33.1 C
Karnataka
April 1, 2025
ತುಳುನಾಡು

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಸೋತ್ಸವ, ಧಾರ್ಮಿಕ ಸಭೆ;

ಸಿಂಹದ ರೂಪದಲ್ಲಿ ಬಂದ ಮಾತೆ ಭಗವತಿಯ ಅಪ್ಪಣೆಯನ್ನು ಪೂರೈಸುವ ಪ್ರಯತ್ನ ಮಾಡಿದ್ದೆನೆ – ಕೃಷ್ಣ ಎನ್ ಉಚ್ಚಿಲ್

ವರದಿ : ಈಶ್ವರ ಎಂ. ಐಲ್

ಮಂಗಳೂರು : ಹದಿನೈದು ವರ್ಷಗಳ ಹಿಂದೆ ಕಂಡ ಕನಸು. ಕನಸಲ್ಲಿ ಸಿಂಹದ ರೂಪದಲ್ಲಿ ಬಂದ ಮಾತೆ ಭಗವತೀ ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ, ಸುಮಾರು ೬೦೦ ವರ್ಷಗಳ ಹಿಂದೆ ಅನ್ಯರ ದಾಳಿಯಿಂದಾಗಿ ಸಂಪೂರ್ಣ ನಾಶ ಹೊಂದಿದ್ದ ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಜೀರ್ಣೋದ್ದಾರವನ್ನು ಎಷ್ಟೇ ಕಷ್ಟ ನಷ್ಟ ಬಂದರೂ ಮಾತೆಯ ಆಪ್ಪಣೆ ಯಂತೆ ಮುಂದಿಟ್ಟ ಕಾಲನ್ನು ಹಿಂದಿಡದೆ ಜಾತಿ ಬಾಂಧವರ ಹಾಗೂ ಊರಿನ ಎಲ್ಲಾ ಭಕ್ತಾಭಿಮಾನಿಗಳ ಸಹಾಯದಿಂದ ಮಾತೆಯ ಆಶೀರ್ವಾದದಿಂದ ಜೀರ್ಣೋದ್ದಾರ ಮಾಡಿದ್ದೇವೆ ಎಂದು ಮುಂಬಯಿಯ ಉದ್ಯಮಿ, ಕ್ಷೇತ್ರದ ಅಧ್ಯಕ್ಷರೂ ಆದ ಕೃಷ್ಣ ಎನ್ ಉಚ್ಚಿಲ್ ನುಡಿದರು.   

ಬಂಟ್ವಾಳ ತಾಲೂಕು ಅಳಿಕೆ ಸಮೀಪ ಸಿಂಹಮೂಲೆ ಎರುಂಬು ಎಂಬಲ್ಲಿನ  ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಸಂಪೂರ್ಣ ಜೀರ್ಣೊದ್ದಾರ ಮಾಡಿ ಮಾ. 16ರಂದು ಜರಗಿದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ  ಅವರು ಈ ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ನನಗೆ ಸಿಕ್ಕಿದ ಎಲ್ಲಾ  ಗೌರವ ಸನ್ಮಾನವನ್ನು ಕಳದ ಹದಿನೈದು ವರ್ಷಗಳಿಂದ ಕ್ಷೇತ್ರದ ಜೋರ್ಣೋದ್ದಾರಕ್ಕಾಗಿ ರಾತ್ರಿ ಹಗಲೆನ್ನದೆ ದುಡಿದ ಎಲ್ಲರಿಗೂ ಅರ್ಪಿಸುತ್ತಿರುವೆನು ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಅವರು ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಕಡೆಮೆಯಾಗಿದ್ದು ತುಳಸಿಯಂತೆ ದೇವರಿಗೆ ಹತ್ತಿರವಾಗುರುವ ಕೃಷ್ಣ ಎನ್ ಉಚ್ಚಿಲ್ ಅವರು ಭಗವತಿಯ ಅಪ್ಪಣೆಯಂತೆ ಸಮಾಜಕ್ಕೆ ಅರ್ಪಿಸಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು.

ಡಾ. ಜಿ. ಪಿ. ಮೊಗಶಾಲೆಯವರು ಧಾರ್ಮಿಕ ಉಪನ್ಯಾಸ ನೀಡಿದರು.

ತೀಯಾ ಸಮಾಜ ಮುಂಬಯಿಯ ಟ್ರಷ್ಟಿ ಡಾ. ದಯಾನಂದ ಕುಂಬ್ಳೆ, ಸಮಾಜದ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಮುಂಬಯಿಯ ಸಿ.ಎ. ರಾಧೇಶ್ ನಾಯರ್ ಮೊದಲಾದವರು ಮಾತನಾಡಿದರು.

ವೇದಿಕೆಯಲ್ಲಿ ಜಗಜೀವನ್ ರಾಮ್ ಶೆಟ್ಟಿ,  ಯತೀಂದ್ರನಾಥ ಪುತ್ತೂರು, ಮಲೈಕಾ ಗ್ರೂಪಿನ  ಇರ್ದೇಶಕ ಸುಶಾಂತ್, ಮುಂಬಯಿಂದ ಆಗಮಿಸಿದ ಸಮಾಜ ಸೇವಕ ತಿಮ್ಮಪ್ಪ ಬಂಗೇರ, ತೀಯಾ ಸಮಾಜದ ಮಾಜಿ ಕೋಶಾಧಿಕಾರಿ ರಮೇಶ್ ಉಳ್ಳಾಲ್, ಪದ್ಮನಾಭ ಕರ್ಕೇರ, ಚಂದ್ರಿಕಾ ಕೃಷ್ಣ ಉಚ್ಚಿಲ್, ತೀಯಾ ಸಮಾಜದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಶಾಲತಾ ಉಳ್ಳಾಲ್, ಶಶಿಪ್ರಭಾ ಬಂಗೇರ, ಸವಿತಾ ಶೆಟ್ಟಿ, ಸರಸ್ವತಿ ಬಜ್ಪೆ, ತೀಯಾ ಸಮಾಜ ದುಬಾಯಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತ ಈಶ್ವರ ಎಂ. ಐಲ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೆತ್ರದಲ್ಲಿ ಸಾಧನೆಗೈದ ಸಾಧರಗನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ದೇವಸ್ಥಾನದ ಸಮಿತಿಯ  ಉಪಾಧ್ಯಕ್ಷರುಗಳಾದ ಡಾ. ಗಂಗಾಧರ ಬನಾರಿ, ಶ್ರೀಧರ ಅಳಿಕೆ ಎಂ. ಎ., ಜಯಂತಿ ಸತೀಶ್ ಉಕ್ಕುಡ, ಪ್ರಧಾನ ಕಾರ್ಯದರ್ಶಿ  ನ್ಯಾ. ಮೋನಪ್ಪ ಎಂ., ಕೋಶಾಧಿಕಾರಿ ಚಂದ್ರಶೇಖರ ಮಡಿಯಾಲ, ಕಾರ್ಯದರ್ಶಿಗಳಾದ ನವೀನ್ ಕನತ್ತಡ್ಕ, ಸವಿತಾ ಚಂದ್ರಶೇಖರ್, ಶರತ್ ಚಂದ್ರ ಮಡಿಯಾಲ, ಬ್ರಹ್ಮಕಲಸೋತ್ಸವ ಗೌರವಾಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳೂ, ಗೌರವ ಸಲಹೆಗಾರರು, ಯುವಜನ ಸಂಘ, ಮಾತೃ ಮಂಡಳಿ, ಭಜನಾ ಮಂಡಳಿ, ತೀಯಾ ಲಿಟಲ್ ಟೈಗರ್ಸ್ ಹಾಗೂ ಇತರ ಸದಸ್ಯರು ಉಪಸ್ಥಿತಿತರಿದ್ದು ಸಹಕರಿಸಿದರು. 

ಬ್ರಹ್ಮಕಲಶ ಸಮಾರಂಭದಲ್ಲಿ ತೀಯಾ ಸಮಾಜ ಮುಂಬಯಿಯ ಸದಸ್ಯರುಗಳು ನೂರಾರು ಸಂಖ್ಯೆಯಲ್ಲಿ ಬಾಗವಹಿಸಿದರು. ಕರಾವಳಿಯ ಎಲ್ಲಾ ಅದಿನೆಂಟು ಭಗವತೀ ಕ್ಷೆತ್ರಗಳ ಸಮಿತಿಯ ಸದಸ್ಯರು, ಆಚಾರಪಟ್ಟವರು ಹಾಗೂ ಭಕ್ತಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

Related posts

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಮಹಾ ಸಂಕಲ್ಪದ 19ನೇ ದಿನ – ಕಾಪು ಶ್ರೀ ಹಳೆ ಮಾರಿಗುಡಿಗೆ ಪ್ರದಕ್ಷಿಣೆ.

Mumbai News Desk

ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಅನಂದ ಶೆಟ್ಟಿ ಎಕ್ಕಾರ್ ಕುಟುಂಬಿಕರಿಂದ ಡಕ್ಕೆಬಲಿ ಸೇವೆ

Mumbai News Desk

ಅದ್ಧೂರಿಯಾಗಿ ನಡೆದ ಮಂಗಳೂರು ದಸರಾ; ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ

Mumbai News Desk

ಶ್ರೀ ಶಂಕರಪುರ ಕ್ಷೇತ್ರದಲ್ಲಿ ವಿಶ್ವ ಹಸಿವು ದಿನಾಚರಣೆ – ಶ್ರೀ ಸಾಯಿ ತುತ್ತು ಯೋಜನೆ *ರಾಜ್ಯದೆಲ್ಲೆಡೆ ವಿಸ್ತರಿಸುವ ಸಂಕಲ್ಪ: – ಶ್ರೀ ಸಾಯಿಈಶ್ವರ್ ಗುರೂಜಿ

Mumbai News Desk

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Mumbai News Desk

ಮಲ್ಪೆ- ಕಡಲ ಮಕ್ಕಳಿಂದ ಸಂಭ್ರಮದ ಸಮುದ್ರ ಪೂಜೆ.

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ