ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇವೆ. ಆರಂಭದಲ್ಲಿ ಮಧ್ಯದ ಬೆಲೆ ನಂತರ ಸಾರಿಗೆ ಬಸ್ ಪ್ರಯಾಣ, ಹಾಲಿನ ದರ, ನಮ್ಮ ಮೆಟ್ರೋ ದರ ಇದೀಗ ವಿದ್ಯುತ್ ದರ ಹೆಚ್ಚಳ ಮಾಡಿ ಜನರಿಗೆ ಮತ್ತೆ ಶಾಕ್ ನೀಡಿದೆ.
ಕೆಇಆರ್ಸಿ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿದ್ದು, ಏಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ಸರಕಾರವು ಗ್ರಹ ಜ್ಯೋತಿ ಯೋಜನೆಯ ಮೂಲಕ 200 ಯುನಿಟ್ ವಿದ್ಯುತ್ ಉಚಿತ ಕೊಟ್ಟಿದ್ದು, 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ.
ಕರ್ನಾಟಕ ಸರ್ಕಾರವು ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ನೌಕರರು, ಸಿಬ್ಬಂದಿಗೆ ವೇತನ, ಪಿಂಚಣಿ, ಗ್ರಾಚುಟಿಗೆ ಹಣ ಹೊಂದಿಸಲು ದರ ಹೆಚ್ಚಿಸಿ ಜನರಿಂದ ಹಣ ವಸೂಲಿಗೆ ಮುಂದಾಗಿದೆ ಎಂದು ಸಾರ್ವಜನಿಕರು, ವಿಪಕ್ಷ ನಾಯಕರು ದೂರಿದ್ದಾರೆ.
ರಾಜ್ಯ ಸರ್ಕಾರ ಒಂದು ಕಡೆ ಉಚಿತ ಕರೆಂಟ್ ನೀಡುವುದಾಗಿ ಘೋಷಿಸಿದೆ ಮತ್ತೊಂದು ಕಡೆ ರಾಜ್ಯ ಲೋಕಾಪಯೋಗಿ ಇಲಾಖೆ ಬರೋಬ್ಬರಿ 8000 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ, ಹೀಗಾಗಿಯೇ ಸರಕಾರ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನರಿಗೆ ದರ ಏರಿಕೆ ಬರ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸರಕಾರದ ವಿರುದ್ಧ ಕಿಡಿ ಕಾರಿದರು.