36.8 C
Karnataka
March 29, 2025
ಪ್ರಕಟಣೆ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಜೋಡು ಜೀಟಿಗೆ ನಾಟಕ : ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಕಾರ್ಯಕ್ರಮ

ದಕ್ಷಿಣ ಕನ್ನಡದ ಮೊದಲ ಮಹಿಳಾ ಸಾರಥ್ಯದ ತಂಡ

ಮಂಗಳೂರು : ಮಸ್ಕಿರಿ ಕುಡ್ಲ ಅರ್ಪಿಸುವ ತುಳು ರಂಗಭೂಮಿಯಲ್ಲಿ ವಿಶೇಷ ರೀತಿಯಾ ರಂಗಪ್ರಯೋಗದಲ್ಲಿ ಮಿನುಗುತ್ತಿರುವ ಈ ವರ್ಷದ ಸೂಪರ್ ಹಿಟ್ ನಾಟಕ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಅರ್ಪಣೆ ಮಾಡುವ ಎರಡನೇ ಕಲಾಕಾಣಿಕೆ ಜೋಡು ಜೀಟಿಗೆ ನಾಟಕದ 25ನೇ ಅದ್ದೂರಿ ಪ್ರದರ್ಶನ ಮಂಗಳೂರಿನ ಪುರಭವನದಲ್ಲಿ ಇದೇ ಬರುವ ತಾರೀಕು ಮಾರ್ಚ್ 23, 2025, ಭಾನುವಾರ ಸಂಜೆ 5:30ಕ್ಕೆ ನಡೆಯಲಿದೆ.

ತುಳು ರಂಗಭೂಮಿಯ ಇತಿಹಾಸದಲ್ಲಿ ಅದ್ಭುತ ಸಾಧನೆಯೊಂದಕ್ಕೆ ಸಾಯಿಶಕ್ತಿ ಕಲಾ ಬಳಗ ಮುನ್ನುಗ್ಗಿದೆ ಈ ನಾಟಕವು ಮುಂಬಯಿ ಮತ್ತು ಉಡುಪಿ ಮತ್ತು ಕಾಸರಗೋಡಿನಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳುವ ಮೂಲಕ ವಿಶಿಷ್ಟ ಸಾಧನೆ ಮಾಡಿದೆ.

ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್ ಇವರ ನಿರ್ಮಾಣ ಮತ್ತು ನಿರ್ದೇಶನದ ಶ್ರೀಯುತ ಕೀರ್ತನ್ ಭಂಡಾರಿ ಕುಲಾಯಿ ರಚನೆಯ,ಗೌರವ್ ಶೆಟ್ಟಿಗಾರ್ ಮಠದಕಣಿ ಇವರ ನಿರ್ವಹಣೆಯಲ್ಲಿ ನಾಟಕ ಮೂಡಿ ಬರಲಿದೆ.

ಕಾರ್ಯಕ್ರಮದ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್, ಶ್ರೀ ಶಿರಡಿ ಸಾಯಿಬಾಬ ಮಂದಿರ, ಚಿಲಿಂಬಿಯ ಟ್ರಸ್ಟಿ ಶ್ರೀ ವಿಶ್ವಾಸ್ ಕುಮಾರ್ ದಾಸ್ ,
ಜ್ಯೋತಿಷ್ಯರಾದ ಶ್ರೀ ಎಚ್. ಟಿ. ರಾಧಕೃಷ್ಣ ಶಾಸ್ತ್ರಶ್ರೀ, ಶ್ರೀಮತಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಮುಂಬಯಿ, ಕುದ್ರೋಳಿ ಭಗವತಿ ಕ್ಷೇತ್ರ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀ ಉಷಾ ಪ್ರಭಾಕರ್ ಯೆಯ್ಯಾಡಿ, ಹಿಂದುಳಿದ ವಿಭಾಗ ಕಾಂಗ್ರೆಸ್ ಉಳ್ಳಾಲ ಇದರ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ ಕುಂಪಲ, ಅಸ್ತ್ರ ಗ್ರೂಪ್ ಇದರ CEO, CATCA ಪ್ರೆಸಿಡೆಂಟ್, ಶ್ರೀ ಲಂಚುಲಾಲ್ ಕೆ.ಎಸ್, ಒಡಿಯೂರು ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ
ಶ್ರೀ ಗಣೇಶ್ ಅತ್ತಾವರ, ಶ್ರೀ ದಿನೇಶ್ ಕುಲಾಲ್, ಅಧ್ಯಕ್ಷರು, ಶ್ರೀ ವೆಂಕಟೇಶ ಭಜನಾ ಮಂದಿರ, ಬೋಳೂರು, ಶ್ರೀ ಚಿದಾನಂದ ಕೆದಿಲಾಯ, ವಕೀಲರು, ಶ್ರೀ ಲೋಕಯ್ಯ ಶೆಟ್ಟಿಗಾರ್, ಮಾಲಕರು, ಭವಾನಿ ಕೇಟರರ್ಸ್ ಇವರು ಪಾಲ್ಗೊಳ್ಳಲಿದ್ದಾರೆ.

ಸನ್ಮಾನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಖ್ಯಾತ ರಂಗ ನಟ, ಲೇಖಕ ಹಾಗೂ ನಿರ್ದೇಶಕ ಶ್ರೀ ಸುಧೀರ್ ರಾಜ್ ಉರ್ವ ಮತ್ತು ಪ್ರಖ್ಯಾತ ಸಂಗೀತ ನಿರ್ದೇಶಕ ಬಿ.ಎಸ್. ಕಾರಂತ್ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಉಚಿತ ಪ್ರವೇಶ:
ಈ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಉಚಿತ ಪ್ರವೇಶವನ್ನು ನೀಡಲಾಗಿದ್ದು, ಎಲ್ಲಾ ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಪರೂಪದ ಕಲಾ ಕೃತಿಯನ್ನು ಅನುಭವಿಸುವಂತೆ ವಿನಂತಿದ್ದಾರೆ.

Related posts

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk

ಜ‌ 5, ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಮುಂಬಯಿ, 42 ವರ್ಷದ ಮಹಾಪೂಜೆ ಇರುಮುಡಿ ಸೇವೆ

Mumbai News Desk

ಶ್ರೀ ಮಂತ್ರ ದೇವಿ ಚಾರಿಟೇಬಲ್ ಟ್ರಸ್ಟ್, ಸಾಂತಾಕ್ರೂಸ್: ಡಿ  26 ರಂದು  ವಾರ್ಷಿಕ  ಮಹಾಪೂಜೆ.

Mumbai News Desk

ಅಂದೇರಿ  :ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk

ನ.19 ರಂದು ಪುಣೆಯಲ್ಲಿ ಸುವರ್ಣಯುಗ ಪುಸ್ತಕ ಬಿಡುಗಡೆ, ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರುಗಳಿಗೆ ಸನ್ಮಾನ

Mumbai News Desk