಾದ ಯಾವುದೇ ಚಿತ್ರಕ್ಕೆ ಆಸ್ಕರ್ ಸಿಕ್ಕಿಲ್ಲ.

ಈ ಮೊದಲು ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ದಾಖಲೆ ಬರೆದಿತ್ತು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಕೆ ಮಾಡಿ ರೇಸ್​​ನಲ್ಲಿ ಈ ಹಾಡು ಸ್ಥಾನ ಪಡೆದುಕೊಂಡಿತ್ತು. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ನಿರ್ದೇಶನ ಮಾಡಿ, ನಟಿಸಿದ್ದಾರೆ. ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ. ʻಕಾಂತಾರ ಚಾಪ್ಟರ್-1‌ʼ ಸಿನಿಮಾ ಆಸ್ಕರ್ ಅಂತಿಮ ನಾಮಿನೇಷನ್ ಪಟ್ಟಿಗೆ ಎಂಟ್ರಿ ಕೊಟ್ಟರೂ ಅದು ಒಂದು ದೊಡ್ಡ ಸಾಧನೆಯೇ ಸರಿ.



Related posts

ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರಿಗೆ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿ.

Mumbai News Desk

ಯಕ್ಷಗಾನ ಕಲಾವಿದ, ಹಾಸ್ಯ ಚಕ್ರವರ್ತಿ, ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

Mumbai News Desk

ಕವಿ ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯೋತ್ಸವ: ಅನಿತಾ ಪಿ ತಾಕೊಡೆ ಅವರ ಪ್ರಶಸ್ತಿ ವಿಜೇತ ‘ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಲೋಕಾರ್ಪಣೆ, ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ದ್ವಮ್ದ್ವ’ ಕನ್ನಡ ಕಲಾತ್ಮಕ ಚಿತ್ರ ಬಿಡುಗಡೆ – ಪತ್ರಕರ್ತರಿಗೆ ವಿಶೇಷ ಪ್ರದರ್ಶನ

Mumbai News Desk

ಇಂದು ಮಧ್ಯಾರಾತ್ರಿಯಿಂದ ಮಹಾರಾಷ್ಟ್ರ ಸಾರಿಗೆ ಒಕ್ಕೂಟಗಳ ರಾಜ್ಯಾದ್ಯಂತ ಮುಷ್ಕರ: ಇ-ಚಲನ್ ಮತ್ತು ತೆರಿಗೆ ನೀತಿಗಳ ವಿರುದ್ಧ ಪ್ರತಿಭಟನೆ

Mumbai News Desk

ಮುಂಬೈ : ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಗುಂಡಿನ ದಾಳಿ

Mumbai News Desk